ಪುಟ:ಅಶೋಕ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ೨ಗೆ vvvvvv7-••••••••••••••••••••••••••••••••••••••••MMorwx •//////. ಬುದ್ಧನು* ವಾರಾಣಸಿಗೆ ಪ್ರತಿದಿವಸ ಭಿಕ್ಷೆಗೆ ಹೋಗುತ್ತಿದ್ದನು. ಒಂದು ದಿವಸ ಆತನಿಗೆ ಜೇನತುಪ್ಪವು ಬೇಕಾಯಿತು, ಆದರೆ ವಾರಾಣಸಿಯಲ್ಲಿ ಅದು ಎಲ್ಲಿ ಸಿಗಬಹುದೆಂಬದು ಆತನಿಗೆ ಗೊತ್ತಿರಲಿಲ್ಲ. ರಾಜಮಾರ್ಗದಲ್ಲಿ ಹೋಗುವಾಗ ಆತನು, ದಾರಿಯಲ್ಲಿ ಒಬ್ಬ ತರು ಣಿಯು ಬಾವಿಗೆ ನೀರಿಗೆ ಹೋಗುವದನ್ನು ಕಂಡು ಆಕೆಯ ಬಳಿಯಲ್ಲಿ ಜೇನುತುಪ್ಪವನ್ನು ಬೇಡಿದನು. ಆ ತರುಣಿಯು ಭಿಕ್ಷುವು ಜೇನುತುಪ್ಪವನ್ನು ಬೇಡುತ್ತಿರುವದನ್ನು ತಿಳಿದು ಕೈಯಿಂದ ಪೇಟೆಯನ್ನು ತೋರಿಸಿ ಇತ್ತ ಕಡೆಗೆ ಪೇಟೆಯಿದೆ, ಅಲ್ಲಿ ಹೋಗಿರಿ, ಜೇನು ತುಪ್ಪವು ಸಿಕ್ಕುವದು; ಎಂದು ಹೇಳಿದಳು, ಪ್ರತ್ಯೇಕಬುದ್ಧನು ಪೇಟೆಗೆ ಹೋಗಿ ಜೇನು ತುಪ್ಪದ ಅಂಗಡಿಯನ್ನು ಕಂಡು ಅಂಗಡಿಕಾರನ ಬಳಿಯಲ್ಲಿ 'ಜೇನುತುಪ್ಪವನ್ನು ಬೇಡಿದನು. ಅಂಗಡಿಕಾರನು ಜೇನುತುಪ್ಪ ಬೇಡುವವನು ಸಾಧುಪುರುಷನೆಂದು ತಿಳಿದು ಆತ ನಿಂದ ವರವನ್ನು ಪಡೆದುಕೊಳ್ಳುವ ಆಸೆಯಿಂದ ಆ ಪ್ರತ್ಯೇಕಬುದ್ಧನ ಭಿಕ್ಷಾಪಾತ್ರೆಯ ತುಂಬ ಜೇನುತುಪ್ಪವನ್ನು ದಾನಮಾಡಿದನು. ಆ ಪ್ರತ್ಯೇಕಬುದ್ಧನಿಗೆ ತಾನು ಬಯಸಿದ್ದ ಕ್ಕಿಂತ ಹೆಚ್ಚಿಗೆ ಜೇನುತುಪ್ಪವು ದೊರೆತದ್ದನ್ನು ನೋಡಿ ಮೈಮೇಲೆ ರೋಮಾಂಚಗಳೆ ದ್ದವು. ಆಗ ಅಂಗಡಿಕಾರನು ತಲೆವಾಗಿ-ತಾನು ಈ ಪುಣ್ಯದಿಂದ ಜಂಬೂದ್ವೀಪದ ಏಕಚಕ್ರಾಧಿಪತಿಯಾಗಬೇಕೆಂದೂ, ತನ್ನ ಆಧಿಪತ್ಯವು ಭೂಮಿಯ ಮೇಲೂ ಆಕಾಶದ ಮೇಲೂ ಸಹಸ್ರಯೋಜನಗಳವರೆಗೆ ನಡೆಯಬೇಕೆಂದೂ ಬೇಡಿಕೊಂಡನು. ಇಷ್ಟರಲ್ಲಿ ಉಳಿದ ಇಬ್ಬರು ಅಣ್ಣ ತಮ್ಮಂದಿರು ಅಲ್ಲಿಗೆ ಬಂದರು. ಅವರಲ್ಲಿ ಹಿರಿಯ ಅಣ್ಣನು ಪ್ರತ್ಯೇಕಬುದ್ಧನ ಕಮಂಡುಲು ಜೇನುತುಪ್ಪದಿಂದ ತುಂಬಿದ್ದನ್ನು ನೋಡಿ ಬಹಳ ಸಿಟ್ಟ ಗೆದ್ದನು, ಆದರೆ ಜೇನುತುಪ್ಪ ಮಾರುವವನು-ನಾನು ಈ ಸಾಧುವಿಗೆ ದಾನಮಾಡಿರು ವೆನು; ಬಂದ ಪುಣ್ಯದಲ್ಲಿ ನೀವೂ ಭಾಗಿಗಳು ಎಂದು ಅಣ್ಣನಿಗೆ ಹೇಳಿದನು. ಆದರೆ ಅಣ್ಣನು ಸಿಟ್ಟನ್ನು ತಾಳಲಾರದೆ-IC ಬಹುಶಃ ಈ ಮನುಷ್ಯನು ಪತಿತನಾದ ಚಂಡಾಲ ನಾಗಿರಬೇಕು, ಯಾಕಂದರೆ ಚಂಡಾಲರೇ ಪೀತವಸ್ತ್ರಗಳನ್ನು ಧರಿಸುವರು ” ಎಂದು ಅಂದನು. ನಡುವಿನವನು ಅಣ್ಣನ ಮಾತನ್ನು ಅನುಮೋದಿಸಿ--ಈ ವಂಚಕನಾದ ಭಂಡನನ್ನು ಮಹಾಸಾಗರದ ಆಚೆಗೆ ದಾಟಿಸತಕ್ಕದ್ದು ಎಂದು ಅಂದನು. ಆದರೆ ಚಿಕ್ಕ ವನು ಇಬ್ಬರನ್ನೂ ಸಮಾಧಾನಗೊಳಿಸಿ ಆ ಪ್ರತ್ಯೇಕಬುದ್ಧನ ಬಳಿಯಲ್ಲಿ ಬಹು ನಮ್ರತೆ ಯಿಂದ ವರವನ್ನು ಬೇಡಿದನು.

  • ಪಾಲಿಭಾಷೆಯಲ್ಲಿ ಇವರಿಗೆ ಪಚ್ಚೇಕಬುದ್ಧ ಎಂದು ಅನ್ನುವರು ಮಹಾಯಾನ ಬೌದ್ಧಗ್ರಂಥದಲ್ಲಿ ನಿರ್ವಾಣಮಾರ್ಗಾವಲಂಬಿಗಳಲ್ಲಿ ೩ ವರ್ಗಗಳು೦ಟು, ಶ್ರಾವಕ ಬುದ್ಧರು, ಪ್ರತ್ಯೇಕ ಬುದ್ಧರು, ಸದ್ಯಕ್ಕೆ ಬುದ್ಧರು, ಯಾರು ಪರರ ಸಹಾಯವಿಲ್ಲದೆಯೇ ನಿರ್ವಾಣಲಾಭವನ್ನು ಮಾಡಿಕೊಳ್ಳಲು ಸಮರ್ಥರೋ ಅವರೇ ಪ್ರತ್ಯೇಕಬುದ್ಧರೆನಿಸಿಕೊಳ್ಳುವರು ಯಾರಿಗೂ ಉಪದೇಶಕೊಡುವ ಅಧಿಕಾರವು ಇವರಿಗೆ ಇಲ್ಲ. ಇವರು ತಮಗೆ ತಾವೇ ನಿರ್ವಾಣವನ್ನು ಸಂಪಾದಿಸುವರು. ಅದರಿ೦ದ ಇವರಿಗೆ ಪ್ರತ್ಯೇಕಬುದ್ಧರೆಂದೆನ್ನು ವರು, ಪ್ರತ್ಯೇಕ ಬುದ್ಧರು ಈ ಜನ್ಮದಲ್ಲಿಯೇ ನಿರ್ವಾಣವನ್ನು ಹೊಂದುವರು, ಇವರು ಎಲ್ಲ ವಿಷಯಗಳ ಜಿಯ ಸನ್ಯ ಆ' ಬುದ್ಧನಿಗಿಂತ ಕೆಳಗಿನ ತರಗತಿಯವರು.