ಪುಟ:ಅಶೋಕ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ೪ ಅಶೋಕ ಅಥವಾ ಪ್ರಿಯದರ್ಶಿ www ಅಧಿಕಾರದಿಂದ ಬಿಡುಗಡೆಮಾಡುವದು ) ವಿಧಿಸಿದರು. ಬೌದ್ಧಧರ್ಮದ ಪವಿತ್ರತೆಯನ್ನು ಕಾಪಾಡುವದಕ್ಕೋಸ್ಕರ ಮಹಾಸ್ತವಿರರೇವತನು ಅರ್ಹತ್ರದವನ್ನು ಹೊಂದಿದ ೭೦೦ ಜನ ಭಿಕ್ಷುಗಳನ್ನು ಕರೆಯಿಸಿ ವಾಲುಕಾರಾಮದಲ್ಲಿ ಒಂದು ಧರ್ಮ ಮಹಾಸಭೆಯನ್ನು ನೆರವೇರಿ ಸಿದನು. ಕಾಲಾಶೋಕರಾಜನ ಆಳಿಕೆಯ ೧೦ನೆಯ ವರ್ಷ ರೇವತನ ಅಧ್ಯಕ್ಷತೆಯಲ್ಲಿ ಈ ಕಾರ್ಯಗಳು ನೆರವೇರಿಸಲ್ಪಟ್ಟವು. ಈ ಎರಡನೆಯ ಬೌದ್ಧ ಧರ್ಮಮಹಾಸಭೆಯ ಕಾರ್ಯವು ಮುಗಿಯುವದಕ್ಕೆ ೮ ತಿಂಗಳು ಹಿಡಿದವು, ಈ ಕಾಲದಿಂದ ಬೌದ್ಧ ಧರ್ಮದಲ್ಲಿ ೧೮ ಸಾಂಪ್ರ*ದಾಯಗಳ ಉತ್ಪತ್ತಿಯಾಯಿತು. ಎರಡನೆಯ ಮಹಾಸಭೆಯು ಮುಗಿದ ಬಳಿಕ ಮುಂದೆ ಅಶೋಕಮಹಾರಾಜನ ಕಾಲದಲ್ಲಿ ೩ನೆಯ ಧರ್ಮ ಮಹಾಸಭೆಯು ನೆರೆಯಿಸಲ್ಪಟ್ಟಿತು. ಅಶೋಕನ ಪಟ್ಟಾಭಿಷೇಕ ವಾದ ೧೭ ವರ್ಷಗಳ ತರುವಾಯ ಈ ಸಭೆಯು ಕೂಡಿತು. ಅಶೋಕಾರಾಮದಲ್ಲಿ ಮಹಾ ಸ್ಥವಿರ ಮೌದ್ಧಲಿಪುತ್ರ ತಿಷ್ಯನು ಈ ಕಾಲಕ್ಕೆ ಎಲ್ಲಕ್ಕೂ ಮುಖ್ಯ ಸಂಘನಾಯಕನಾಗಿ ದ್ದನು. ಸ್ವಾರ್ಥಪರರೂ, ಲೋಭಿಗಳೂ ಆದ ಕಪಟಭಿಕ್ಷುಗಳಿಂದ ಬೌದ್ಧ ಧರ್ಮಕ್ಕೆ ಗ್ಲಾನಿಯು ಒದಗುತ್ತಿರುವದನ್ನು ನೋಡಿ ಆತನು ಬಹಳ ನೊಂದಿದ್ದನೆಂದು ಹೇಳಿದೆ. ಅವನು ಭವಿಷ್ಯದೃಷ್ಟಿಯಿಂದ ಮುಂದಿನಕಾಲದ ಅಧಃಪತನವನ್ನು ತಿಳಿದು ತನ್ನ ಪ್ರಿಯ ಶಿಷ್ಯನಾದ ಮಹೇಂದ್ರನಿಗೆ ಶಿಷ್ಯಮಂಡಲಿಯ ಭಾರವನ್ನೆಲ್ಲ ಅರ್ಪಿಸಿ ತಾನು ಅಹೋ ಗಂಗಾಪರ್ವತಕ್ಕೆ ತಪಸ್ಸಿಗಾಗಿ ಹೊರಟುಹೋದನು. ಪೂರ್ವದಲ್ಲಿ ಎಷ್ಟೋ ಜನ ಸೋಮಾರಿಗಳು ರಾಜಾಶ್ರಯದಲ್ಲಿದ್ದರು. ಅಶೋಕನ ಕಾಲದಲ್ಲಿ ಅವರೆಲ್ಲ ಹೊರಗೆ ಹಾಕಲ್ಪಟ್ಟರು. ಈಗ ಸುಯೋಗವೊದಗಿದ್ದನ್ನು ನೋಡಿ ಅವರು ಗೈರಿಕ ವಸ್ತ್ರಗಳನ್ನು ಧರಿಸಿ ತಾವು ಬೌದ್ದ ಸನ್ಯಾಸಿಗಳೆಂದು ನಾರಹತ್ತಿದರು; ಮತ್ತು ಬೌದ್ಧಧರ್ಮದ ವಿಕೃತಸ್ವರೂಪವನ್ನು ಪ್ರಚಾರಪಡಿಸಹತ್ತಿದರು. ಈ ಮೇರೆಗೆ ಈ ಕಪತಿಗಳ ಸಂಖ್ಯೆಯು ಹೆಚ್ಚಾಗುತ್ತ ನಡೆಯಲು ಬೌದ್ಧ ಧರ್ಮದಲ್ಲಿ ಮಹಾ ಕೋಲಾಹಲ ವೆದ್ದಿತು. ನಿಜವಾಗಿ ನಿಷ್ಠಾವಂತರಾದ ಭಿಕ್ಷುಗಳಿಗೆ ಈ ಕಪಟಿಗಳ ಸುಳಿದಾಟದಿಂದ ಜಂಬೂದ್ವೀಪದ ಯಾವ ಮಂದಿರದಲ್ಲಿಯೂ, ಉಪೋಸಥ, ಇಲ್ಲವೆ + ಪವಾರಣಕ್ರಿಯೆ ಯನ್ನು ನಡೆಯಿಸುವದು ಅಸಾಧ್ಯವಾಯಿತು,

  1. ಥೇರವಾದ, ಮಹಾಸಂಗೀತಿ, ಗೋಕೂಲಿಕ, ಏಕವ್ಯವಹಾರಿಕ, ಪ್ರಜ್ಞ, ಬಾ ಹುಲಿಕ, ಚೈತೀಯ, ಸರ್ವಾರ್ಥಿಕ, ಧರ್ಮಗುಪ್ತಿಕ, ಕಾಶ್ಯಪಿಯ, ಸನಕಾ೦ತಿಕ, ಸೂತ್ರ, ಹೈಮವತ, ರಾಜಗಿರೀಯ, ಸಿದ್ಧಾಂತಿಕ, ಪೂರ್ವ ಶೈಲೀಯ ಆಪರಶೈಲೀಯ,

- * ಪವಾರಣ ( ಸಂಸ್ಕೃತ- ಪ್ರವರಣ ) ಎಂಬದು ವರ್ಷಾವಾಸದ ಕೊನೆಯ ದಿವಸವು, ಈ ದಿವಸ ಭಿಕ್ಷುಗಳೆಲ್ಲ ಒಂದೆಡೆಗೆ ಸಮ್ಮಿಲಿತರಾಗುವರು, ಮತ್ತು ಒಬ್ಬರಿಗೊಬ್ಬರು ಏನಾದರೂ ಆಪರಾಧಮಾಡಿದ್ದರೆ ಅದಕ್ಕಾಗಿ ಕ್ಷಮೆ ಬೇಡುವರು, ಈ ದಿವಸ " ಹಸ್ಥರು ಸಂಘಕ್ಕೆ ಬೇವರ ( ವಸ್ತ್ರ ) ದಾನ ಮೊದಲಾದ ಪುಣ್ಯ ಕಾರ್ಯಗಳನ್ನು ಮಾಡುವರು, ಕೆಲವರು ಸಂಪೂರ್ಣ ವರ್ಷಾವಾಸಕ್ಕೆ ಪವಾರಣವೆನ್ನುವರು,