ಪುಟ:ಅಶೋಕ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ.. •••••••trwmv wwwdrwwwy ಹೇಗೆ ನಂಬುವದು ? ಮಗನು ಕುರೂಪಿಯಾದ ಮಾತ್ರಕ್ಕೆ ಆತನನ್ನು ದೂರದಲ್ಲಿರುವ ಪಂಚನದದಲ್ಲಿ ಸಾಯಿಸುವದಕ್ಕಾಗಿ ಕಳುಹಿಸುವ ಸಂಭವವುಂಟೆಂದು ತೋರುವದಿಲ್ಲ. ಯಾಕಂದರೆ ತನ್ನ ಕೀರ್ತಿಯನ್ನು ಚಕ್ರವರ್ತಿಯು ಮಲಿನಮಾಡುವದಕ್ಕೆ ಪ್ರಯತ್ನಿಸಿದ ನೆಂಬದು ಅಸಂಗತವೇ ಸರಿ. ಸೇನೆ ಮೊದಲಾದ ಸಹಾಯವಿಲ್ಲದೆ ಅಶೋಕನು # ಏಕಾಕಿಯಾಗಿ ತಕ್ಷಶಿಲೆಗೆ ಕಳುಹಲ್ಪಟ್ಟನೆಂದು ಪ್ರವಾದವುಂಟು, ಪುತ್ರನು ಕೊಲ್ಲಲ್ಪಡಬೇಕೆಂದೇ ಮಹಾರಾಜನು ಈ ಉಪಾಯವನ್ನು ಮಾಡಿದನೆಂದೂ ಹೇಳುವರು, ಮಗಧದ ಆ ಕಾಲದ ಸ್ಥಿತಿಯನ್ನು ವಿಚಾರಿಸಿದರೆ ಮಗಧದಿಂದ ಸೇನೆಯೊಡನೆ ಅಶೋಕನನ್ನು ತಕ್ಷಶಿಲೆಗೆ ಕಳಿಸುವದರಲ್ಲಿ ಬಹಳ ತೊಂದರೆಯಿತ್ತು, ಹಲವು ಕಾರಣಗಳಿಂದ ರಾಜಪರಿವಾರದಲ್ಲಿ ಅಂತಃಕಲಹಗಳೂ, ತಂತ್ರಗಳೂ ನಡೆದಿದ್ದವು. ಬಿಂದುಸಾರನಿಗೆ ಈ ಸಂಗತಿಯು ಗೊತ್ತಾಗಿತ್ತು, ಈ ತಂತ್ರ ಗಾರರ ಕೃತಿಗಳಲ್ಲಿ ರಾಜನಿಗೆ ಬಹಳ ಸಂಶಯವಿತ್ತು. ಇದೂ ಅಲ್ಲದೆ ಬಿಂದುಸಾರನಿಗೆ ಅಶೋಕನ ಶೌರ್ಯ, ವೀರ್ಯ, ಪ್ರತಿಭೆಗಳನ್ನು ನೋಡಿ ಆತನು ತಕ್ಷಶಿಲೆಗೆ ಸೇನಾದಿ ಸಹಾಯವಿಲ್ಲದೆ ಏಕಾಕಿಯಾಗಿ ಹೋದರೂ ಅಲ್ಲಿಯ ದಂಗೆಯನ್ನು ಶಾಂತಮಾಡಿ ಬರುವ ನೆಂಬದಾಗಿ ಪೂರ್ಣ ವಿಶ್ವಾಸವಿತ್ತು. ಅಶೋಕಾವಧಾನದಲ್ಲಿ ಭೂಮಾತೆಯು ಈ ಕಾಲ ದಲ್ಲಿ ದಯಾಪರವಶಳಾಗಿ ಅಶೋಕನಿಗೆ ಯುದ್ಧ ಸಾಮಗ್ರಿಗಳನ್ನು ಒದಗಿಸಿದಳೆಂದು ವರ್ಣನೆಯುಂಟು. ಇತಿಹಾಸದೃಷ್ಟಿಯಿಂದ ಇದರಲ್ಲಿ ಏನಾದರೂ ಸತ್ಯಾಂಶವು ಉಂಟೋ ಇಲ್ಲವೋ ತಿಳಿಯದು. ಅಶೋಕನು ತಕ್ಷಶಿಲೆಗೆ ಬಂದೊಡನೆಯೆ ಪ್ರಜೆಗಳು ಗುಂವು ಗುಂಪಾಗಿ ಅವನ ಬಳಿಗೆ ಬಂದರು. ಪಟ್ಟಣವಾಸಿಗಳು ಅಶೋಕನ ನಡತೆಯನ್ನು ನೋಡಿ ಮರುಳಾಗಿ ಆತನಿಗೆ-ಒಡೆಯರೇ ನಾವು ದ್ರೋಹಿಗಳಲ್ಲ; ರಾಜನ ಇಲ್ಲವೆ ರಾಜ ಪರಿವಾರದ ವಿಷಯವಾಗಿ ನಮ್ಮಲ್ಲಿ ದ್ವೇಷ ಬುದ್ದಿಯಿಲ್ಲ. ಅತ್ಯಾಚಾರಿಗಳಾದ ಅಧಿಕಾರಿ `ಗಳ ನಡತೆಯಿಂದ ನಾವು ಅನಿರ್ವಾಹ ಈ ಮಾರ್ಗವನ್ನು ಹಿಡಿದೆವು” ಎಂದು ಹೇಳಿ ದರು. ದಂಗೆಮಾಡಿದ ಪ್ರಜೆಗಳ ಅಂತರಂಗವನ್ನು ತಿಳಿದು ಅಶೋಕನು ಸವಿಮಾತುಗ ಳಿಂದ ಅವರನ್ನು ಸಮಾಧಾನಬಡಿಸಿದನು, ಮತ್ತು ಅಪರಾಧಿಗಳಿಗೆ ಯೋಗ್ಯ ವಿಚಾರ ಮಾಡಿ ತಕ್ಕ ಶಿಕ್ಷೆಯನ್ನು ಕೊಡಹತ್ತಿದನು. ಅಶೋಕನ ಆಶ್ವಾಸನವನ್ನು ಕೇಳಿ ತಕ್ಷತೆ ಲೆಯ ದಂಗೆಗಾರರು ಯುದ್ದವಿಲ್ಲದೆ ಶಾಂತರಾದರು. ಅಲ್ಲಿ ಕೆಲವು ದಿವಸ ನಿಂತು ಅಶೋ ಕನು ಪ್ರಜೆಗಳ ಮನೋನುರಾಗವನ್ನು ಸಂಪಾದಿಸಿದನು. ಈ ಮೇರೆಗೆ ರಕ್ತಪಾತವಿಲ್ಲದೆ

  • ಸುಪೀಮನೇ ಮೊದಲು ತಕ್ಷಶಿಲೆಗೆ ದಂಗೆಯನ್ನಡಗಿಸುವದಕ್ಕಾಗಿ ಕಳಿಸಲ್ಪಟ್ಟ ನೆಂದೂ ಅವನಿಂದ ಆ ಕೆಲಸವಾಗದ್ದರಿಂದ ಅಶೋಕನು ಬಳಿಕ ಕಳಿಸಲ್ಪಟ್ಟನೆಂದೂ ಕೆಲವರ ಮತವು, ದಂಗೆಯನ್ನಡಗಿಸಿ ಶಾಂತತೆಯನ್ನುಂಟುಮಾಡಿದ ಬಳಿಕ ಅಶೋಕನು ಕೆಲವು ದಿವಸ ಅಲ್ಲಿ ಕಾರಭಾರಿಯಾಗಿ ನಿಯಮಿಸ. `ಲ್ಪಟ್ಟಿದ್ದನು.
  • Beal's Records of Western worldVOL [.