ವಿಷಯಕ್ಕೆ ಹೋಗು

ಪುಟ:ಅಶೋಕ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, ಉ hhhhrihAf••• <shri 11 * 4 1 1 1\: \r\ * * * * * * *1* *v 1 \111\\ # * * * * * * * * * * * * \ #1) 1/11/1/# \ 11 (* *. ಜಿತೇಂದ್ರಿಯರೂ ಆದ ಅರ್ಹ೦ತರ ಬಳಿಯಲ್ಲಿ ನೀನು ನಿನ್ನ ಅಪರಾಧಕ್ಕಾಗಿ ಕ್ಷಮೆಯನ್ನು ಬೇಡುವದು ಒಳ್ಳೆಯದು; ಅವರ ಉದ್ದೇಶವನ್ನು ತಿಳಿದುಕೊಂಡು ಸತ್ಯಧರ್ಮದ ಪ್ರಸಾರ ವನ್ನು ಮಾಡು ಎಂದು ಹೇಳಿ ಅವಳು ಅಂತರ್ಧಾನಹೊಂದಿದಂತೆ ಆಯಿತು. ಬೆಳಗ್ಗೆ ಅರಸನು ಹಾಸಿಗೆಯಿಂದ ಎದ್ದು ಕನಸಿನ ವಿಷಯವಾಗಿ ಹಲವು ಆಲೋಚನೆಗಳನ್ನು ಮಾಡಿದನು. ಕೊನೆಗೆ ಏನೂ ತೋರದೆ ಮನಸ್ಸಿನಲ್ಲಿ ಸಮಾಧಾನವಿಲ್ಲದೆ ವೈಶಾಲಿಯ ಕಡೆಗೆ ಹೊರಟನು. ಅಲ್ಲಿ ಮಹಾವನವಿಹಾರಕ್ಕೆ ಬಂದು ಭಿಕ್ಷುಸಂಘವನ್ನು ಕರೆಯಿಸಿ ಪಕ್ಷಪಾತವಿಲ್ಲದೆ ಎರಡೂ ಪಕ್ಷಗಳ ವೃತ್ತಾಂತವನ್ನು ಕೇಳಿಕೊಂಡನು. ಕೊನೆಗೆ ರೇವತ ಮೊದಲಾದವರ ಪಕ್ಷವಾಗಿ ತನ್ನ ಅಭಿಪ್ರಾಯವನ್ನು ಕೊಟ್ಟನು. ಆಗ ಭಿಕ್ಷುಗಳೆಲ್ಲ ಮಹಾವನವಿಹಾರದಲ್ಲಿ ಸೇರಿ ಹತ್ತು ತರದ ನಿಸಿದ್ದ ವಸ್ತುಗಳ ವಿಚಾರವನ್ನು ಮಾಡತೊಡಗಿದರು. ಮುಂದೆ ಅಲ್ಲಿ ಭಯಂಕರವಾದ ವಿವಾದವ ಆರಂಭ ವಾಯಿತು. ಎರಡೂ ಪಕ್ಷಗಳ ಭಿಕ್ಷುಗಳು ಹಲವು ಯುಕ್ತಿಗಳಿಂದ ತಮ್ಮ ತಮ್ಮ ಮತ ವನ್ನು ಸಮರ್ಥಿಸತೊಡಗಿದರು. ಮಹಾಸ್ಥವಿರನಾದ ರೇವತನು ಆ ದೊಡ್ಡ ಕೋಲಾಹಲ ವನ್ನು ಕೇಳಿ ಸಭೆಯ ಮಧ್ಯದಲ್ಲಿ ನಿಂತು ( ಉವ್ಯೂಹಿಕಾ... ?” ವಿಧಿಯನ್ನನುಸರಿಸಿ ಈ ಪ್ರಶ್ನದ ನಿರ್ಣಯವು ಮಾಡಲ್ಪಡುವದು ಎಂದು ಹೇಳಿದನು. ಸ್ಥವಿರರೇವತನ ಸೂಚನೆಯ ಮೇರೆಗೆ ೮ ಜನ •ಭಿಕ್ಷುಗಳು ಆರಿಸಲ್ಪಟ್ಟರು. ಈ ಎಂಟು ಜನರಲ್ಲಿ ಪತಿನಾವಿಹಾರದ ಸರ್ವಕಾಮಿ, ಶಲ್ಯ, ಕುಯ್ಯಶೋಭಿತ, ವಾಸವಗಾಮಿಕ ಎಂಬ ನಾಲ್ವರು ಭಿಕ್ಷುಗಳೂ, ಪಾಛೇಯ್ಯ ವಿಹಾರದ ಸ್ಥವಿರರೇವತ, ಸಂಭೂತ, ಕಾಕಂಡಪತ್ರಯಶ, ಸುಮನ ಎಂಬ ನಾಲ್ವರು ಭಿಕ್ಷುಗಳೂ ಇದ್ದರು. ಇವರು ವಾಲುಕಾರಾಮವಿಹಾರಕ್ಕೆ ಹೋದರು. ಈ ವಿಹಾರವು ಅತ್ಯಂತ ನಿರ್ಜನಪ್ರದೇಶದಲ್ಲಿತ್ತು. ಜನಕೋಲಾಹಲವಂತೂ ಒಂದೆಡೆಗಿರಲಿ, ಪಕ್ಷಿಗಳ ಕೂಗುಸಹ ಅಲ್ಲಿ ಕೇಳಬರುತ್ತಿರಲಿಲ್ಲ. ಕೆಲವು ದಿವಸಗಳಾದಬಳಿಕ ಮಹಾಸ್ಥವಿರ ರೇವತನು ದಶವಿಧ ವಸ್ತುಗಳಲ್ಲಿ ಒಂದೊಂದನ್ನೇ ಕುರಿತು ವಿಚಾರಿಸತೊಡಗಿದನು. ಅರ್ಹ೦ತನಾದ ಸರ್ವ'ಕಾಮಿಯು ಅಧ್ಯಕ್ಷನಾಗಿ ರೇವತನನ್ನುದ್ದೇಶಿಸಿ-ಬೌದ್ದ ಶಾಸ್ತ್ರವನ್ನ ನುಸರಿಸಿ ಈ ದಶವಿಧ ವಸ್ತುಗಳ ಆಚರಣವು ನಿಷಿದ್ದವು; ಯಾರು ಈ ಶಾಸ್ತ್ರವಿಧಿಯನ್ನು ಪಾಲಿಸುವದಿಲ್ಲವೋ ಅವರು ಶಿಕ್ಷಾರ್ಹರು; ಎಂದು ಹೇಳಿದನು. ಸರ್ವಕಾಮಿಯು ಶಾಸ್ತ್ರ ಯುಕ್ತಿಗಳನ್ನು ತೋರಿಸಿ ದಶವಿಧ ವಸ್ತುಗಳು ನಿಷಿದ್ಧವೆಂಬದನ್ನು ಸಿದ್ಧ ಪಡಿಸಿದನು. ಇದ ರಿಂದ ಮೇಲೆ ಹೇಳಿದ ವೈಶಾಲಿಯ ಭಿಕ್ಷುಗಳಿಗೆ ಪಾತ್ಯರೂಪಶಿಕ್ಷೆಯನ್ನು ( ಭಿಕ್ಷುಗಳ 8ಉವಾಹಿಕಾ ( ಉದ್ಘಾಹಿಕ) ಎಂಬದು ಯಾವದೊಂದು ಅಪರಾಧಕ್ಕಾಗಿ ಭಿಕ್ಷುಸಂಘದಿಂದ ಬಹಿ ಪ್ಯಾರ ಹಾಕುವ ಶಿಕ್ಷೆಯ ಹೆಸರು, ( ಮಹಾವಂಶ ). -+ ಸ್ಥವಿರ ಸರ್ವಕಾಮಿ, ಶಲ್ಯ, ರೇವತ, ಕುಯ್ಯ ಶೋಭಿತ, ಯಶ ಇವರು ಮಹಾಸ್ಟವಿರ ಆನಂದನ, ಮತ್ತು ವಸತಗಾಮಿಕಾ, ಸುಖನ ಇವರು ಅನುರುದ್ದನ ಶಿಷ್ಯರಾಗಿದ್ದರು, ಎಂದು ಹೇಳಲ್ಪಟ್ಟಿದೆ.

  • ಭಿಕ್ಷುವಿನ ಅಧಿಕಾರದಿಂದ ಹೊರಸೂಸುಡಿನದು.