ಪುಟ:ಅಶೋಕ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೪ ಅಶೋಕ ಅಥವಾ ಪ್ರಿಯದರ್ಶಿ ಸ್ಥವಿರನಾದ ಕಾಶ್ಯಪನು ಅವರನ್ನು ಕುರಿತು-ಬುದ್ಧದೇವನು ಪ್ರಚಾರಪಡಿಸಿದ ಧರ್ಮವು ಜಗತ್ತಿನಲ್ಲಿ ಹಬ್ಬುವದಕ್ಕೂ ಸಮಗ್ರ ಮಾನವಸಮಾಜದ ಕಲ್ಯಾಣಕ್ಕಾಗಿ ಅದನ್ನು ವಿಕಾರಹೊಂದದಂತೆ ಕಾಪಾಡುವದಕ್ಕೂ ಯಾವ ಉಪಾಯಗಳನ್ನು ಮಾಡಬೇಕೆಂಬ ದನ್ನು ಈಗ ನಿಶ್ಚಯಿಸಿರಿ ಎಂದು ಹೇಳಿದನು. ಬಳಿಕ ಭಿಕ್ಷುಗಳಲ್ಲಿ ಅರ್ಹತ್ಪದವನ್ನು ಹೊಂದಿದವರು ಈ ಮಹಾಕಾರ್ಯವನ್ನು ನೆರವೇರಿಸಿರೆಂದು ಹೇಳಿ ಅವರನ್ನು ರಾಜಗ್ಯ ಹಕ್ಕೆ ಕಳುಹಿದನು, ಆ ಸ್ಥಳದಲ್ಲಿಯೇ fವರ್ಷಾವಾಸವನ್ನು ಮುಗಿಸಬೇಕೆಂದು ಅವರು ಮೊದಲು ಆಲೋಚಿಸಿದ್ದರು, ಮತ್ತು ವರ್ಷಾವಾಸದ ಕಾಲದಲ್ಲಿಯೇ ಎಲ್ಲರೂ ಸೇರಿ ಮಹಾಕಾಶ್ಯಪನ ಉದ್ದೇಶವನ್ನು ಕೊನೆಗಾಣಿಸಬೇಕೆಂದು ತಮ್ಮ ಅಭಿಪ್ರಾಯವನ್ನು ಪ್ರಕಟಿಸಿದರು. ಬುದ್ಧದೇವನ ಅತ್ಯಂತ ಪ್ರೀತಿಯ ಶಿಷ್ಯನಾದ •ಆನಂದನು ಇನ್ನೂ ಅರ್ಹತ್ಪದವನ್ನು ಹೊಂದಿರಲಿಲ್ಲವಾದರೂ ಎಲ್ಲರೂ ಆತನಿಗೆ ಧರ್ಮಸಭೆಗೆ ಬರಬೇಕೆಂದು ಬೇಡಿಕೊಂಡರು. ಆನಂದನಿಲ್ಲದೆ ಧರ್ಮಸಭೆಯ ಕಾರ್ಯವೂ ಪೂರ್ಣವಾಗಲಾರದೆಂದು ಎಲ್ಲರ ಅಭಿಪ್ರಾಯವಿತ್ತು. ಆಮಂತ್ರಿತರಾದ ಭಿಕ್ಷುಗಳ ಹೊರತು ಉಳಿದವರು ಯಾರೂ ಅಲ್ಲಿಗೆ ಬರಕೂಡದೆಂದು ಗೊತ್ತಾಗಿತ್ತು. ಬಳಿಕ ಪೌರ್ಣಿಮೆಯ ದಿವಸ ಅವರೆಲ್ಲರೂ ರಾಜಗೃಹದಲ್ಲಿ ಸೇರಿದರು, ಕಾಶ್ಯಪ ಮೊದಲಾದ ಪ್ರಮುಖರು ಮಗಧರಾಜನಾದ ಅಜಾತ ಶತ್ರುವಿನ ಬಳಿಗೆ ಹೋಗಿ ತಾವು ವರ್ಷಾವಾಸದ ೩ ತಿಂಗಳನ್ನು ಇಲ್ಲಿಯೇ ಕಳೆಯುತ್ತೇ ವೆಂದೂ, ವಿಹಾರಾದಿಗಳನ್ನು ಸರಿಪಡಿಸಿಕೊಡಬೇಕೆಂದೂ ಕೇಳಿಕೊಂಡರು. ಅಜಾತಶತ್ರು ಮಹಾರಾಜನು ಅವರ ಪ್ರಾರ್ಥನೆಯನ್ನು ಕೇಳಿ ಒಡನೆಯೆ ವಿಹಾರಾದಿಗಳನ್ನು ಸರಿಪಡಿಸಿ ರೆಂದು ಅಪ್ಪಣೆಯನ್ನು ಸಾರಿದನು. ವೈಭಾರಪರ್ವತದ ಪಕ್ಕದಲ್ಲಿ ಸಪ್ತಪರ್ಣಿ ಗುಹೆಯ ಎದುರಿಗೆ ಧರ್ಮಮಹಾಸಭೆಯ ಸಲುವಾಗಿ ಒಂದು ವಿಸ್ತಾರವಾದ ಸಭಾಗ್ಯ

  • ಪಾಲಿ ಬೌದ್ಧಗ್ರಂಥಗಳಲ್ಲಿ ನಿರ್ವಾಣಮಾರ್ಗಾವಲಂಬಿಗಳಲ್ಲಿ ೪ ವರ್ಗಗಳು ಮಾಡಲ್ಪಟ್ಟಿವೆ. ಅವು-ಸೋತಾಪತ್ತಿ, ಸಕೃದಾಗಾಮಿ, ಅನಾಗಾಮಿ, ಅರ್ಹತೆ, ನಿರ್ವಾಣಮಾರ್ಗದಲ್ಲಿ ಸೇರಿ ಬಹಳ ದಿನ ಸಗಳಾಗದವರಿಗೆ ಸೋತಾಪತ್ತಿ ಎಂದೂ, ಒಂದು ಜನ್ಮವನ್ನು ಕಳೆದು ನಿರ್ವಾಣವನ್ನು ಹೊಂದುವವರಿಗೆ ಸಕೃದಾಗಾಮಿ ಎಂದೂ, ಇದೇ ಜನ್ಮದಲ್ಲಿ ನಿರ್ವಾಣವನ್ನು ಹೊಂದಿ ಪುನರ್ಜನ್ಮವಿಲ್ಲದವರಿಗೆ ಅನಾಗಾಮಿ ಎಂದೂ, ಸಂಪೂರ್ಣ ವಾಗಿ ಮುಕ್ತಾವಸ್ಥೆಯನ್ನು ಹೊಂದಿದವರಿಗೆ ಅರ್ಹತೆ ಎಂದೂ ಹೆಸರು

- ಆಷಾಢ ಪೌರ್ಣಿಮೆಯಿಂದ ಆಶ್ವಿನ ಪೌರ್ಣಿಮೆಯ ವರೆಗೆ ಭಿಕ್ಷುಗಳು ಒಂದೇ ಸ್ಥಳದಲ್ಲಿ ವಾಸ ಮಾಡುತ್ತಿದ್ದರು. ಆಗ ಅವರು ಧರ್ಮಾಲೋಚನೆಯಲ್ಲಿಯ, ಶಾಸ್ತ್ರ ವಿಚಾರದಲ್ಲಿ ಕಾಲಕಳೆಯು ವರು, ಉಳಿದ ಕಾಲದಲ್ಲಿ ದೇಶದಲ್ಲಿ ಧರ್ಮ ಪ್ರಚಾರಮಾಡುತ್ತ ಸಂಚಾರಮಾಡುವರು. ವರ್ಷಾಕಾಲದಲ್ಲಿ ಒಂದು ಸ್ಥಳದಲ್ಲಿರುವದಕ್ಕೆ ವರ್ಷಾವಾಸವೆಂದು ಹೆಸರು. ಇದು ಬಹು ಪ್ರಾಚೀನ ಪದ್ದತಿಯು, ಬುದ್ಧ ದೇವನು ತಾನೇ ಈ ಪದ್ಧತಿಯನ್ನಾರಂಭಿಸಿದನು. - • ಆನಂದಸು ಬುದ್ಧದೇವನ ಕಕ್ಕನಾದ ಅಮೃತೋದನನ ಮಗನು, ಈತನನ್ನು ಭಿಕ್ಷುಗಳು ಬುದ್ಧನ ಉಪಸ್ಥಾಪಕ (Attendant ) ನನ್ನಾಗಿ ನಿಯಮಿಸಿದ್ದರು.