ಪುಟ:ಆದಿಶೆಟ್ಟಿಪುರಾಣವು.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೩ ಸಂಧಿ ೫) ಸೋಮನಾಥಚರಿತ್ರೆ, ನೆನವರಿಗೆ ಧರ್ಮಾರ್ಥಕಾಮ ಮೋಕ್ಷಂಗಳಂ | ದೆನಿಪ ನಾಲ್ಕುಂತರದ ಫಲವೀವ ಕಲ್ಪತರು | ವಿನನಾಲ್ಕು ಶಾಖೆಗಳಿವೆಂಬಂತೆ ಮೆರೆವ ಪುರಹರನ ಚಾತುರ್ಭುಜದಲೀ | ಮುನಿವವರ ನಿರಿಯ ಶೂಲ ವತ್ಯಂತದು | ರ್ಜನರ ಜೀವಾನಿಲನ ನೀಂಟಕ್ಕೆ ಸರ್ವ ಮುಂ | ನಿನ ವಿವರಮಂ ಪೇಳ ಬೊಂವಸರ ದುರಿತವಿಘಟನಕೆ ಡಮರುಗವೆಸದವೂ | ೪೪ || ಮಂಗಳಮಯಾಂಬಿಕಾನಯನವನಿತಾನಾ | ರಂಗಸ್ಥಳವೊ ಹೇಳಿದೆಂದೆನಿಸಿ ಭೂರಿಯನು || ಜಂಗಳೆಡೆದೆರಹಿನೊಳು ಘನವಿಶಾಲೋರಸ್ಪಳಂ ವಿಭವದಿಂದೆಸೆದುದೂ !! ಅಂಗದೊಳಗೊಗೆಯು ತಾವರಿಸಿ ಪರ್ಬುಗೆವಡೆದ | ಭಂಗಿ ಸುಲಲಿತಕುಮರ್ಯಶರನಿಧಿಯೊಳು ಕ | ಡಂಗಿ ಪುಟ್ಟರ್ದ ನಿರ್ಮಳದಕ್ಷಿಣಾವರ್ತವೆನಿಸಿ ಮೆರೆದುದು ನಾಭಿಯ || ೪೫ || ಬೆಳೆವೆತ್ತ ಸಸಿಗೆ ಪರಿವೇಷ್ಟವಾದಂತೆ ನಿ | ರ್ಮಳಕಾಯ ಮಧ್ಯಪದೇಶದೊಳು ಸರ್ಪಮೇ | ಖಳೆ ವಿರಾಜಿಸಿತು ಪುರುಷಾರ್ಥಮಂ ಪುಣ್ಣಗುಣದಿಂದೆ ಸಿಂಗರಿಸಿದಂತೇ || ತಳದ ಚಲ್ಲಣದ ಕೌಪೀನವೆಸದುದು ಸಮು | ಜಳತರುಣತರಣಿಕಿರಣಂ ನಾಡೆ ಕವಿದರುಣ | ಜಳವೆನಿಡರು ಮಾಣಿಕದ ಕೆಂಬೆಳಗು ಮುಸುಕಿದಪದಾಂಬುಜಮೆರೆದ (ವೊ 11 ೪೬ | ಜಗದ ಪುಣ್ಯಕ್ಕೆ ಹೆಗಳೊಗೆದುದೋ ! ಶಿವನ ಕೀ || ರ್ತಿಗೆ ಕೋಡು ಮೂಡಿದುವೊ ! ಭಕ್ತರುತ್ಸವದ ಹೆ | ಚ್ಚುಗೆಗೆ ಕಿವಿಯುದ್ಭವಿಸಿದವೋ ! ತಿಳಿದ ಬೆಳುದಿಂಗಳಿಂಗೆ ಕಾಲ್ಗಳು ಮೊಳೆತ ಬಗೆ ನಿಲುಕದತುಳಕೈವಲ್ಯಪರಿವೃತರಜತ || (ವೋ || ನಗವೃಷಭವಾಯ್ಯೋ ! ಹೇಳೆಂಬ ಸಂಶಯಕೆ ನಂ | ಬುಗೆಗೆಯ್ದ ಪುಂಗವನ ನುತದೇವಪುಂಗವಂ ನಲಿದೇರಿ ಕಣ್ಣೆ ಸದನೂ ||೪೭||