ಪುಟ:ಅಶೋಕ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ಅಶೋಕ ಅಥವಾ ಪ್ರಿಯದರ್ಶಿ. MMಒ•••••• +/ ಅಶೋಕನು ಅಹಿಂನಾಪ್ರಧಾನವಾದ ಬೌದ್ಧ ಧರ್ಮದ ಉಪದೇಶವನ್ನು ಹೊಂದಿ ಆ ಹೊಸಧರ್ಮದ ಪರಿಶೀಲನದಲ್ಲಿ ವಿಶೇಷವಾದ ಆಗ್ರಹದಿಂದ ತೊಡಗಿದನೆಂದು ತೋರು ವದು. ಮಹಾವಂಶದಲ್ಲಿ ಹೇಳಿರುವದೇನಂದರೆ-ನಿಗೋಧ ಶ್ರಮಣನಿಂದ ಬೌದ್ದಧರ್ಮ ದೀಕ್ಷೆಯನ್ನು ಸ್ವೀಕರಿಸಿ ಅಶೋಕನು ೬೦ ಸಾವಿರ ಭಿಕ್ಷುಕರನ್ನು ಕರೆಯಿಸಿ ಪಾಟಲಿಪುತ್ರ ದಲ್ಲಿ ಒಂದು ವಿಶಾಲವಾದ ಮರವನ್ನು ಸ್ಥಾಪಿಸಿದನು. ಅದಕ್ಕೆ ಅಶೋಕಾರಾಮವೆಂದು ಹೆಸರಿತ್ತು.x ಅಶೋಕನು ಪ್ರಾಯಶಃ ಅರ್ಹ೦ತರು, ಮತ್ತು ಭಿಕ್ಷುಗಳು ಇವರ ಪವಿತ್ರ 'ವಾದ ಸಹವಾಸಕ್ಕೋಸ್ಕರ ಅಶೋಕಾರಾಮಕ್ಕೆ ಹೋಗುತ್ತಿದ್ದನು. ಕ್ರಮದಿಂದ ಆತನ ಹೃದಯದಲ್ಲಿ ಈ ಹೊಸಧರ್ಮದ ವಿಷಯಕ್ಕೆ ಪ್ರಬಲವಾದ ಅನುರಾಗವುಂಟಾಯಿತು. ಒಂದು ದಿವಸ ಆತನು ಅಲ್ಲಿ ಇದ್ದ ಎಲ್ಲ ಭಿಕ್ಷುಗಳಿಗೆ ಒಂದುಕಡೆಗೆ ಒಟ್ಟುಗೂಡುವದಕ್ಕೆ ಪ್ರಾರ್ಥಿಸಿದನು. ಅಶೋಕಾರಾಮದ ವಿಸ್ತಾರವಾದ ವಿಹಾರದಲ್ಲಿ ೬೦ ಸಾವಿರ ಭಿಕ್ಷುಗಳು ಒಟ್ಟುಗೂಡಿದರು, ಅಶೋಕನು ಅವರನ್ನು ಕುರಿತು ವಿನಯದಿಂದ ಈ ಮೇರೆಗೆ ಪ್ರಶ್ನೆ ಮಾಡಿದನು:--ಮಹಾತ್ಮರೇ, ಬುದ್ದದೇವನು ತೋರಿಸಿದ ಧರ್ಮವು ಯಾವದು ? ಆತನು ಮಾಡಿದ ಉಪದೇಶಗಳು ಎಷ್ಟು ? ಭರತಖಂಡದ ಯಾವ ಯಾವ ಭಾಗಗಳಲ್ಲಿ ಆ ಧರ್ಮ ವು ಹಬ್ಬಿರುವದು? ಆಗ ಸಂಘನಾಯಕನಾದ ಮೌದ್ಧಲಿಪುತ್ರ, ತಿಮ್ಮನು ಈ ಪ್ರಶ್ನೆಗಳಿಗೆ ಉತ್ತರಗಳನ್ನು ಹೇಳಿದನು:- ತಥಾಗತನ ಉಪದೇಶಗಳ ಸಂಖ್ಯೆಯು ಅಪರಿಮಿತವಾದದ್ದು; ಆದರೆ ಮಾನವರ ಕಲ್ಯಾಣಕ್ಕಾಗಿ ೮೪೦೦ ಉಪದೇಶಗಳು ಸಂಗೃಹೀತವಾಗಿ ಪ್ರಚಾರ ಪಡಿಸಲ್ಪಟ್ಟಿವೆ. ಆ ಬಳಿಕ ಮೌದ್ಗಲಿಪುತ್ರ ತಿಷ್ಯನು ಸರಿಯಾಗಿ ಬೌದ್ಧಧರ್ಮದ ಸ್ವರೂಪ ವನ್ನು ವಿವರಿಸಿದನು. ಅಶೋಕನು ಆತನ ವಾಕ್ಷುಧೆಯನ್ನು ಸಾವಧಾನವಾಗಿ ಪಾನಮಾಡ ಹತ್ತಿದನು. ಬುದ್ಧದೇವನು ತೋರಿಸಿದ ಉದಾರವಾದ ಧರ್ಮತತ್ವಗಳನ್ನು ಕೇಳಿ ಅಶೋ ಕನು ಸಂತುಷ್ಟನಾದನು. ಆತನ ಮಾನಸಪಟದಲ್ಲಿ ನಿರ್ವಾಣಧ್ಯಾನಮಗ್ನನಾದ ಶಾಕ್ ರಾಜಪುತ್ರನ ಉಜ್ವಲವಾದ ಚಿತ್ರವು ಮೂಡಿತು. ತಿರತ್ನದ + ಸ್ವರೂಪವನ್ನು ಶ್ರವಣಮಾಡುತ್ತ ಮಾಡುತ್ತ ಆತನ ಹೃದಯವು ಕರ ಗಿತು. ನೂತನವಾದ ಭಕ್ತಿರಸವು ಆತನ ಹೃದಯದಲ್ಲಿ ಪ್ರವಹಿಸತೊಡಗಿತು. ಈ ನೂತನಧರ್ಮವು ಸತ್ಯವೆಂದು ಆತನಲ್ಲಿ ದೃಢವಾದ ನಂಬಿಗೆ ಹುಟ್ಟಿತು. ಅಂದಿನಿಂದಾ ರಂಭಿಸಿ ಅಶೋಕನು ಬುದ್ದ, ಧರ್ಮ, ಸಂಘ ಎಂಬೀ ತ್ರಿರತ್ನದ ಆಶ್ರಯವನ್ನು ಹೊಂದಿ ದನು. ಬುದ್ದದೇವನ ೮೪ ಸಾವಿರ ಉಪದೇಶಗಳು ಲೋಕಪ್ರಸಿದ್ಧವಿದ್ದವು. ಈಗ ಅಶೋಕನು ಲೋಕಕಲ್ಯಾಣಕ್ಕಾಗಿ ತನ್ನ ಸಾಮ್ರಾಜ್ಯದಲ್ಲಿ ೮೪ ಸಾವಿರ ಚೈತ್ಯಗಳನ್ನು ನಿರ್ಮಿಸುವ ಸಂಕಲ್ಪ ಮಾಡಿದನು. ಅಶೋಕನ ಈ ಅಭೂತಪೂರ್ವವಾದ ಸಂಕಲ್ಪವನ್ನು + ಬುದ್ಧ, ಧರ್ಮ, ಸಂಘ. • ವ:ಹಾವ:ಶ,