ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 53 - ಆ II ನಡೆಯುತ್ತಿರುವ ಮೂಲಭೂತಗಳ ಸಂಯೋಗವಿಯೊಗಗಳ ಹೇತುವಿನಿಂದ ಉಂಟಾಗುವ ಸ್ವಭಾವಿಕವಾದ ಉದ್ದ ತೆಯೂ, ಇವೆಲ್ಲಾ ಅತ್ಯಗತ್ಯವಾದವು ಅಗ್ನಾಶಯದಿಂದ ಹೊರಟ ಒಂದು ಪ್ರೋತಸ್ಸು ಮತ್ತು ಪಿತ್ತಾಶಯದಿಂದ ಹೊರಟ ಒಂದು ಪ್ರೋತಸ್ಸು ಗ್ರಹಣಿಯ ಹೊದಿಕೆಯಲ್ಲಿ ಒಟ್ಟುಗೂಡಿ ಒಂದೇ ಸೋತಸ್ಸಾಗಿ ಒಳಗೆ ಸೇರುತ್ತದೆ, ಮತ್ತು ಅದರ ದ್ವಾರ ಆ ಎರಡು ಆಶಯಗಳ ರಸಗಳು ಗ್ರಹಣಿಯಲ್ಲಿ ಆಹಾರದೊಂದಿಗೆ ಸೇರುವದಾಗಿರುತ್ತದೆ ಹೀಗಿರುವದೇ, ಮೇಲೆ ಎತ್ತಿದ ವಚನಗಳಲ್ಲಿ ಜೀರ್ಣಮಾಡುವ ಶಕ್ತಿಯು ಪಾಚಕಪಿತ್ತವೆಂತ ಒ೦ದು ಕಡೆಯಲ್ಲಿ, ಗ್ರಹಣ ಎಂತ ಒಂದು ಕಡೆಯಲ್ಲಿ, ಹಿತಧರೆ "ಕಲೆ ಎಂತ ಇನ್ನೊಂದು ಕಡೆಯಲ್ಲಿ, ಪಾಚಕಾಗಿ ಎಂತ ಮತೊಂದು ಕಡೆಯಲ್ಲಿ, ಪಾಂಚಭೌತಿಕ ಆಗಿ ಎಂತ ಬೇರೊಂದು ಕಡೆಯಲ್ಲಿ ಸಹ ಕಾಣುವದಕ್ಕೆ ಕಾರಣವಾಗಿರಬಹುದು ಬಾಯಿಯ ಎಂಜಲು ಮುಂತಾದ ದ್ರವಗಳು ಸೇರಿ ಉಂಟಾಗುವ ಕೈದನ ಸ್ನೇಹನಗಳಿಂದu, ಆಮಾಶಯದ ಊಷ್ಮವಾಯುಗಳ ಪ್ರೇರಣ ದಿಂದ ಉಂಟಾಗುವ ಪಕ್ಕಗಳ ಮಾಂಸಖಂಡಗಳ ಸಂಕೋಚನಪ್ರಸರಣವಾಪಾರಗಳಿಂದಲೂ, ಆಹಾರವ ಆಮಾಶಯ ದಲ್ಲಿ ಸ್ವಲ್ಪ ಕರಗುವದಲ್ಲದೆ, ನೆರೆ ಕೂಡಿಕೊಂಡು, ರುಚಿಯಲ್ಲಿ ಸೀಯಾಗುತ್ತದೆಅನಂತರ ಅಲ್ಲಿಯೇ ಗಾಸ್ಟಿಕ್ ಜೂಸ್ (gastric juice) ಎಂಬ ಹುಳಿ ರಸವು ಅದರೊಂದಿಗೆ ಸೇರಿ, ಆ ಆಹಾರವು ಹುಳಿಯಾಗುತ್ತದೆ ಅದು ಗ್ರಹಣ ಯನ್ನು ಸೇರಿದ ಮೇಲೆ ಅಲ್ಲಿಯ ಪಾಕದಿಂದ ಅದರ ಹುಳಿರುಚಿಯು ಹೊಗಿ, ಪುನಃ ಮಧುರ ಮತ್ತು ಖಾರ ರುಚಿ ಗಳು ಉಂಟಾಗುತ್ತವೆ ಈ ಖಾರರುಚಿಗೂ ಜಿಡ್ಡನ್ನು ಪಚನ ಮಾಡುವದಕ್ಕ, ಮೇದೋಜೀರಕ ರಸವೇ ಮುಖ್ಯ ಕರಣ ಆಹಾರದ ಸಾರ ಮತ್ತು ಮಲ ಪ್ರತೇಕವಾಗುವಂಧಾದ್ದು ಹೆಚ್ಚಾಗಿ ಗ್ರಹಣಿಯಲ್ಲಿ ಆಗಿರುತ್ತದೆ ಸಪೂರ ಪ್ರೋತಸ್ಸಾದ ಗ್ರಹನಿಯನ್ನು ಒಲೆಗೂ, ಅದರಲ್ಲಿ ನಾನಾ ಕಾರಣಗಳಿಂದ ಉಂಟಾಗುವ ಬಿಸಿಯನ್ನು ಊರಿಗೂ' ಅದಕ್ಕೆ ಮೇಲೆ ಅಡ್ಡಕ್ಕೆ ಸಿಂತಿರುವ ಸ್ಕೂಲ ಒವದ ಆಮಾಶಯದೊಳಗಿನ ಹೆಚ್ಚು ದ್ರವದಿಂದ ಕೂಡಿರುವ ಆಹಾರದ ಕಳು ಗಳನ್ನು ಒಲೆ ಮೇಲೆ ಬೇಯಲಿಕ್ಕೆ ಇಟ ಪಾತ್ರದೊಳಗಿನ ತುಂಬ ನೀರು ಕೂಡಿರುವ ಅಕ್ಕಿ ಕಾಳುಗಳಿಗೂ ಚರಕಾದಿಗಳು ಹೋಲಿಸಿದ್ದಾಗಿಯೂ, ಆಮಾಶಯದಲ್ಲಿ ಮೊದಲು ಉಂಟಾಗುವ ಮಧುರತ್ವವು ಎಳೇ ಪಾಕದಿಂದ ಎಂತಲೂ ಕಡೆಗೆ ಉಂಟಾಗುವ ಹುಳಿಯ ಅತಿಪಕದಿಂದ ಎಂತಲೂ ಸುಶ್ರುತಾದಿಗಳು ಅಪಾಯ ಪಟ್ಟದ್ದಾಗಿಯೂ ಕಾಣುತ್ತದ 121. ಸ (ರಸ) ಖಲು ತ್ರೀಣಿ ತ್ರೀಣಿ ಕಲಾಸಹಸ್ರಾಣಿ ಪಂಚದಶ ಚ ಕಲಾ ರಸಾದಿಗಳ ರಸಾದಿಗಳ ಏಕೈಕಸ್ಮಿನ್ ಧಾತಾವವತಿಪತೇ ಏವಂ ಮಾಸೇನ ರಸಃ ಶುಕ್ರೀಭವತಿ ಪಾಕಕಾಲ ಸ್ತ್ರೀಣಾಂ ಚಾರ್ತವಮಿತಿ | (ಸು 48 ) ರಸವು ಒಂದೊಂದು ಧಾತುವಿನಲ್ಲಿ 3015 ಕಲಾಕಾಲದ ವರೆಗೆ, ಅಂದರೆ 5 ದಿನ, ನಿಲ್ಲುತ್ತದೆ, ಹೀಗೆ ಒಂದು ತಿಂಗಳಲ್ಲಿ ರಸವು ಗಂಡಸರಲ್ಲಿ ಶುಕ್ರವಾಗುತ್ತದೆ. ಮತ್ತು ಹೆಂಗಸ ರಲ್ಲಿ ರಜಸ್ಸು ಆಗುತ್ತದೆ ವಿಂಶತಿ ಕಲೋ ಮುಹೂರ್ತ ಕಲಾದಶಭಾಗಶ | (ಸು. 19.) ಮುಹೂರ್ತ ಅಧವಾ 2 ಗಳಿಗೆಗೆ 20 ಕಲೆಗಳು ಆಗಿರುತ್ತವೆ. ದ ರಾ ಆಯುರ್ವೇದಗ್ರಂಥಗಳಲ್ಲಿ ಅಲ್ಲಲ್ಲಿ ಹೇಳಿರುವ ಶಾರೀರವರ್ಣನಗಳನ್ನೆಲ್ಲಾ ಒಟ್ಟಾಗಿ ಸೇರಿಸಿ ಸವಿಸ್ತಾರ ಬರೆದರೆ, ಅದೇ ಒ೦ದು ದೊಡ್ಡ ಗ್ರಂಥವಾಗಬಹುದು ಶಸ್ತ್ರಚಿಕಿತ್ಸೆ ನಂತಸಪೇಕ್ಷಿಸುವವರು ಅವುಗಳನ್ನೆಲ್ಲಾ ಸಂಪೂರ್ಣವಾಗಿ ಓದಿ ತಿಳಿಯತಕ್ಕದ್ದು ಮಾತ್ರವಲ್ಲದೆ, ಮೃತಶರೀರದ ಪರೀಕ್ಷೆಯಿಂದ ಆ ಜ್ಞಾನವನ್ನು ಪೂರ್ತಿಪಡಿಸಿ ಕೊಳ್ಳಬೇಕು ಕಾಯಚಿಕಿತ್ಸೆಗೆ ಬೇಕಾದ ಕೆಲವು ಮುಖ್ಯ ಅಂಶಗಳನ್ನು ಮಾತ್ರ ಈ ಅಧ್ಯಾಯದಲ್ಲಿ ಸೇರಿಸಿಯದೆ ಉಳಿದ ಕೆಲವು ಅಂಶಗಳನ್ನು ಬೇಕಾದ ಹಾಗೆ ಚಿಕಿತ್ಸಾ ಭಾಗದಲ್ಲಿ ವಿವರಿಸಲಾದೀತು