ಪುಟ:ಅಶೋಕ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, ಒwww ರಾಜ್ಯದಲ್ಲಿ ದಂಗೆಯನ್ನಡಗಿಸುವದು ಎಂಥ ಧೈರ್ಯದ ಮತ್ತು ಬುದ್ದಿಯ ಕೆಲಸವಿರುತ್ತ ದೆಯೆಂಬದನ್ನು ಸಹಜವಾಗಿ ಊಹಿಸಬಹುದು, ಸಮರ್ಥರಾದ 'ರಾಜನೀತಿಜ್ಞರಿಗೇ ಇದು ಸಾಧ್ಯವು. ಅಶೋಕನು ತಕ್ಷಶಿಲೆಯ ದಂಗೆಯನ್ನು ಮುರಿಯುವದಕ್ಕೆ ಹೋದಾಗ ಆತನ ಮಲತಾಯಿಯ ಮಗನಾದ ಯುವರಾಜ ಸುಹೀಮನ ವಿರುದ್ಧವಾಗಿ ಒಂದು ಒಳತಂತ್ರವು ನಿರ್ಮಾಣವಾಯಿತು. ಮುಖ್ಯ ಮಂತ್ರಿಯಾದ ಖಲ್ಲಾ ತಕನೆಂಬವನು ವೃದ್ದನಾಗಿಯೂ ಮಹಾ ಪ್ರತಾಪಶಾಲಿಯಾಗಿಯೂ ಇದ್ದನು. ಚಂದ್ರಗುಪ್ತನು ಸ್ಥಾಪಿಸಿದ ಮಂತ್ರಿ ಸಭೆಯ ಐನೂರು ಜನ ಮಂತ್ರಿಗಳು ರಾಜ್ಯಭಾರವನ್ನು ಸಾಗಿಸುತ್ತಿದ್ದರು. ಬಿಂದುಸಾರನ ಕಾಲ ದಲ್ಲಿ ಖಲ್ಲಾ ತಕನು ಆ ಮಂತ್ರಿಮಂಡಲಕ್ಕೆ ಮುಖ್ಯನಾಗಿದ್ದನು. ಒಂದಾನೊಂದು ಸಮ ಯದಲ್ಲಿ ಸುಸೀಮನು ಪ್ರಮೋದೋದ್ಯಾನದಿಂದ ಅರಮನೆಗೆ ತಿರುಗಿ ಬರುವಾಗ ಚೇಷ್ಟೆ ಯಿಂದ ಖಲ್ಲಾ ತಕನ ತಲೆಯ ಮೇಲೆ ತನ್ನ ಅಂಗುಲಿ ತ್ರಾಣವನ್ನು ಒಗೆದನು. ಇದರಿಂದ ಆ ಮುಖ್ಯಮಂತ್ರಿಗೆ ಅವಮಾನವಾಯಿತು. ಮಂತ್ರಿ ಸಭೆಯೆಲ್ಲವೂ ಈ ವಿಷಯದಲ್ಲಿ ಸಿಟ್ಟಿ ಗೆದ್ದಿತು. ಬಿಂದುಸಾರ ಚಕ್ರವರ್ತಿಯ ವಿಶಾಲವಾದ ನಾಮ್ರಾಜ್ಯಕ್ಕೆ ಒಬ್ಬ ಚಂಚಲ ಸ್ವಭಾವದ ಉದ್ದತನಾದ ಯುವಕನು ಉತ್ತರಾಧಿಕಾರಿಯಾಗಬೇಕಾಯಿತೇ? ಇವನು ಸಿಂಹಾಸನದ ಮೇಲೆ ಕುಳಿತರೆ ಸಭಾಸದರಾದ ಮಂತ್ರಿಗಳ ಮತ್ತು ರಾಜ್ಯದ ಮುಖ್ಯ ಮುಖ್ಯ ಅಧಿಕಾರಿಗಳ ಮರ್ಯಾದೆಯು ಉಳಿಯುವದು ಕಠಿಣವಾಗುವದು, ಎಂದು ಅವ ರಿಗೆ ತೋರಿತು. ಈ ರೀತಿಯಿಂದ ಸುಷ್ಮನ ವಿರುದ್ದವಾಗಿ ಒಳತಂತ್ರವು ಆರಂಭವಾ ಯಿತು. ಇದೇ ಸಮಯಕ್ಕೆ ಅಶೋಕನು ತಕ್ಷಶಿಲೆಯ ದಂಗೆಯನ್ನು ಅನಾಯಾಸವಾಗಿ ಮುರಿದು ಜಯಶೀಲನಾಗಿ ಪಾಟಲಿಪುತ್ರಕ್ಕೆ ತಿರುಗಿಬಂದನು. ಬಿಂದುಸಾರನಿಗೆ ಹಲವರು ರಾಣಿಯರು ಇದ್ದರು, ಮತ್ತು ಅವರ ಹೊಟ್ಟೆಯಲ್ಲಿ ಹಲವು ಜನ ಮಕ್ಕಳು ಹುಟ್ಟಿದ್ದರು. ಅಶೋಕನ ಕೀರ್ತಿಯನ್ನೂ, ಶೌರ್ಯವನ್ನೂ, ಜನಾನುರಾಗವನ್ನೂ ನೋಡಿ ಅವನ ಮಲ ಅಣ್ಣತಮ್ಮಂದಿರು ಅಸೂಯೆಪಡುತ್ತಿದ್ದರು. ಅಶೋಕನ ತಾಯಿಯಾದ ಸುಭದ್ರಾಂಗಿಯು ಹೌರಕಾರಿಣಿಯಾಗಿದ್ದು ಕ್ರಮದಿಂದ ಮುಖ್ಯ ಮಹಿಷಿಯಾಗಿದ್ದಳು. ಇದರಿಂದ ಅಂತಃಪುರದಲ್ಲಿಯೂ ವೈಮನಸ್ಯವುಂಟಾಗಿತ್ತು. ಅಮಾತ್ಯನಾದ ರಾಧಾಗುಪ್ತನೂ ಖಲ್ಲಾ ತಕನಿಗಾದ ಅಪಮಾನವನ್ನು ನೋಡಿ ಬಹಳ ಸಿಟ್ಟಾಗಿದ್ದನು. ಇವನು ಅಶೋಕನಲ್ಲಿ ಬಹಳ ಅನುರಕ್ತನಾಗಿಯೂ ಗುಣಗ್ರಾಹಿಯಾಗಿ ಯೂ ಇದ್ದನು. ಸುಮೀಮನ ವಿರುದ್ಧವಾಗಿ ಒಳತಂತ್ರವನ್ನು ಮಾಡಿದವರಲ್ಲಿ ರಾಧಾ ಗುಪ್ತನೇ ಪ್ರಮುಖನು. ಈ ಕಾಲದಲ್ಲಿ ಬಿಂದುಸಾರನು ಅಶೋಕನನ್ನು ಉಜ್ಜಯಿನಿಯ ರಾಜ್ಯ ಕಾರಭಾರದ ಮೇಲೆ ನಿಯಮಿಸಿದ್ದನು. ರಾಜನು ಅಶೋಕನನ್ನು ಪ್ರೇಮದೃಷ್ಟಿಯಿಂದ ನೋಡುತ್ತಿರ