ಪುಟ:ಅಶೋಕ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ಳಿ ಅಶೋಕ ಅಥವಾ ಪ್ರಿಯದರ್ಶಿ. ೧ wwwvvvvvvv ••vvvvvvvvvvvvvvvvvvvvvvvvvvvvvvvv// • ಕೇಸರಿಯು ಈ ಪ್ರದೇಶವನ್ನಾಳುತ್ತಿದ್ದನು. ಮುಂದೆ ೪ ವರ್ಷಗಳಲ್ಲಿ ಕಾನ್ಯಕುಬ್ಬದ ರಾಜನಾದ ಹರ್ಷವರ್ಧನನು ಈ ಅರಸನನ್ನು ಸೋಲಿಸಿದನು, ಅದರಿಂದ ಕೊಧ ರಾಜ್ಯವು ಕಾನ್ಯಕುಬ್ಬಕ್ಕೆ ಸೇರಿತು. ಕ್ರಿ. ೭ನೆಯ ಶತಮಾನದಲ್ಲಿ ಕಲಿಂಗರಾಜ್ಯವು ಈಗಿನ ಗಂಜಾಮ ಪ್ರದೇಶದ ನೈಋತ್ಯದಲ್ಲಿ ಸುಮಾರು ೧೦೦೦ ಚೌ, ಮೈಲು ವ್ಯಾಪಿಸಿತ್ತು. ರಾಜ ಧಾನಿಯು ಸುಮಾರು ೮ ಚೌ, ಮೈಲು ಇತ್ತು. ಪ್ಲಿನಿಯು ಈ ಕಲಿಂಗರಾಜ್ಯದಲ್ಲಿ* ಮೂರು ಭಾಗಗಳನ್ನು ಮಾಡಿರುವನು. ಅವ-ಕಲಿಂಗ, ಮಧ್ಯಕಲಿಂಗ, ಮಹಾಕಲಿಂಗ; ಟಲೇಮಿಯು ತ್ರಿಗಿಟನ ಇಲ್ಲವೆ ತ್ರಿಲಿಂಗನ ಎಂಬ ಒಂದು ದೇಶವನ್ನು ಉಲ್ಲೇಖಿಸಿರು ವನು. ಡಾಕ್ಟರ್‌ ರಾಜೇಂದ್ರಲಾಲ ಮಿತ್ರ ಎಂಬವರು ಕಲಿಂಗ ಎಂಬದಕ್ಕೆ ಮೂರ ಕಲಿಂಗಗಳೆಂದು ನಿರ್ಣಯಿಸಿರುವರು. ಅವು-ಕಲಿಂಗ, ಮಧ್ಯಕಲಿಂಗ, ಉತ್ಕಲಿಂಗ, ಉತ್ಕಲಿಂಗದ ವಿಕೃತರೂಪವು ಉತ್ಕಲ ಎಂದಾಯಿತು. ಕಾಲಚ್ಚವಿಯ ಶಾಸನವನ್ನು ಓದಿದರೆ ಚೇದಿಯ ಹೈಹಯರಾಜವಂಶದವರು ಕಾಲಾಂಜರಪುರ ಮತ್ತು ಕಲಿಂಗ ಇವುಗಳ ಅಧಿಪತಿಗಳಿದ್ದರೆಂದು ತಿಳಿಯುವದು. ಪಾಶ್ಚಾತ್ಯ-ಇತಿಹಾಸಜ್ಞರಲ್ಲಿ ... ಕೆಲವರು ಕೃಷ್ಣಾ ನದೀತೀರಶೋಭಿತವಾದ ಅಮರಾವತಿ ಇಲ್ಲವೆ ಧಾನಕರಾಜ್ಯವೂ, ಪ್ರಾಚೀನ ಅಂದ್ರರಾಜ್ಯವೂ ಕಲಿಂಗ ಇಲ್ಲವೆ ರಾಜಮಹೇಂ ದ್ರಿಯೂ ಕೂಡಿ ಕಲಿಂಗವೆಂದು ಹೇಳಲ್ಪಡುತ್ತಿದ್ದವೆಂದು ಅಭಿಪ್ರಾಯಪಡುತ್ತಾರೆ. ಕನಿಂಗ್‌ಹ್ಯಾಮ್ ನಾಹೇಬರು ತಿಕಲಿಂಗ ಮತ್ತು ತೇಲಿಂಗನ (Telingan) ಇವೆರಡೂ ಒಂದೇ ಪ್ರದೇಶವೆಂದು ಹೇಳುವರು. ಮಹಾಭಾರತ, ಹರಿವಂಶ, ಕಾಲಿದಾಸವರ್ಣನೆ ಇವುಗಳಿಂದ ತೋರುವದೇನಂದರೆಒಂದು ಕಾಲದಲ್ಲಿ ಸಮಗ್ರ ಉತ್ಕಲಪ್ರದೇಶವು ಕಲಿಂಗರಾಜ್ಯಕ್ಕೆ ಸೇರಿತ್ತು. ಆದರೆ ಕಾಲ ಕ್ರಮದಿಂದ ಈ ಮೇರೆಯು ಕಡಿಮೆಯಾಗುತ್ತ ನಡೆದಿತ್ತು. ಕಲಿಂಗ ರಾಜ್ಯದ ಪ್ರಾಚೀನ ರಾಜಧಾನಿಯು -ರಾಜಪುರವು, ಶ್ರೀಕಾಕೋಲಾ, ಇಲ್ಲವೆ ಚಿಕಾಕೋಲಾ ಎಂಬದೂ ಪ್ರಾಚೀನ ರಾಜಧಾನಿಯೆಂದು ಹೇಳಿದೆ. ಈ ರಾಜಧಾನಿಯು ಯಾವಕಾಲದಲ್ಲಿ ಕಲಿಂಗ ಪಟ್ಟಣಕ್ಕೆ ಸ್ಥಾನಾಂತರವಾಯಿತೆಂಬದರ ಉಲ್ಲೇಖವು ಇಲ್ಲ. ಕ್ರಿ. ೭೫೦ರಲ್ಲಿ ಕಲಿಂಗ ರಾಜನು ವೆಂಜೆಯ (V engi) ರಾಜನಿಗೆ ಸೋಲಲು ಅಗ ರಾಜಧಾನಿಯು ರಾಜ ಮಹೇಂದ್ರಿ ಎಂಬ ಸ್ಥಾನಕ್ಕೆ ತರಲ್ಪಟ್ಟಿತು, ಮಹಾಭಾರತದಲ್ಲಿ ಮಣಿಪುರ, ರಾಜಪುರಗಳ ಮತ್ತು ಬೌದ್ಧಗ್ರಂಥಗಳಲ್ಲಿ ದಂತಪುರ ಕುಂಭವತಿ ಎಂಬ ಪಟ್ಟಣಗಳ ಉಲ್ಲೇಖವು ಕಂಡು ಬರುವದು. • Ancient Geography of India. (Cunninghan). # Sewell, Antiquities of madra8, 8 Cunningham, Ancient Geography of India. + ಬೌದ್ಧ ಗ್ರಂಥಗಳಲ್ಲಿ ರಾಜಧಾನಿಯ ಹೆಸರು ಸಿ೦ಹಪುರವೆಂದು ಹೇಳಿದೆ.