ಪುಟ:ಅಶೋಕ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ: ೫೫ ೬ನೆಯ ಅಧ್ಯಾಯ. ಇದೆ ಸರ್ ಬಿಂದುಸಾರ-ಅಶೋಕನು ರಾಜ್ಯಭಾರವನ್ನು ಸ್ವೀಕರಿಸಿದ್ದು, (OINAW Wau ಪiC +Alಹಯೋ ಪN ANAAAAAO WV RSSL gIS Sሕ .dd ಪೂ, ೨೯೧ ರಲ್ಲಿ ವೀರಶ್ರೇಷ್ಟನಾದ ಚಂದ್ರಗುಪ್ತನು ದೇಹತ್ಯಾಗ ಮಾಡಲು ಆತನ ಮಗನಾದ ಬಿಂದುಸಾರನು ಮಗಧದ ಸಿಂಹಾಸ ನವನ್ನೇರಿದನು, ಗ್ರೀಕಐತಿಹಾಸಿಕರು ಬಿಂದುಸಾರನ ಹೆಸರನು ಡಿಸಿ ಡಿ ಎಲ್ಲಿಯೂ ಉಲ್ಲೇಖಿಸಿಲ್ಲ. ಚಂದ್ರಗುಪ್ತನ ಮಗನನ್ನು ಅವರು ಅಮಿತ್ರಘಾತ ( ಶತ್ರುಹಂತೃ ) ಎಂಬ ಹೆಸರಿನಿಂದಲೇ ಕರೆದಿರು ವರು, ಚಂದ್ರಗುಪ್ತನು ಸೆಲ್ಯುಕಸ ಮೊದಲಾದ ಗ್ರೀಕರಾಜರ ಸಂಗಡ ಉಂಟು ಮಾಡಿ ಕೊಂಡಿದ್ದ ಬಂಧುತ್ವವು ಇವನ ಕಾಲದಲ್ಲಿ ಪೂರ್ಣವಾಗಿ ಉಳಿದಿತ್ತು, ಪ್ರಸಿದ್ದ ಗ್ರೀಕ ವಕೀಲನಾದ ಮೆಗಾಸ್ಟಿನೀಸನು ಸ್ವದೇಶಕ್ಕೆ ತಿರುಗಿ ಹೋದ ಬಳಿಕ ಇವನ ಆಳಿಕೆಯ ಲ್ಲಿಯೇ ಡಾಯಮೇಕಸ್ ಎಂಬ ಮತ್ತೊಬ್ಬ ವಕೀಲನು ಮಗಧರಾಜಸಭೆಗೆ ಬಂದನು. ಅವನೂ ಮೆಗಾಸ್ಪಿನೀಸನಂತೆ ತನ್ನ ಪ್ರವಾಸದ ವೃತ್ತಾಂತವನ್ನು ಬರೆದಿಟ್ಟಿದ್ದನು. ಆದರೆ ಅದು ಈಗ ಉಪಲಬ್ಧವಿಲ್ಲ. ಸೆಲ್ಯುಕಸನಿಕೇತರನು ಕ್ರಿ. ಪೂ. ೨೮ ರಲ್ಲಿ ಕೊಲೆಗಡಿಕ ರಿಂದ ಹತನಾಗಲು ಅವನ ಮಗನಾದ ಆಂಟಿ ಓಕಸೋಟರನು ಸಿರಿಯಾರಾಜ್ಯದ ಪಟ್ಟದ ಮೇಲೆ ಕುಳಿತನು. ಇವನೊಡನೆ ಬಿಂದುನಾರನ ಪತ್ರವ್ಯವಹಾರಾದಿಗಳು ನಡೆಯುತ್ತಿ ದ್ದವು, ಮಿಸರದ ರಾಜನಾಗಿದ್ದ ಟಲೇಮಿಮಿಟೆಡಲ್‌ಫಸನು ಈ ಕಾಲದಲ್ಲಿ ಡಾಯಓನಿ ಸನ್ ಎಂಬ ಗ್ರೀಕ ವಕೀಲನನ್ನು ಪಾಟಲಿಪುತ್ರದ ರಾಜಸಭೆಗೆ ಕಳುಹಿದ್ದನು. ಈ ದೇಶ ದಲ್ಲಿರುವಾಗ ದೊರಕಿಸಿದ ಜ್ಞಾನವನ್ನು ಆತನು ಬರೆದಿಟ್ಟಿರುವನು. ಬಿಂದುಸಾರನ ಆಳಿಕೆ ಯಲ್ಲಿ ರಾಜ್ಯದ ಅಂತರ್ವ್ಯವಸ್ಥೆಯು ಯಾವತರದಿಂದಿತ್ತೆಂಬದರ ವಿವರಣವು ಎಲ್ಲಿಯೂ ವಿಶೇಷವಾಗಿ ದೊರೆಯುವದಿಲ್ಲ. ಉಪಲಬ್ಧವಿರುವ ಅಲ್ಪ ಸ್ವಲ್ಪ ಸಂಗತಿಗಳಿಂದ ಬಿಂದು ಸಾರನಾದರೂ ತಂದೆಯಂತೆ ಒಂದೊಂದೇ ರಾಜ್ಯವನ್ನು ಜಯಿಸಿ ಮಗಧ ಸಾಮ್ರಾಜ್ಯಕ್ಕೆ ಸೇರಿಸುತ್ತ ನಡೆದಿದ್ದನೆಂದು ತಿಳಿಯುತ್ತದೆ. ಬಿಂದುಸಾಠನು ೨೫ ವರ್ಷಗಳ ವರೆಗೆ ಮಗಧ ರಾಜ್ಯಭಾರವನ್ನು ಸಾಗಿಸಿ ಕ್ರಿ. ಪೂ, ೨೬೨ರಲ್ಲಿ ದೇಹವಿಟ್ಟನು. ಅವನ ತರುವಾಯ ಖಲ್ಲಾ ತಕ, ರಾಧಾಗುಪ್ತ ಎಂಬ ಮುಖ್ಯ ಮಂತ್ರಿಗಳ ಸಹಾಯದಿಂದಲೂ, ಅನುಮತಿಯಿಂದಲೂ ಅಶೋಕನು ಮಗಧ ರಾಜ್ಯಭಾರವನ್ನು ವಹಿಸಿದನು. ಬಿಂದುಸಾರನ ಅಳಿಕೆಯಲ್ಲಿ ಮಹತ್ವದ ಯಾವ ಸಂಗ ತಿಯೂ ಸಂಭವಿಸಲಿಲ್ಲ.