ಪುಟ:ಅಶೋಕ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

`ಅಶೋಕ ಅಥವಾ ಪ್ರಿಯದರ್ಶಿ, L wworryMurrer... - * ** * //// * * *ry: */*/2442 *.* ** *** ** *~*/* (( ಕಲಿಂಗವನ್ನು ಜಯಿಸಿದ ತರುವಾಯ ಸ್ವಲ್ಪ ದಿವಸಗಳಲ್ಲಿ ಚಕ್ರವರ್ತಿಯು ಮೈತ್ರೀಧರ್ಮವನ್ನು ಪಾಲಿಸುವದಕ್ಕೂ, ಪ್ರೀತಿಸುವದಕ್ಕೂ ಅಭ್ಯಾಸಿಸುವದಕ್ಕೂ ಆರಂಭಮಾಡಿದನು. ಯಾವದೊಂದು ಸ್ವತಂತ್ರ ರಾಜ್ಯವನ್ನು ವಶಪಡಿಸಿಕೊಳ್ಳಬೇಕಾದರೆ ಅಸಂಖ್ಯ ಪ್ರಾಣಿಗಳನ್ನು ಕೊಲ್ಲುವದೂ, ಸೆರೆಹಿಡಿಯುವದೂ ಅವಶ್ಯವಲ್ಲವೇ? ಇದು ಪವಿತ್ರ ಸ್ವಭಾವದ ಚಕ್ರವರ್ತಿಗೆ ಅಸಹ್ಯವಾಯಿತು, ಕಲಿಂಗಯುದ್ಧದಲ್ಲಿ ಮಡಿದ ಮತ್ತು ಸೆರೆಸಿಕ್ಕ ಮತ್ತು ಗಾಯಹೊಂದಿದ ಜನರ ನೂರರಲ್ಲೊಂದುಪಾಲು ಇಲ್ಲವೆ ಸಾವಿರದ ಬ್ಲೊಂದುಪಾಲು ಜನರು ನಾಶಹೊಂದಿದರೂ ಈಗ ಕರುಣಾರಸಪೂರ್ಣನಾದ ಚಕ್ರವ ರ್ತಿಯ ಅಸಹ್ಯವಾದ ದುಃಖಕ್ಕೆ ಕಾರಣವಾಗುವದು ” ಮುಂದೆ ಚಕ್ರವರ್ತಿಯು ಯುದ್ಧದ ಭಯಂಕರ ಪ್ರಸಂಗಗಳನ್ನೆಲ್ಲ ವರ್ಣಿಸಿ ಕೊನೆಗೆ “ ಪ್ರೇಮದ ಜಯವೇ ನಿಜ ವಾದ ಜಯವ ” ಎಂಬ ಮಹಾಸತ್ಯವನ್ನು ಉಪದೇಶಿಸಿರುವನು. ಈ ಮಹಾಯುದ್ಧವು ಮುಗಿದ ಬಳಿಕ ಕಲಿಂಗರಾಜ್ಯದ ಪ್ರಜೆಗಳನ್ನೂ, ಸಮೀ ಪದ ಅಡವಿಯಲ್ಲಿ ವಾಸಿಸುವ ಕಾಡುಕುಲಗಳನ್ನೂ ಯಾವ ಪದ್ಧತಿಯಿಂದ ಆಳಬೇ ಕೆಂಬ ವಿಷಯದಲ್ಲಿ ನಿಯಮಗಳನ್ನು ಮಾಡಿ ಚಕ್ರವರ್ತಿಯು ಕಲಿಂಗಕ್ಕೆ ಮಾತ್ರ ಸಂಬಂಧಪಟ್ಟ ಎರಡು ಶಾಸನಗಳನ್ನು ಪ್ರಚಾರಪಡಿಸಿದನು. ಈ ಶಾಸನಗಳು ಚೌಗಡ ಮತ್ತು ರೌಲಿ ಎಂಬ ಸ್ಥಳಗಳಲ್ಲಿ ಇದುವರೆಗೆ ಕಾದಿಡಲ್ಪಟ್ಟಿರುವವು. ಈ ಗೆದ್ದ ಕಲಿಂಗ ಪ್ರದೇಶಕ್ಕೆಲ್ಲ ಒಬ್ಬ ರಾಜವಂಶದ ಯುವರಾಜನನ್ನು ಮುಖ್ಯಾಧಿಕಾರಿಯನ್ನು ಮಾಡಿದನು. ತೋಸಾಲಿ ಎಂಬದು ಅವನ ರಾಜಧಾನಿಯು, ಈಗಿನ ಯಾವ ಸ್ಥಾನಕ್ಕೆ ತೋಸಾಲಿ ಎಂದು ಹೇಳುತ್ತಿದ್ದರೆಂಬದನ್ನು ನಿರ್ಣಯಿಸುವ ಸಾಧನವಿಲ್ಲ; ಆದರೂ ಓಡಿಸಾಕ್ಕೆ ಸೇರಿದ ಪುರಿ ಜಿಲ್ಲೆಯಲ್ಲಿ ಯಾವದೊಂದು ಸ್ಥಾನವಾಗಿರಬಹುದೆಂದು ಹೇಳಬಹುದು. ಕಲಿಂಗವನ್ನು ಜಯಿಸಿದ ಬಳಿಕ ಅಶೋಕನು ಬೇರೆ ಯಾವ ಹೊಸ ಯುದ್ದವನ್ನೂ ಮಾಡಿರಲಾರನು, ಮೇಲೆ ಹೇಳಿದ ಶಾಸನದಲ್ಲಿ ಅಶೋಕಮಹಾರಾಜನ ಸಮರಯಾತ್ರಾ ನಾಯಕ ( Wardens of the Mirches ) ರೆಂಬ ಸೇನಾಪತಿಗಳ ಉಲ್ಲೇಖ ವುಂಟು, ಬಹುಶಃ ಬಹಿಃಶತ್ರುಗಳಿಂದ ತನ್ನ ವಿಸ್ತೀರ್ಣವಾದ ರಾಜ್ಯದ ದೂರದೂರದ ಪ್ರದೇಶಗಳನ್ನು ಕಾಪಾಡುವದಕ್ಕಾಗಿ ಅವರನ್ನು ಆಗಾಗ ಅಲ್ಲಿಗೆ ಕಳಿಸಬೇಕಾಗುತ್ತಿರ ಬಹುದು, ಆದರೆ ಆತನ ಮುಂದಿನ ಜೀವನೇತಿಹಾಸವನ್ನು ನೋಡಿದರೆ ಅವನು ಪವಿತ್ರ ವಾದ ಮೈತ್ರೀಧರ್ಮವನ್ನು ಕಾಪಾಡುವದಕ್ಕೂ, ಪ್ರಚಾರಪಡಿಸುವದಕ್ಕೂ ಆರಂಭಿಸಿ ದಂದಿನಿಂದ ರಾಜ್ಯ ಪ್ರಾಪ್ತಿಯ ಆಶೆಗೆ ಇಲ್ಲವೆ ಲೋಭಕ್ಕೆ ವಶನಾಗಿ ಯುದ್ಧದಲ್ಲಿಯೂ ಹಿಂಸೆಯಲ್ಲಿಯೂ ತೊಡಗಿದ್ದು ಕಂಡುಬರುವದಿಲ್ಲ. ಕಲಿಂಗಯುದ್ಧವು ಅಶೋಕನು ಮಾಡಿದ ಮೊದಲನೆಯ ಯುದ್ದವಾಗಿರದಿದ್ದರೂ ಅವನು ತನ್ನ ಮನಸ್ಸಿನಿಂದ ಮಾಡಿದ ಯುದ್ಧಗಳಲ್ಲಿ ಕೊನೆಯದೆಂದು ಹೇಳಲು ಅಡ್ಡಿಯಿಲ್ಲ.