ಪುಟ:ಅಶೋಕ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, vvvvvvvvvvvvv vvvvvv YYYidsvvvvvv

  • \ \/

\r\\ • ಭಿಕ್ಷುಗಳಿಗೆ ಈ ವರ್ತಮಾನವನ್ನು ಕಳುಹಿ ಭಾಗೀರಥಿಯನ್ನು ದಾಟಿ ಅಹೋಗಂಗಾ ಪರ್ವತಕ್ಕೆ ಬಂದನು, ಮತ್ತು ಅಲ್ಲಿ ಭಿಕ್ಷುಸಂಭೂತನೆಂಬವನಿಗೆ ಎಲ್ಲ ವೃತ್ತಾಂತವನ್ನ ರು ಹಿದನು. ಯಶನ ವಿಷಯವಾಗಿ ವೃಜಿದೇಶದ ಭಿಕ್ಷುಗಳು ನಡೆಸಿದ ಅನ್ಯಾಯದ ವ್ಯವ ಹಾರವನ್ನು ಕೇಳಿ ನಾನಾದೇಶದ ಭಿಕ್ಷುಗಳು ಗುಂಪುಗುಂಪಾಗಿ ಅಲ್ಲಿಗೆ ಬರಹತ್ತಿದರು. ಸುಮಾರು ೯೦ ಸಾವಿರ ಭಿಕ್ಷುಗಳು ಅಲ್ಲಿ ಸೇರಿದ್ದರೆಂದು ಮಹಾವಂಶದಲ್ಲಿ ವರ್ಣಿಸಲ್ಪ ಔದೆ. ಬಳಿಕ ಅಲ್ಲಿ ಒಟ್ಟುಗೂಡಿದ ಎಲ್ಲರೂ ವಿಚಾರಮಾಡಿ ಆ ಕಾಲದಲ್ಲಿ ಸಂಘಕ್ಕೆ ನಾಯಕನೆನಿಸಿದ ಸ್ಥವಿರರೇವತನ ಬಳಿಯಲ್ಲಿ ಈ ಎಲ್ಲ ವೃತ್ತಾಂತವನ್ನು ಹೇಳಿ ಇದರ ನಿರ್ಣಯಮಾಡಿಸಬೇಕೆಂದು ನಿಶ್ಚಯಿಸಿದರು. ಬಳಿಕ ಎಲ್ಲರೂ ರೇವತನಿದ್ದೆಡೆಗೆ ಹೊರಟರು. ರೇವತನು ಶಾಂತಮನಸ್ಸಿನಿಂದ ಎಲ್ಲ ಕಥೆಯನ್ನು ಕೇಳಿ ಎಲ್ಲರಿಗೂ ವೈಶಾಲಿಗೆ ಹೋಗಹೇಳಿದನು. ತಾನೂ ಅಲ್ಲಿಗೆ ಹೊರಟನು. ರೇವತನು ಬಂದದ್ದನ್ನು ಕೇಳಿ ಆತ ನನ್ನು ತಮ್ಮ ಪಕ್ಷಕ್ಕೆ ಎಳೆದುಕೊಳ್ಳಬೇಕೆಂದು ವೈಶಾಲಿಯ ಭಿಕ್ಷುಗಳು ಹಲವು ಕಾಣಿಕೆ ಗಳನ್ನು ತೆಗೆದುಕೊಂಡು ಆತನ ಬಳಿಗೆ ಬಂದರು. ಆದರೆ ರೇವತನು ಆ ಕಾಣಿಕೆಗಳನ್ನು ಸ್ವೀಕರಿಸದೆ ಅವರಿಗೆ ಹೋಗಲಪ್ಪಣೆಕೊಟ್ಟನು. ಅದರಿಂದ ಆ ಭಿಕ್ಷುಗಳು ನಿರಾಶರಾಗಿ ರಾಜಧಾನಿಯಾದ ಪುಷ್ಪಪುರಕ್ಕೆ ಹೋಗಿ ಕಾಲಾಶೋಕಚಕ್ರವರ್ತಿಯ ಸಮೀಪಕ್ಕೆ ಬಂದರು, ಕಾಲಾಶೋಕನು ನೀವು ಬಂದಕಾರಣವೇನೆಂದು ಕೇಳಲು--ನಾವು ಗೌತಮ ಬುದ್ಧನು ತೋರಿಸಿದ ಧರ್ಮವನ್ನು ಪ್ರಸಾರಗೊಳಿಸುವದಕ್ಕಾಗಿ ಮಹಾವನವಿಹಾರದಲ್ಲಿ ವಾಸಮಾಡುತ್ತಿರುವೆವು, ನಾನೇ ಈವರೆಗೆ ಈ ಪ್ರಸಿದ್ಧ ವಿಹಾರವನ್ನು ಕಾಪಾಡುತ್ತಿರು ವೆವು, ಈಗ ಬೇರೆ ಸ್ಥಳದಿಂದ ಭಿಕ್ಷುಗಳು ನಮ್ಮ ವಿಹಾರವನ್ನು ಆಕ್ರಮಿಸುವದಕ್ಕೋ ಸ್ಮರ ವೈಶಾಲಿಗೆ ಬರುತ್ತಿರುವರು. ತಾವು ಅವರನ್ನು ಪ್ರತಿಬಂಧಿಸಬೇಕು” ಎಂದು ಅವರು ಹೇಳಿದರು. ಅರಸನು ಆಶ್ವಾಸನಕೊಟ್ಟು ಅವರನ್ನು ವೈಶಾಲಿಗೆ ಕಳುಹಿಸಿದನು. ಇತ್ತ ಕಾಲಾಶೋಕನು ಅಸಂಖ್ಯಭಿಕ್ಷುಗಳು ವೈಶಾಲಿಯ ಕಡೆಗೆ ಬರುತ್ತಿರುವ ದನ್ನು ದೂತರಿಂದ ಕೇಳಿ ಕೂಡಲೆ ಮಹಾವನ ಭಿಕ್ಷುಗಳ ಸಂರಕ್ಷಣಕ್ಕಾಗಿ ತನ್ನ ಅಮಾ ನ್ಯರನ್ನು ಕಳಿಸಿದನು, ಆದರೆ ಅವರು ತಪ್ಪಿ ಬೇರೆ ದಾರಿಯಿಂದ ಹೋದರು. ಆ ದಿವಸ ಮಧ್ಯರಾತ್ರಿಯಲ್ಲಿ ಅರಸನಿಗೆ ಒಂದು ಸ್ವಷ್ಟವು ಬಿದ್ದಿತು. ಆ ಸ್ವಪ್ನದಲ್ಲಿ ತಾನು ಲೋಹ ಕುಂಭಿ ಎಂಬ ನರಕದಲ್ಲಿ ಹೊರಳಾಡುವಂತೆಯೂ, ಭಯಪೀಡೆಗಳಿಂದ ಒದರುತ್ತಿರು ವಂತೆಯೂ ಇರುವಾಗ ಎದುರಿಗೆ ತನ್ನ ತಂಗಿಯಾದ ನಂದಿಯೆಂಬ ಪವಿತ್ರಾಚರಣೆಯ ಭಿಕ್ಷುಣಿಯು ಆಕಾಶಮಾರ್ಗದಿಂದ ಅಲ್ಲಿಗೆ ಬಂದು ಕಾಲಾಶೋಕನನ್ನು ಉದ್ದೇಶಿಸಿ ಅಣ್ಣನೇ, ನೀನು ಮಾಡಿದ ಕೆಲಸವು ಬಹಳ ಅನ್ಯಾಯವಾದದು, ನಿಷ್ಠೆಯುಳ್ಳವರೂ,

  • ದುಖಾನಂಶ