ಪುಟ:ಅಶೋಕ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೮ ಅಶೋಕ ಅಥವಾ ಪ್ರಿಯದರ್ಶಿ, •••••••••••••••••••••M. . . . . .IMM ro ತಾನ-ಭಿಕ್ಷುವು ಅರಳಿದ ಕಮಲದ ಮೇಲೆ ಕುಳಿತುಕೊಂಡಿರುತ್ತಾನೆ! ಆತನ ಅರ್ಧ ಶರೀರದಿಂದ ಹೊರಟ ನೀರಿನಿಂದ ಬೆಂಕೆಯು ಆರಹತ್ತಿದೆ! ಅಸಂಭವನೀಯವಾದ ಈ ಅದ್ಭುತ ದೃಶ್ಯವನ್ನು ನೋಡಿ ಕೊಲೆಗಡಿಕನ ಅತಿ ಕ್ರೂರ ಹೃದಯವೂ ಕೂಡ ನಡುಗಿ ಹೊಯಿತು. ಕೂಡಲೆ ಅವನು ರಾಜನ ಬಳಿಗೆ ಹೋಗಿ ನಡೆದ ವರ್ತಮಾನವನ್ನೆಲ್ಲ ಹೇಳಿದನು. ಅಶೋಕನು ಅಲ್ಲಿಗೆ ಬಂದು ಆ ಭಿಕ್ಷುವಿನ ಆಶ್ಚರ್ಯಕರವಾದ ಸ್ಥಿತಿಯನ್ನು ನೋಡಿ ಬೆರಗುವಡೆದು ನಿಂತನು. ಅಶೋಕನ ರಕ್ತನಾಡಿಗಳ ಪ್ರವಾಹವೂ ನಿಂತು ಹೋದಂತಾಯಿತು! ಆಗ ಅಶೋಕನು ಭಯಭಕ್ತಿಗಳಿಂದ- ಮಹಾತ್ಮರೇ, ತಾವು ಯಾರು ? ಎಂದು ಪ್ರಶ್ನೆ ಮಾಡಿದನು. ಆಗ ಸಮುದ್ರನು ಹಸನ್ಮುಖನಾಗಿ-ಮಹಾರಾಜರೇ, ನಾನು ಪರಮ ಕಾರುಣಿಕನಾದ ಬುದ್ದದೇವನ ಧರ್ಮಪುತ್ರನು, ಆತನ ಕೃಪೆಯಿಂದ ಈ ಭಯಂಕರವಾದ ಸಂಸಾರದಿಂದ ಮುಕ್ತನಾಗಿರುವೆನು. ಬುದ್ದದೇವನು ಹೇಳಿರುವದೇ ನಂದರೆ--ನನ್ನ ಪರಿನಿರ್ವಾಣವಾದ * ೧೦೦ ವರ್ಷಗಳ ತರುವಾಯ ಅಶೋಕನೆಂಬ ಹೆಸರಿನಿಂದ ಪಾಟಲಿಪುತ್ರದಲ್ಲಿ ಒಬ್ಬ ಅರಸನು ಉದಯಹೊಂದುವನು. ಆ ಚಕ್ರವರ್ತಿ ಯು ದೇಶದೇಶಗಳಲ್ಲಿ ನನ್ನ ಅಸ್ಥಿಗಳನ್ನು ಇಟ್ಟು ಸನಾತನ ಪವಿತ್ರ ಧರ್ಮವನ್ನು ಹಬ್ಬಿ ಸುವನು. ಆತನು ನಗರನಗರಕ್ಕೆ ಒಟ್ಟು ೮೪೦೦೦ ಧರ್ಮಾರಾಮಗಳನ್ನು # ಕಟ್ಟಿಸು ವನು. ಎಲೈ ನರಪತಿಯೇ ನೀನೇ ಆ ಅಶೋಕಚಕ್ರವರ್ತಿಯು, ತ್ರಿರತ್ನ ಗಳನ್ನು ಆಶ್ರ ಯಿಸಿ ಆತನ ಪವಿತ್ರಧರ್ಮವನ್ನು ಜಗತ್ತಿನಲ್ಲಿ ಹಬ್ಬಿಸು. ” ಎಂದು ನುಡಿದನು. ಅಶೋ ಕನು ತನ್ನ ಕ್ರೂರತನಕ್ಕೆ ಪಶ್ಚಾತ್ತಾಪಬಟ್ಟಿದ್ದನು. ಆಗ ಭಿಕ್ಷುವಿಗೆ ಕ್ಷಮೆಯನ್ನು ಬೇಡಿ ಕೊಂಡನು, ಮತ್ತು ಆ ದಿವಸವೇ ಬುದ್ದ, ಧರ್ಮ ಮತ್ತು ಸಂಘ ಇವುಗಳ ಆಶ್ರಯ ವನ್ನು ಪಡೆದನು. ವಧಾಗಾರವನ್ನು ಕೆಡವುವದಕ್ಕೂ, ಚಂಡಗಿರಿಕನನ್ನು ಜೀವಂತ ಸುಡುವದಕ್ಕೂ ಅಪ್ಪಣೆಯಿತ್ತನು. ಈ ಕಥೆಯಲ್ಲಿ ಎಷ್ಟು ಮಟ್ಟಿಗೆ ಸತ್ಯವಿರುವದೆಂಬದನ್ನು ಆಲೋಚಿಸಬೇಕಾಗಿರುವದು, ದುರಾಚಾರನೂ, ಭ್ರಾತೃದ್ರೋಹಿಯೂ, ನರಹತ್ಯಾಕಾ ರಿಯೂ ಕೂರನೂ ಆದ ಚಂಡಾಶೋಕನು ಧರ್ಮಾಶೋಕನಾದ ಬಗೆ ಹೇಗೆ ಎಂಬ ದನ್ನು ಚೆನ್ನಾಗಿ ವಿಚಾರಿಸುವದು ತಕ್ಕದ್ದಾಗಿದೆ. ಒಲುಮೆ + ಮಹಾಯಾನವೆ೦ಬ ಬೌದ್ಧಗ್ರಂಥದಲ್ಲಿಯೂ, ಅಶೋಕಾನದಾನದಲ್ಲಿಯೂ ಬುದ್ದನ ಪರಿ ನಿರ್ವಾಣವಾದ ೧೦೦ ವರ್ಷಗಳ ತರುವಾಯ ಅಶೋಕನು ಉದಯಹೊಂದುವನೆಂದು ಹೇಳಿದೆ. ಮಹಾ ಯಾನಗ್ರಂಥವು ಕಾಲಾಶೋಕನೆಂಬ ಅರಸನಿದ್ದನೆಂಬದನ್ನು ಸ್ವೀಕರಿಸುವದಿಲ್ಲ. ಮಹಾಯಾನಸಾ೦ಪ್ಪ ದಾಯದ ಮತದಂತೆ ಬುದ್ಧದೇವನ ತರುವಾಯ ಧರ್ಮಾ ಶೋಕನೆಂಬ ಒಬ್ಬ ಅರಸನು ಮಾತ್ರ ಮಗಧ ಸಿಂಹಾಸನವನ್ನೇರಿದನು, ಆದರೆ ಬೇರೆ ಗ್ರಂಥಗಳಲ್ಲಿ ಬುದ್ಧದೇವನ ತರುವಾಯ ಮಗಧದಲ್ಲಿ ಕಾಲಾ ಶೋಕ, ಧರ್ಮಾಶೋಕ ಎಂಬ ಇಬ್ಬರು ರಾಜ್ಯವಾಳಿದರು. ಮೊದಲಿನವನು ಬುದ್ಧನ ನಿರ್ವಾಣದ ತರು ವಾಯ ೧೦೦ ವರ್ಷಗಳ ಮೇಲೆ ೨ನೆಯವನು ೨೧೮ ವರ್ಷಗಳ ಮೇಲೆ ಆಳಿದನು.

  1. ಭಿಕ್ಷುಗಳು ವಾಸಮಾಡುವ ಸ್ಥಳಗಳು.