ಪುಟ:ಅಶೋಕ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ ೮೧ ನೆರೆದಿದ್ದರು. ಅಲ್ಲಿ ಒಂದು ನೀರು ತುಂಬಿದ ಸುವರ್ಣ ಪಾತ್ರವನ್ನು ಸ್ಥಾಪಿಸಿ ಭಿಕ್ಷುಗಳು ಭಿಕ್ಷುಗಳಲ್ಲದ ಬೌದ್ದರಿಗೆ ತಮ್ಮ ಉಪಯೋಗಕ್ಕಾಗಿ ಆ ಪಾತ್ರೆಯಲ್ಲಿ ಕಾರ್ಖಾಪಣ ಎಂಬ ಸುವರ್ಣನಾಣ್ಯಗಳನ್ನು ಹಾಕುವದಕ್ಕೆ ಹೇಳಿದರು. ಈ ಪದ್ಧತಿಯು ಬುದ್ಧ ದೇವನ ಉಪದೇಶದ ಹೊರಗಿನದಾದ್ದರಿಂದ ಯಶನು ಇದನ್ನು ಬಹಳವಾಗಿ ನಿಷೇಧಿಸಿ ದನು. ಆಗ ವೈಶಾಲೀಭಿಕ್ಷುಗಳು ಅವನಿಗೆ ಪ್ರತಿಶರ್ರಣೀಯಾ + ಶಿಕ್ಷೆಯನ್ನು ವಿಧಿಸಿದರು. ಯಶನು ತನಗೆ ಶಿಕ್ಷೆಯನ್ನು ವಿಧಿಸಿದ್ದನ್ನು ಕೇಳಿ ವಾಟಲಿಪುತ್ರಕ್ಕೆ ಬಂದು ಅಲ್ಲಿ ಬೌದ್ಧ ಧರ್ಮದ ಶುದ್ದ ಸ್ವರೂಪವನ್ನು ಪ್ರಚಾರಮಾಡತೊಡಗಿದನು. ಈ ಸುದ್ದಿಯನ್ನು ಕೇಳಿ ಮಹಾವನವಿಹಾರದ ಭಿಕ್ಷುಗಳು ಸಿಟ್ಟಿಗೆದ್ದು ಯಶನಿಗೆ ಉಪೇಕ್ಷಣೀಯಾ ಶಿಕ್ಷೆಯನ್ನು ವಿಧಿಸಬೇಕೆಂದು ಅಲ್ಲಿಗೆ ಬಂದರು; ಮತ್ತು ಯಶನ ಆಶ್ರಮದ ನಾಲ್ಕೂ ದಿಕ್ಕುಗಳಲ್ಲಿ ಇಳಿದುಕೊಂಡರು. ಸ್ಥವಿರಯುಶನು ಅವರ ಈ ನಡತೆಯನ್ನು ನೋಡಿ ವ್ಯಧೆಬಟ್ಟು ಕೌಶಾಂಬೀ*ನಗರಕ್ಕೆ ಹೋದನು. ಅಲ್ಲಿಂದ ಪಾಭೇxಯ್ಯದ ಮತ್ತು ಅವಂತಿಯ + ಇದೊಂದು ಶಿಕ್ಷೆಯು, ಯಾವನೊಬ್ಬ ಭಿಕ್ಷುವು ನಿಷ್ಕಾರಣವಾಗಿ ಯಾವನೊಬ್ಬ ಗೃಹಸ್ಥನ ವಿಷ ಯವಾಗಿ ಯಾವದೊ೦ದು ಅಪರಾಧಮಾಡಿದರೆ ಆ ಅಪರಾಧಕ್ಕಾಗಿ ಕ್ಷಮೆ ಬೇಡುವದಕ್ಕೆ ಪ್ರತಿಶರಣೀಯ ಶಿಕ್ಷೆಯನ್ನು ವರು.

  1. ಕೌಶಾಂಬಿಯು ಇತಿಹಾಸಪ್ರಸಿದ್ಧವಾದ ಸ್ಥಳವು ಪ್ರಾಚೀನ ಹಿಂದು, ಬೌದ್ಧ ಗ್ರಂಥಗಳಲ್ಲಿ ಇದರ ಉಲ್ಲೇಖವುಂಟು, ಪ್ರಯಾಗದಿಂದ ೧೬/೧೭ ಕೋಶಗಳ ಅಂತರದಲ್ಲಿ ಯಮುನಾನದಿಯ ಮೇಲೆ ಪ್ರಾಚೀನ ಕೌಶಾಂಬೀನಗರಿಯಿತ್ತು, ಈಗಿನ ಕೋಶಾವು ಎ೦ಬ ಊರೇ ಕೌಶಾಂಬಿಯ) ಸ್ಥಾನವೆಂದು ಐತಿಹಾಸಿಕರು ಹೇಳುವರು ಒಂದು ಕಾಲದಲ್ಲಿ ಕೌಶಾಂಬಿಯು ಸಂಪೂರ್ಣ ಉತ್ತರಹಿಂದುಸ್ಥಾನದ ರಾಜಧಾನಿಯಾಗಿತ್ತು. ಹಸ್ತಿನಾಪುರವು ನಾಶಹೊಂದಿದ ಮೇಲೆ ಈ ಸ್ಥಳಕ್ಕೆ ಪಾಂಡವರು ರಾಜಧಾನಿ ಯನ್ನು ಒಯ್ದರು. ರಾಮಾಯಣದಂಥ ಪ್ರಾಚೀನ ಸಂಸ್ಕೃತ ಗ್ರಂಥದಲ್ಲಿಯೂ ಇದರ ಉಲ್ಲೇಖವುಂಟು. ಕಾಲಿದಾಸನು ತನ್ನ ಮೇಘದೂ ತ» ದಲ್ಲಿ ಕೌಶಾಂಬೀರಾಜನಾದ ಉದಯನನ ವಿಷಯವನ್ನು ವರ್ಣಿ ಸಿರು ವನು. ರಾತ್ಸಾ ವಲಿ ಎ೦ಬ ಸ೦ಸ್ಕೃತ ನಾಟಕದಲ್ಲಿ ಉದಯನ ರಾಜನೆಂಬ ಹೆಸರಿಗೆ ಬದಲು ವತ್ಸರಾಜ ನೆಂದು ಹೇಳಿದೆ. ಲಲಿ ತವಿಸ್ತರವೆ೦ಬ ಪ್ರಾಚೀನ ಬೌದ್ಧಗ್ರಂಥದಲ್ಲಿ ಬುದ್ಧದೇವನು ಜನ್ಮ ಹೊಂದಿದ ದಿವಸವೇ ಕೌಶಾಂಬೇರಾಜನಾದ ಸತಾನಿಕನಿಗೆ ಉದಯನವತ್ಥನೆಂಬ ಮಗನು ಹುಟ್ಟಿದನೆಂದು ಹೇಳಿದೆ. ಉದಯನವತ್ಸನ ಕೀರ್ತಿಯು ತಿಬೇಟದ ನಿವಾಸಿಗಳಿಗೂ ಗೊತ್ತಿತ್ತು. ಭರತಖಂಡದ ೧೮ ರಾಜಧಾನಿ ಗಳಲ್ಲಿ ಕೌಶಾಂಬಿಯೊ ಂದಾಗಿತ್ತೆಂದು ಸಿಂಹಲt ಗ್ರಂಥದಲ್ಲಿಯೂ ಹೇಳಿದೆ, ಬುದ್ದದೇವನು ಬುದ್ಧತ್ವ ಹೊಂದಿದ ೬ನೆಯ ಮತ್ತು ೯ ನೆಯ ವರ್ಷಗಳನ್ನು ಈ ಸ್ಥಳದಲ್ಲಿಯೇ ಕಳೆದು, ಉದಯನನಕ್ಕೆ ರಾಜನು ಚಂದನ ಕಟ್ಟಿಗೆಯ ಒಂದು ಬುದ್ದ ಮೂರ್ತಿಯನ್ನು ತನ್ನ ರಾಜಧಾನಿಯಲ್ಲಿ ಸ್ಥಾಪಿಸಿದ್ದನ್ನು ಹುಯೇನ ಸಾಂಗನು ಹಿಂದುಸ್ಥಾನದಲ್ಲಿ ಸಂಚರಿಸುವಾಗ ಈ ಮೂರ್ತಿಯನ್ನು ನೋಡಿದ್ದನ್ನು, ಒಂದು ಹಳೆಯ ಕೋಟೆಯ ಅವಶೇಷವು ಮಾತ್ರ ಈಗ ಈ ಸ್ಥಳದಲ್ಲಿ ಉಳಿದಿದೆ,

• ಪಾಭಾ ಎ೦ಬ ಊರ ಹೆಸರಿನಿಂದ ಅಲ್ಲಿಯ ವಿಹಾರಕ್ಕೆ ಈ ಹೆಸರು ಬಂದಿದೆ. * Wilson Meghaduta I Foucaux translation of the tibetanversion of the Lalita Vistara 8 Usoina de Koro8. Hardy Mynual of Buddhisin. * Julien Hiouen Thsang.