ಪುಟ:ಅಶೋಕ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ಲಿ ಅಶೋಕ ಅಥವಾ ಪ್ರಿಯದರ್ಶಿ •••••••••••••••••••••••••••••• vv ಪ್ರಿಯನಾಗಿದ್ದನು. ಅಶೋಕನ ಹೃದಯಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭಾಬೀಜವು ಬಾಲ್ಯದಲ್ಲಿಯೇ ಅಂಕುರಿತವಾಗಿ ಯೌವನದಲ್ಲಿ ಬಹಳ ಬೆಳವಣಿಗೆಯನ್ನು ಹೊಂದಿತು. ನಂದವಂಶದ ರಾಜರ ಕಾಲದಿಂದ ಮಗಧರಾಜ್ಯದ ಸಿಂಹಾಸನದ ವಿಷಯ ವಾಗಿ ಹಲವು ಕುತಂತ್ರಗಳು ನಡೆದಿದ್ದವು, ಶೂರನಾದ ಚಂದ್ರಗುಪ್ತನು ಆ ತಂತ್ರ ಗಳನ್ನೆಲ್ಲ ಭೇದಿಸಿ ಭರತಖಂಡದಲ್ಲಿ ಏಕಚ್ಚತ್ರಸಾಮ್ರಾಜ್ಯವನ್ನು ೦ಟುಮಾಡಿ ಮಗಧ ಸಿಂಹಾಸನವನ್ನು ಸ್ಥಿರವಾದ ತಳಹದಿಯಮೇಲೆ ಸ್ಥಾಪಿಸಿದ್ದನು. ಬಿಂದುಸಾರನ ಆಳಿಕೆಯಲ್ಲಿ ರಾಜ್ಯದಲ್ಲಿ ಸ್ವಲ್ಪವೂ ಅವ್ಯವಸ್ಥೆಯಿರಲಿಲ್ಲ. ಮೊದಲಿನಿಂದ ನಡೆದು ಬಂದಂತೆಯೇ ಅವನು ರಾಜ್ಯಭಾರವನ್ನು ಸಾಗಿಸಿದ್ದನು. ಆದರೂ ಅವನ ಆಳಿಕೆಯ ಕೊನೆಯ ಭಾಗದಲ್ಲಿ ತಕ್ಷಶಿಲೆಯಲ್ಲಿ ಒಂದು ದಂಗೆಯು ಎದ್ದಿತು. ತಕ್ಷಶಿಲೆಯ ಸ್ಥಾನವು ಬಹು ದಿವಸಗಳವರೆಗೆ ನಿಶ್ಚಿತವಾಗಿರಲಿಲ್ಲ. ಪ್ರಾಚೀನ ಪುಷ್ಕಲಾವತಿ ಇಲ್ಲವೆ ಹಸ್ತನಗರ ಎಂಬದರಿಂದ ಪೂರ್ವಕ್ಕೆ ೫೫ ಮೈಲಿನ ಮೇಲೆ ತಕ್ಷಶಿಲೆಯು ಇತ್ತೆಂದು ' ಸ್ಥಿನಿ 'ಯ ಅಭಿಪ್ರಾಯವು, ಇದು ನಿಜವಾಗಿದ್ದರೆ ಹರ ನದಿಯ ದಂಡೆಯಲ್ಲಿರುವ ಹಾಸನ್ ಅಬದಾಲಾ ( Hasanalyctala) ದ ಸಮೀಪದಲ್ಲಿ ತಕ್ಷಶಿಲೆಯು ಇರಬೇಕಾಗಿತ್ತು, ಆದರೆ ಕನಿಂಗ್‌ಹ್ಯಾಮ್ + ಮೊದಲಾದ ಇತಿಹಾಸ ಜ್ಞರು ಇದನ್ನು ಒಪ್ಪುವದಿಲ್ಲ. ಫಾಹಿಯಾನ, ಸಂಗುನ, ಹುಯೆನ್ ತ್ಸಾಂಗ ಮೊದೆ ಲಾದ ಚೀನಪ್ರವಾಸಿಗಳು ಸಿಂಧುನದಿಯಿಂದ ಪೂರ್ವಕ್ಕೆ ಮೂರು ದಿವಸಗಳ ಹಾದಿ ಯನ್ನು ಸಾಗಿದ ಬಳಿಕ ಪ್ರಾಚೀನ ತಕ್ಷಶಿಲೆಯ ಅವಶೇಷವು ಹತ್ತುವದೆಂದು ಏಕಕಂಠ ವಾಗಿ ಹೇಳಿರುತ್ತಾರೆ. ಇದು ನಿಜವಿದ್ದರೆ ( ಕಾಲಕಾಸರಾಯಿ ” ಯ ಸಮೀಪದ ಲ್ಲಿದ್ದ ಸಾದೇರಿಯ ವಿಶಾಲವಾದ ಅವಶೇಷಸ್ಥಾನದಲ್ಲಿ ನಿಜವಾಗಿ ತಕ್ಷಶಿಲೆಯು ಇತ್ತೆಂದು ಊಹಿಸಬೇಕಾಗುವದು, ಕನಿಂಗ್‌ಹ್ಯಾಮ್ ಮೊದಲಾದ ಪ್ರಸಿದ್ದ ಇತಿಹಾಸ ಜ್ಞರು ಈ ಮತವು ಯುಕ್ತಿಯುಕ್ತವೆಂದು ಒಪ್ಪುವರು. ಆರಿಯಾನ್, ಸ್ವಾಬೋ, ಫೀನಿ ಮೊದಲಾದ ಐತಿಹಾಸಿಕರು ತಕ್ಷಶಿಲಾನಗರದ ಗೌರವ-ಸಮೃದ್ಧಿಗಳನ್ನು ಏಕವಾಕ್ಯವಾಗಿ ಉಲ್ಲೇಖಿಸಿರುವರು. ಈ ಎಲ್ಲ ವರ್ಣನೆ ಗಳಿಂದ ಸಾದೇರಿಯ ಅವಶೇಷಸ್ಥಳದಲ್ಲಿಯೇ ತಕ್ಷಶಿಲೆಯಿತ್ತೆಂದು ಸ್ಪಷ್ಟವಾಗಿ ತೋರು ವದು, ಫಿಲಸ್ಟ್ರೇಟಸ್‌ ( Philostratus ) ಮೊದಲಾದ ಗ್ರೀಕಲೇಖಕರು ತಕ್ಷಶಿಲೆಯ ರಚನೆಯನ್ನು ಬಹಳ ಹೊಗಳಿರುವರು, ಕ್ರಿ. ಶ. ೪ನೆಯ ಶತಮಾನದಲ್ಲಿ

  1. ಮಗಧಸಾಮ್ರಾಜ್ಯದ ೫ ಭಾಗಗಳಲ್ಲಿ ತಕ್ಷಶಿಲೆಯು ಒಂದು. ಪಂಜಾಬಕ್ಕೆ ಸೇರಿದ ರಾವೆಲ ಪಿ೦ಡಿ ಜಿಲ್ಲೆಯಲ್ಲಿ ತಕ್ಷಶಿಲೆಯು ಇಂದು ಐತಿಹಾಸಿಕರು ಹೇಳುವರು. ಶತದ್ರುವಿನ ಪತ್ನಿ ಮುಸೀಮೆ ಯಿರಿದ ಹಿಂದುಕುಶದವರೆಗೆ ವಿಸ್ತ್ರತವಾದ ಪ್ರದೇಶವು ತಕ್ಷಶಿಲೆಗೆ ಸೇರಿತ್ತು.

+ Cunnigham ancient Geogrphy of India.