ಪುಟ:ಅಶೋಕ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ಅಶೋಕ ಅಥವಾ ಪ್ರಿಯದರ್ಶಿ • Tvvvvvvvvvv VYYYYYYYYYY ದಲ್ಲಿ ಶೈವಧರ್ಮವು ನೆಲೆಗೊಂಡಿತು, ಈ ಶೈವಧರ್ಮದ ಅಭ್ಯುದಯ ಕಾಲದಲ್ಲಿ ವಿಕ್ರಮಾ ದಿತ್ಯ ರಾಜನು ಉದಯಹೊಂದಿದ್ದನು. ಉಜ್ಜಯಿನಿಯು ಅತಿ ಪ್ರಾಚೀನನಗರಿಯಾದರೂ ವಿಕ್ರಮಾದಿತ್ಯ ಮಹಾರಾಜನ ಕಾಲದಿಂದಲೇ ಅದು ಸಮೃದ್ಧವಾದ ಪಟ್ಟಣವಾಯಿತು. ಉಜ್ಜಯಿನಿಯ ಪ್ರಸಿದ್ದವಾದ ಮಹಾಕಾಲೇಶ್ವರನ ಮಂದಿರವು ಬಹಳ ಪ್ರಾಚೀನ ವೆಂದು ತೋರುತ್ತದೆ. 'ಯಾಕಂದರೆ, ಮಹಾಭಾರತ-ವನಪರ್ವದಲ್ಲಿ ಮಹಾಕಾಲೇಶ್ವ ರನ ಉಲ್ಲೇಖವುಂಟು. ಆ ಕಾಲದಲ್ಲಿ ಈ ಸ್ಥಳವು ಕೋಟಿತೀರ್ಥವೆಂದು ಕರೆಯಲ್ಪಡು ತಿತ್ತು. ಮಹಾಕವಿ ಕಾಲಿದಾಸನ್ನೂ, ಬೇರೆ ಪ್ರಸಿದ್ಧ ಕವಿಗಳೂ ವಿಕ್ರಮಾದಿತ್ಯ ಮಹಾ ರಾಜನ ಸಭೆಯನ್ನು ಅಲಂಕರಿಸಿದ್ದರು. ಉಜ್ಜಯಿನೀ ಪ್ರದೇಶದ ಕಾರಭಾರವನ್ನು ಅಶೋಕನು ಯಾವ ಪ್ರಕಾರ ಸಾಗಿಸಿದ ನೆಂಬದರ ವಿಸ್ತ್ರತವಿವರಣವು ಎಲ್ಲಿಯೂ ದೊರೆಯುವದಿಲ್ಲ. ಆತನ ನಿಸ್ಲಿಮವಾದ ಪ್ರತಿ ಭೆಯು ಇಲ್ಲಿಯೇ ವಿಕಾಸಗೊಂಡಿತೆಂದು ತೋರುವದು. ಅಶೋಕನ ಅಧಿಕಾರ ಕಾಲದಲ್ಲಿ ಇಲ್ಲಿ ಯುದ್ಧ, ದುರ್ಭಿಕ್ಷ ಮೊದಲಾದವೇನೂ ಒದಗಿದಂತೆ ತೋರುವದಿಲ್ಲ. ಉಜ್ಜಯಿನಿ ಯಲ್ಲಿರುವಾಗ ಆತನು ವಿದಿಶಾನಗರಿಯ ಒಬ್ಬ ಶ್ರೇಷ್ಠಿಯ “ ದೇವಿ' ಎಂಬ ಕನ್ನೆಯ ರೂಪಲಾವಣ್ಯಗಳಿಗೆ ಮರುಳಾಗಿ ಆಕೆಯ ಪಾಣಿಗ್ರಹಣಮಾಡಿದನು. ಈ ವಿದಿಶಾನಗ ರಿಯು ಮೈಲನಾದ ಸಮೀಪದಲ್ಲಿರುವ ಈಗಿನ ವೇಶ ನಗರವು, ದೇವಿಯನ್ನು ಮದುವೆ ಯಾಗಿ ಉಜ್ಜಯಿನಿಗೆ ಕರೆತಂದನು. ಕಾಲಕ್ರಮದಿಂದ ಅವಳ ಹೊಟ್ಟೆಯಲ್ಲಿ ಒಬ್ಬ ಮಗ ನೂ ಒಬ್ಬ ಮಗಳೂ ಹುಟ್ಟಿದರು. ಮಗನಿಗೆ ಮಹೇಂದ್ರನೆಂದೂ, ಮಗಳಿಗೆ ಸಂಘಮಿತ್ರೆ ಯೆಂದೂ ಹೆಸರು, ಬುದ್ಧದೇವನ ಪರಿನಿರ್ವಾಣವಾಗಿ ೨೦೪ ವರ್ಷಗಳಾದ ತರುವಾಯ ಮಹೇಂದ್ರನ ಜನ್ಮವಾಯಿತು, ಸಂಘಮಿತ್ರೆಯು ಮಹೇಂದ್ರನಿಗೆ ೨ ವರ್ಷಕ್ಕೆ ಕಿರಿಯಳು. ಅಶೋಕನು ಸಿಂಹಾಸನಾರೋಹಣಕ್ಕಾಗಿ ಪಾಟಲಿಪುತ್ರಕ್ಕೆ ಹೋಗಲು ಮಕ್ಕಳೂ ಆತನ ಸಂಗಡ ಅಲ್ಲಿಗೆ ಹೋದರು. ಈ ಕಾಲಕ್ಕೆ ತಕ್ಷಶಿಲೆಯಲ್ಲಿ ಮತ್ತೆ ದಂಗೆಯೆದ್ದಿತು. ಯುವರಾಜನಾದ ಸುಷ್ಮನು ಅಸಂಖ್ಯ ಸೈನ್ಯದೊಡನೆ ಅಲ್ಲಿಗೆ ಕಳಿಸಲ್ಪಟ್ಟನು. ಬಿಂದುಸಾರನ ಬೇನೆಯು ದಿನದಿನಕ್ಕೆ ಹೆಚ್ಚುತ್ತ ನಡೆಯಿತು, ಮಂತ್ರಿಗಳು ಏನಾದರೂ ಮಾಡಿ ಅಶೋಕನನ್ನು ಪಾಟಲಿಪುತ್ರದ ಸಿಂಹಾಸನದ ಮೇಲೆ ಕುಳ್ಳಿರಿಸಬೇಕೆಂದು ಸಂಕಲ್ಪ ಮಾಡಿದರು. ಆದರೆ ಅಶೋಕನು ರಾಜಧಾನಿಯಲ್ಲಿಲ್ಲದಾಗ ಸುಸೀಮನನ್ನು ಸಿಂಹಾಸನದಿಂದ ತಳ್ಳು ವದು ಕಠಿಣವು, ಆದ ದರಿಂದ ಅಮಾತ್ಯ ರಾಧಾಗುವನು ಬಿಂದುಸಾರನು ರೋಗಪೀಡಿತನಾಗಿರುವದನ್ನು ಉಜ್ಜಿ ಯಿನಿಗೆ ಹೇಳಿಕಳುಹಿದನು. ತಂದೆಯ ಬೇನೆಯ ಸುದ್ದಿಯನ್ನು ತಿಳಿದು ಅಶೋಕನು ಅದೇ ಕ್ಷಣಕ್ಕೆ ಉಜ್ಜಯಿನಿಯನ್ನು ಬಿಟ್ಟು ಪಾಟಲಿಪುತ್ರಕ್ಕೆ ಪ್ರಯಾಣವನ್ನು ಬೆಳೆಯಿಸಿದನು.