ಪುಟ:ಅಶೋಕ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

\ / $ 1 ... 21/\ \r\ n12 •••• 114 Nov ೭೦. ಅಶೋಕ ಅಥವಾ ಪ್ರಿಯದರ್ಶಿ. ಎ. ಉಪದೇಶಗಳನ್ನು ಕೇಳಿ ಮಹಾರಾಜನಿಗೆ ಬಹಳ ಸಂತೋಷವಾಯಿತು. ಬಳಿಕ ಜನರ ನೆಲ್ಲ ಒಟ್ಟುಗೂಡಿಸಿ ಈ ಪವಿತ್ರ ಧರ್ಮವನ್ನು ಪ್ರಚುರಗೊಳಿಸಬೇಕೆಂಬ ಅಭಿಪ್ರಾಯದಿಂದ ನಿದ್ರೋಧನ ಮತ್ತು ಅವನ ಸಂಗಡಿಗರಾದ ಬೇರೆ ಭಿಕ್ಷುಗಳ ಮುಖದಿಂದ ಬುದ್ಧನ ಉಪ ದೇಶಗಳನ್ನು ಕೇಳತೊಡಗಿದನು. ಕ್ರಮದಿಂದ ಮಹಾರಾಜನು ಬಹಳ ಪ್ರೇಮದಿಂದ ಆ ಸನಾತನ ಧರ್ಮವನ್ನು ಅಂಗೀಕರಿಸಿದನು. ಒಂದೇ ದಿವಸದಲ್ಲಿ ಆತನ ಧರ್ಮದೀಕ್ಷೆ ಯೂ, ಪಟ್ಟಾಭಿಷೇಕವೂ ಜರುಗಿದವು. ಬಿಂದುಸಾರನ ಮರಣದ ತರುವಾಯ ೪ ವರ್ಷ ಗಳಾದ ಮೇಲೆ ಈ ಸಂಗತಿಯು ಒದಗಿತು. ?” ಅಶೋಕನ ಧರ್ಮಗ್ರಹಣವನ್ನು ಕುರಿತು ಮಹಾವಂಶದಲ್ಲಿ ಈ ಮೇರೆಗೆ ಹೇಳಿದ್ದರೂ ಅದು ಸತ್ಯವೆಂದು ನಂಬುವದು ಕಠಿಣವಾಗಿ ರುವದು, ಮಹಾವಂಶದಲ್ಲಿಯೇ ಅಶೋಕನು ಬಿಂದುಸಾರನ ಮರಣವಾದೊಡನೆಯೇ ಸಿಂಹಾಸನವೇರಿದನೆಂದೂ, ಬಳಿಕ ನಾಲ್ಕು ವರ್ಷಗಳ ಮೇಲೆ ಆತನ ಪಟ್ಟಾಭಿಷೇಕವಾಯಿ ತೆಂದೂ ಹೇಳಿರುವದು. ಇದು ನಿಜವಿದ್ದರೂ ಇರಬಹುದು. ಆದರೆ ಏಕಕಾಲದಲ್ಲಿ ಬೌದ್ಧ ಧರ್ಮದೀಕ್ಷೆಯೂ, ಅಭಿಷೇಕೋತ್ಸವವೂ ಅಸಂಭವವೆಂದು ತೋರುವದು ಅಶೋಕನು ಸಿಂಹಾಸನವನ್ನೇರಿದಾಗ ಯುವರಾಜನಾದ ಸುಮನನ ಹೆಂಡತಿಯು ಗರ್ಭಿಣಿಯಿದ್ದಳು. ಮಹಾವಂಶದಲ್ಲಿಯೇ ಇದನ್ನು ಹೇಳಿದೆ. ಈ ಸಂಗತಿಯೂ ನಿಜವೆಂದು ನಂಬಿದರೆ ಪಟಾ ಭಿಷೇಕ ಕಾಲದಲ್ಲಿ ನಿದ್ರೋಧನ ವಯಸ್ಸು ೪ ವರ್ಷಗಳು ಮಾತ್ರ ಇತ್ತೆಂದು ಒಪ್ಪಬೇಕಾ ಗುವದು. ಆದರೆ ಆ ಕಾಲದಲ್ಲಿ ನಿದ್ರೋಧನು ೭ ವರ್ಷದವನಿದ್ದನೆಂದು ಅದೇ ಗ್ರಂಥದಲ್ಲಿ ಹೇಳಿದೆ. ನಾಲ್ಕು ವರ್ಷದ ಬಾಲಕನು ಧರ್ಮದ ಉಚ್ಚ ತತ್ವಗಳನ್ನು ಪ್ರಚಾರಪಡಿಸಲು ಶಕ್ತನಾಗಿದ್ದನೆಂದು ಹೇಳುವದು ಇತಿಹಾಸದೃಷ್ಟಿಯಿಂದ ವಿಶ್ವಾಸಾರ್ಹವಲ್ಲ. ಇದು ಬಹುಶಃ ಮುಂದಿನ ಕಾಲದ ಬೌದ್ದ ಲೇಖಕರು ಬರೆದ ಕಥೆಯೆಂದು ತೋರುವದು. ಧರ್ಮಗ್ರಹಣವಿಷಯವಾಗಿ ಅಶೋಕಾವದಾನದಲ್ಲಿ ಹೇಳಿರುವದೇನಂದರೆ:- ಅಶೋ ಕನು ರಾಜಧಾನಿಯಲ್ಲಿ ನರಕಪುರಿ ಎಂಬ ಒಂದು ಮನೋಹರವಾದ ವಧಾಗಾರವನ್ನು ಕಟ್ಟಿಸಿ ಅಲ್ಲಿ ಚಂಡಗಿರಿಕನೆಂಬವನನ್ನು ಕೊಲೆಗಡಿಕನನ್ನಾಗಿ ನಿಯಮಿಸಿದ್ದನು. ಈ ಕೊಲೆ ವನೆಯಲ್ಲಿ ಸಮುದ್ರಗುಪ್ತನೆಂಬ ಭಿಕ್ಷುವು ತನ್ನ ಅಲೌಕಿಕ ಶಕ್ತಿಯನ್ನು ತೋರ್ಪಡಿಸಿ ಆಶ್ಚರ್ಯವಿಶ್ವಾಸಗಳು ಹುಟ್ಟುವಂತೆ ಮಾಡಿ ಬೌದ್ಧಧರ್ಮದ ಕಡೆಗೆ ಆತನ ಮನಸ್ಸನ್ನೆಳೆ ದುಕೊಂಡನು. ” ಮಹಾವಂಶದಲ್ಲಿ 1 ಅಶೋಕ, ಆತನ ಪತ್ನಿ ಅಸಂಧಿಮಿತ್ರ, ನಿದ್ರೋಧ, ಸಿಂಹಲರಾಜನಾದ ತಿಮ್ಮ .ಇವರ ವಿಷಯವಾಗಿ ಒಂದು ವಿಚಿತ್ರವಾದ ಕಥೆಯುಂಟು: • ಪೂರ್ವದಲ್ಲಿ ವಾರಾಣಸಿಯಲ್ಲಿ ಮೂರು ಜನ ಅಣ್ಣತಮ್ಮಂದಿರು ಜೇನುತುಪ್ಪದ ವ್ಯಾಪಾ ರವನ್ನು ಮಾಡುತ್ತಿದ್ದರು. ಅವರಲ್ಲೊಬ್ಬನು ಅಂಗಡಿಯಲ್ಲಿ ಕುಳಿತು ಮಾರುವವನು, ಉಳಿದ ಇಬ್ಬರು ಜೇನುತುಪ್ಪವನ್ನು ಸಂಗ್ರಹಿಸಿಕೊಂಡು ಬರುವವರು, ಒಬ್ಬ ಪ್ರತ್ಯೇಕ + ೧೩ನೆಯ ಗಿರಿಲಿಸಿ ಸಾಹಾರಾಜಗಿರಿ t ಮಹಾವಂಶ ೫ನೆಯ ಅಧ್ಯಾಯ.