ಪುಟ:ಆದಿಶೆಟ್ಟಿಪುರಾಣವು.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಡೀ || ಸಂಧಿ ೬) ಸೋಮನಾಥಚರಿತ್ರ. ಗಿಳಿ ಹುಕ್ಕೇರಿ ಹಲುಗಿರಿದು ಹುಲುಗಚ್ಚ ಹಸಗೆಟ್ಟು | ಸುತ್ತಳಿದು ಬತ್ತಳಿಸಿ ಹಿರಿದುಮಂಡೆಯಬಿಟ್ಟು | ವಿಸ್ತರಿಸಲಾರದಿವರತಿಕರುಣಿಗಳು ಭಸಿತಮಂಪೂಸಕಾಯರೆಂದೂ || ಎತ್ತಿ ತಿಪ್ಪೆಯ ಬದಿಯಂ ಪೂಸಿ ಬೂದಿಲ್ಲ | ದತ್ತಿತ್ತ ಹರಿದರಸಿ ಕಾಣದೆ ವಿಭೂತಿಯಂ | ಹೆತ್ತತಾಯ ಸಗಣಿಯೆಂದದನಿಟ್ಟುಕೊಂಡರೋಡಲಾಸೆಯೆಂವಿಧಿಮಾಡದೋ || ೫೨ || ತಟ್ಟ ಸರನೆ ಸೀಳಿ ಕಿರಿದನದರೊಳುಕ್ಯಪು | ಗಟ್ಟಿ ಗುಂಡಿಗೆಯನಾಧಾರಗುಂಡಿಗೆಮಾಡಿ | ಮೆಟ್ಟ ಕುಂಚವ ಮುರಿದು ಹೀಲಿಯಂಬಿಸುಟು ಕಾವಂಲಾಕುಳವನುಮಾ ಸರ್ವಾಂಗದೊಳು ಭಸಿತಮಂ ಪೂಸಿ ಶಿವ | ದಿಟ್ಟು ಹರಹರ ನಮೋರ್ಹಂದಾಣೆಯೆಂದೆರಡು ! ಗೆಟ್ಟಭೀತಿಯ ಭಕ್ಷಸವಣರು ನೋಡಿನಗುತಿರ್ದನಂದಾದಯ್ಯನೂ || Hಳಿ || ನಸುನಗುತ್ತಿನ್ನು ಸಾಕೆಂದು ಕೊಲೆಗೈಯಮಾ | ಮಸಕವೆತ್ತಿದ ಮನದಗರುವ ಕೊಳುಗುಳದ ಕೋ | ಗ್ಗೆ ಸರುಗಾಲಧಟ ಹೊಸಹೊಯ್ದ ರಾಯಂ ರಣಕ್ರೀಡೆಯೋಳಗಾಲಿಂಗಿಸೇ || ಒಸೆದು ಜಯವಧು ತೆಗೆದ ನಖರೇಖೆಯಂತೆಸೆವ || ಮಸಗಳ ಮನೋಜ ನಾದಯ್ಯ ನೈತರ್ಪಾಗ | ವಿಶಸನದ ವೀರಭೋಜನದ ಮರುಳುಗಳ ಪಡೆಯಿದ್ದು ದೆನಲೇವೂಗಳೇನೂ 1 ೫೪ . ಆಸುರದೊಣನೆದೊಗಲಂ ಬಿಚ್ಚಿ ಹರಕಲಿಸಿ | ಪಾಸಿ ಕಿರಿದಾಗಿ ಕೊಬ್ಬಿದ ಕುಸುರಿಗಂಡದಿಂ | ರಾಸಿಗಳಂಸುರಿದು ತಲೆಯೋಡುಗಳಲಿ ತಿಳನೆತ್ತರಂಹಿಡಿದು ಹಿಳಿದೂ || ಸಸಿಗಳ ಕಂಣಾಲಿಗಳ ಸೊಡರನೆತ್ತಿ ಸಂ | ತೋಪದಿಂ ಕಾಮಾಕ್ಷಿಚಾಮುಂಡಿಗಳಿಗೆರಗಿ | ಮಾಸಲಂಸಲಿನಿ ಚೌಕದ ಭೂತವೇತಾಳರುಂಡರೇವಣ್ಣಿಸುವನೋ !! ೫೫ | 18