ಪುಟ:ಅಶೋಕ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬ ಅಶೋಕ ಅಥವಾ ಪ್ರಿಯದರ್ಶಿ. مهمی به هم مر " محی ییخمه رها هي مم ರಾಜೈಶ್ವರ್ಯವನ್ನೂ ಹೆಂಡಿರುಮಕ್ಕಳನ್ನೂ ತೊರೆದು ದೀನವಾದ ಭಿಕ್ಷುವೇಷದಿಂದ ಜಗ ಆನೆದುರಿಗೆ ಬಂದು ನಿಂತನು ! ಮತ್ತು ತಾಪತ್ರಯದಿಂದ ಬಳಲುತ್ತಿರುವ ನರನಾರಿಯ ರಿಗೆ ಮೋಕ್ಷಮಾರ್ಗವನ್ನು ತೋರಿಸುವದಕ್ಕಾಗಿ ಘನತರವಾದ ಸಾಧನಮಾರ್ಗದಲ್ಲಿ ತೊಡಗಿದನು; ಆ ಾಧನೆಗೆ ಫಲವೆನಿಸಿ ಒಂದು ನೂತನ ಮಹಾಸತ್ಯವನ್ನು ಕಂಡು ಹಿಡಿದು ಲೋಕಕಲ್ಯಾಣಕ್ಕಾಗಿ ಅದನ್ನು ದಾನಮಾಡಬೇಕೆಂದು ಮನೆಮನೆಗೆ ತಿರುಗಾಡಿ ದನು ! ಈ ಕಾರಣದಿಂದಲೇ ಶಾಕ್ಯಸಿಂಹನು ಕೋಟ್ಯವಧಿ ನರನಾರಿಯರ ಹೃದಯ ಪೀಠದಲ್ಲಿ ಕುಳಿತಿರುವನು. ಮಹಾಪುರುಷರ ಜೀವನದಲ್ಲಿ ಈ ತರದ ಯೋಗವು ಬಹುಶಃ ಒದಗುವದುಂಟು. ಅಶೋಕನ ಜೀವನದಲ್ಲಿಯೂ ಕಲಿಂಗವಿಜಯವು ಈ ಪ್ರಕಾರದ ಒಳ್ಳೆಯ ಪರಿವರ್ತನವನ್ನುಂಟುಮಾಡಿದ ಸಂಧಿಯಾಗಿರುವದು. ಅಶೋಕನು ಸಿಂಹಾಸನವೇರಿದ ೧೩ನೆಯ ವರ್ಷ ಇಲ್ಲವೆ ಆತನ ಪಟ್ಟಾಭಿಷೇಕ ವಾದ ೮ ವರ್ಷಗಳ ತರುವಾಯ ಕ್ರಿ, ಪೂ. ೨೬೧ನೆಯ ವರ್ಷ ಆತನ ಸಂಬಂಧವಾಗಿ ಬರೆದಿಟ್ಟ ಎಲ್ಲಕ್ಕೂ ಮೊದಲಿನ ಸಂಗತಿಯು ದೊರೆಯುವದು, ಬಂಗಾಲ ಉಪಸಾಗರದ ದಂಡೆಗೆ ಗೋದಾವರೀ ಮಹಾನದಿಗಳ ನಡುವಿನ ಕಲಿಂಗ ಇಲ್ಲವೆ ಕಲಿಂಗತ್ರಯ ಎಂದು ಹೆಸರುಗೊಂಡ ವಿಶಾಲ ರಾಜ್ಯವನ್ನು ಜಯಸಿ ತನ್ನ ಸಾಮ್ರಾಜ್ಯವನ್ನು ಸುತ್ತಲು ಬೆಳೆ ಯಿಸುವದಕ್ಕೆ ಆತನು ಅದೇ ವರ್ಷ ಮೊದಲುಮಾಡಿದನು. ಜಯಲಕ್ಷ್ಮಿಯು ಆತನಿಗೆ ಅನುಕೂಲೆಯಾದಳು. ಕಲಿಂಗರಾಜ್ಯವು ಆತನ ನಾಮ್ರಾಜ್ಯಕ್ಕೊಳಪಟ್ಟಿತು, ಆದರೆ ರಣಾಂಗಣದ ಹೃದಯದ್ರಾವಕವಾದ ಭಯಂಕರ `ದೃಶ್ಯವು ವಿಜಯಿಯಾದ ಚಕ್ರವರ್ತಿ ಯ ಹೃದಯಪಟದ ಮೇಲೆ ಬಹುದಿನಗಳವರೆಗೆ ನಿಲ್ಲುವಂತೆ ಮೂಡಿತು, ಅಲ್ಲಿ ನೋಡಿದ ದುಃಖದ ಘೋರವಾದ ಅಂಧಕಾರವು ಆತನ ಚಿತ್ರವನ್ನು ವ್ಯಾಪಿಸಿತು. ವಿಜಯದ ಪ್ರಕಾಶವು ಆ ಅಂಧಕಾರವನ್ನು ಭೇದಿಸಲು ಸಮರ್ಥವಾಗಲಿಲ್ಲ. ಪರ್ವತಗಳ ಶಿಲಾತಲ ಗಳ ಮೇಲೆ ಅಮರವಾಣಿಯಿಂದ ಪರಾಜಿತರ ಹೃದಯದ್ರಾವಕವಾದ ಯಾತನೆ, ಜೇತಾ ರನ ಅಸಹ್ಯವಾದ ಅನುತಾನ ಇವುಗಳನ್ನು ಚಕ್ರವರ್ತಿಯು ಮನಸ್ಸು ಕರಗಿ ಕೊರೆಯಿ ಸಿರುವನು. ಯುಗಾಂತರವಾಗಿ ಹೋಗಿದೆ; ಆದರೂ ಈವೊತ್ತಿಗೆ ಆ ಲಿಪಿಯನ್ನು ಓದಿ ದರೆ ಒಬ್ಬ ವ್ಯಥಿತನಾದ ಮನುಷ್ಯನ ದುಃಖನಿಶ್ವಾಸವು ಕಿವಿಯಲ್ಲಿ ಪ್ರತಿಧ್ವನಿತವಾಗು ತಿರುವದು ! ಆ ಭಾಷೆಯು ನಿಜವಾಗಿ ಆ ಚಕ್ರವರ್ತಿಯ ಹೃದಯದ ಭಾಷೆಯೇ. ಅಶೋಕನ ಹೃದಯದ ಅನುತಾಪದುಃಖಗಳನ್ನು ವರ್ಣಿಸುವದು ಯಾರಿಗೂ ಸಾಧ್ಯ ವಿಲ್ಲ. ಶಿಲೆಗಳು ಸಜೀವವಾಗಿದ್ದಂತೆ ಕೆಳಗೆ ಬರೆದ ಅಪೂರ್ವವಾದ ಇತಿಹಾಸವನ್ನು ಉದ್ಯೋಷಿಸುತ್ತಿರುವವ. "ಪವಿತ್ರ ಚರಿತ್ರವುಳ್ಳ ಉದಾರಮನಸ್ಸಿನ ಚಕ್ರವರ್ತಿಯು ತನ್ನ ಪಟ್ಟಾಭಿಷೇಕವಾದ ೮-೯ ವರ್ಷಗಳ ತರುವಾಯ ಕಲಿಂಗರಾಜ್ಯವನ್ನು ಜಯಿಸಿದನು. ಆ ಮಹಾಯುದ್ಧದಲ್ಲಿ ಒಂದುವರೆ ಲಕ್ಷ ಜನರು ಸೆರೆ ಹಿಡಿಯಲ್ಪಟ್ಟರು. ಮೂರು ಲಕ್ಷ ಜನರು ಹತರಾದರು. ಎಷ್ಟು ಲಕ್ಷ ಜನರು ಗಾಂಹೊಂದಿದರೆಂಬದಕ್ಕೆ ಲೆಕ್ಕವೇ ಇಲ್ಲ.