ಪುಟ:ಅಶೋಕ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ೪೭ MrMow سرمر ميفهمم MM. ಅಶೋಕನು ಬಾಲ್ಯದಿಂದಲೂ ಬೇಟೆಗೆ ಮೆಚ್ಚಿದವನು. ಮೌರ್ಯರಾಜರ ಮೃಗಯಾ*ವಿಹಾರವು ಒಂದು ಅಪೂರ್ವವಾದ ಸಂಗತಿಯೆಂದು ಗ್ರೀಕ ಐತಿಹಾಸಿಕರು ಹಲವು ರೀತಿಯಿಂದ ವರ್ಣಿಸಿರುತ್ತಾರೆ. ಅವರು ಬೇಟೆಗೆ ಹೊರಡಲು ನೂರಾರು ಜನ ರಮಣಿಯರು ಅವರ ಸಂಗಡ ಹೋಗುತ್ತಿದ್ದರು. ಆ ರಮಣಿಯರ ಸುತ್ತಲು ಸಶಸ್ತ್ರ ರಾದ ಸೈನಿಕರು ಸಾಲಾಗಿ ನಡೆಯುವರು. ಅರಸನು ಈ ಮೇರೆಗೆ ಅನುಚರರೊಡನೆ ಹೊರಡುವ ಮಾರ್ಗವ ಹಗ್ಗ ದಿಂದ ಗುರುತಿಸಲ್ಪಡುವದು, ಗಂಡಸೇ ಆಗಲಿ, ಹೆಂಗಸೇ ಆಗಲಿ, ಆ ಗುರುತಿಸಿದ ಮಾರ್ಗದಲ್ಲಿ ಕಾಲಿಟ್ಟರೆ ಕೂಡಲೆ ಅವರಿಗೆ ದೇಹಾಂತಶಿಕ್ಷೆ ಯಾಗುತ್ತಿತ್ತು. ಈ ಮೃಗಯಾ ಯಾತ್ರೆಯಲ್ಲಿ ಎಲ್ಲಕ್ಕೂ ಮುಂದೆ ವಾದ್ಯಕಾರರು ಢಕ್ಕೆ ಘಂಟೆ ಮೊದಲಾದ ವಾದ್ಯಗಳನ್ನು ಬಾರಿಸುತ್ತ ಸಾಗುವರು. ಅರಸನು ಒಮ್ಮೊಮ್ಮೆ ಎತ್ತರವಾದ ಮಂಚಿಕೆಯ ಮೇಲೆ ನಿಂತು ಗುರಿಯಿಟ್ಟು ಬಾಣವ ಹೊಡೆಯುವನು. ಅವನ ಪಕ್ಕಗಳಲ್ಲಿ ಸಶಸ್ತ್ರರಾದ ರಮಣಿಯರು ನಿಲ್ಲುವರು. ಒಮ್ಮೊಮ್ಮೆ ಅನೆಯಿಂದ ಇಳಿದು ಕೆಳಗೆ ನಿಂತು ಗುರಿಹೊಡೆಯವನು. ರಮಣಿಯರಲ್ಲಿ ಕೆಲವರು ರಥಗಳಲ್ಲಿ, ಕೆಲವರು ಕುದುರೆಗಳ ಮೇಲೆ ಕೆಲವರು ಆನೆಗಳ ಮೇಲೆ ಕುಳಿತು ಯುದ್ಧಕ್ಕೆ ಸಜ್ಜಾಗಿ ರುವಂತೆ ಹಲವು ತರದ ಆಯುಧಗಳಿಂದ ಯಾವಾಗಲು ಸಜ್ಜಾಗಿರುತ್ತಿದ್ದರು. ಈ ಪ್ರಕಾರದ ಮಹಾಸಮಾರಂಭದಿಂದ ಅಶೋಕನು ಬೇಟೆಗೆ ಹೊರಡುತ್ತಿದ್ದನು. ಈ ಮೃಗಯಾಸಕ್ತಿಯು ಮೌರ್ಯವಂಶಪ್ರತಿಷ್ಠಾಪಕನಾದ ಚಂದ್ರಗುಪ್ತ ಮಹಾರಾ ಜನ ಕಾಲದಿಂದ ನಡೆದುಬಂದಿತ್ತೆಂದು ಹಲವು ಗ್ರಂಥಗಳಲ್ಲಿ ಉಲ್ಲೇಖವುಂಟು. ಅಶೋಕನು ಬಾಲ್ಯದಲ್ಲಿ ಕುರೂಪಿಯಾಗಿದ್ದನೆಂದು ಹಿಂದೆ ಹೇಳಿದೆಯಷ್ಟೇ. ಶರೀರಸೌಂದರ್ಯವಿಲ್ಲದುದರಿಂದ ಆತನು ತಂದೆಯ ಪ್ರೀತಿಗೆ ಪಾತ್ರವಾಗಿರಲಿಲ್ಲವೆಂದೂ ಅದರಿಂದ ಬಿಂದುಸಾರರಾಜನು ಉಳಿದ ರಾಜಪುತ್ರರೊಡನೆ ಈತನನ್ನು ತಿರುಗಾಡಗೊಡು ತಿರಲಿಲ್ಲವೆಂದೂ ಪ್ರವಾದವುಂಟು, ಆದರೆ ಇದರಿಂದ ಅಶೋಕನ ಪಿತೃಭಕ್ತಿಯು ಸ್ವಲ್ಪವೂ ಕಡಿಮೆಯಾಗಿರಲಿಲ್ಲ. ಆತನು ಯಾವಾಗಲು ತಂದೆಯ ಅಪ್ಪಣೆಯನ್ನು ವಿಶ್ವಾ ಸದಿಂದ ಪಾಲಿಸುತ್ತಿದ್ದನು, ರಾಜ್ಯದ ದೂರದೂರದ ಭಾಗಗಳಲ್ಲಿ ದಂಗೆಗಳೆದ್ದರೆ ಅವು ಗಳನ್ನ ಡಗಿಸುವ ಕೆಲಸವ ಅಶೋಕನ ಪಾಲಿಗೇ ಬರುತ್ತಿತ್ತು, ಅಶೋಕನು ಕೂರ ನೂ, ಉದ್ದ ತನೂ, ಅತಿಶಯ ಸ್ವಾರ್ಥಪರನೂ ಆಗಿದ್ದನೆಂದು ಗ್ರಂಥಗಳಲ್ಲಿ ಉಲ್ಲೇಖ ವುಂಟು, ಆದರೆ ಬಾಲ್ಯದಲ್ಲಿ ಆತನಿಂದ ಅಂಧ ಕೃತಿಗಳು ಘಟಿಸಿದಂತೆ ಕಂಡುಬರುವ ದಿಲ್ಲ. ತಿರುಗಿ ನೋಡಿದರೆ ಆತನು ನೌಮ್ಯ ಸ್ವಭಾವದವನೇ ಇದ್ದನೆಂಬದಕ್ಕೆ ಬೇಕಾ ದಷ್ಟು ಆಧಾರಗಳು ದೊರೆಯುವವು, ರಾಜ್ಯದ ಮುಖ್ಯ ಮುಖ್ಯ ಅಧಿಕಾರಿಗಳೆಲ್ಲ ಅಶೋಕನಿಗೆ ಮನ್ನಣೆಯನ್ನು ಮಾಡುತ್ತಿದ್ದರು. ಆತನು ಜನಸಾಮಾನ್ಯಕ್ಕೂ ಅತಿ ಈ ಮುದ್ರಾರಾಕ್ಷಸವಲ್ಲಿ ನೋಡಿರಿ.