ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 213 - ಅ XI ಕರಂಜಕರವೀರಾರ್ಕಮಾಲತೀಕಕುಭಾಸನಾಃ | ಶಸ್ಯಂತ ದಂತಪವನೇ ಯೇ ಚಾಪೈವಂ ವಿಧಾ ದ್ರುಮಾಃ || - (ಚ. 31,) ಹೊಂಗೆ, ಕಣಿಗಲು, ಎಕ್ಕೆ, (ಮಾಲತಿ) ಚಾಜಿ, ಮತ್ತಿ, ಬೇಬ, ಮತ್ತು ಈ ವಿಧವಾದ ಬೇರೆ ಮರಗಳು ಹಲ್ಲು ಜುವ ಕಡ್ಡಿಗೆ ಪ್ರಶಸ್ತವಾಗಿರುತ್ತವೆ. 5. ಪೌಷ್ಟಿಕಂ ವೃಷ್ಯಮಾಯುಷ್ಯಂ ಶುಚಿರೂಪವಿರಾಜನಂ | ಕೌರ ಕೇಶಶ್ನಶ್ರನಖಾದೀನಾಂ ಕಲ್ಪನಂ ಸಂಪ್ರಸಾಧನಂ || (ಚ, 33.) ತಲೆಕೂದಲು, ಮಾಸ, ಉಗುರು ಮುಂತಾದವುಗಳನ್ನು ಕತ್ತರಿಸಿ ಚಂದಮಾಡುವದ ರಿಂದ ಶುಚಿತ್ರವೂ, ರೂಪಪ್ರಕಾಶವೂ, ಆಯುಸ್ಟ, ಪುಷ್ಟಿಯೂ, ವೀರ್ಯವೂ, ವೃದ್ಧಿ ಯಾಗುವವು. ಪಾಪೋಪಶಮನಂ ಕೇಶನಖರೋಮಾಪಮಾರ್ಜನಂ | ಹರ್ಷ - ಲಾಘವ - ಸೌಭಾಗ್ಯ ಕರಮುತ್ಸಾಹವರ್ಧನಂ || (ಸು. 506.) . ಕೂದಲು, ರೋಮ, ಉಗುರುಗಳನ್ನು ತೆಗೆದುಬಿಡುವದರಿಂದ, ಪಾಪವು ಉಪಶಮನ ವಾಗಿ, ಹರ್ಷ, ಲಘುತ್ವ ಮತ್ತು ಸೌಭಾಗ್ಯ ಉಂಟಾಗುವವು, ಮತ್ತು ಉತ್ಸಾಹವು ಹೆಚ್ಚು ವದು. ತ್ರಿಪಕ್ಷಸ್ಯ ಕೇಶಶ್ನಶ್ರುಲೋಮನಖಾನ್ ಸಂಹಾರಯೇತ್ | (ಚ. 45.) ಒಂದು ಪಕ್ಷದಲ್ಲಿ ಮೂರು ಸರ್ತಿ ಕೂದಲು, ಮಾಸೆ, ರೋಮ, ಮತ್ತು ಉಗುರು, ಇವು ಗಳನ್ನು ಸರಿಯಾಗಿ ತೆಗಿಸಬೇಕು. ಪಂಚರಾತ್ರಾನ್ನವಿಲ್ಮಶ್ರಕೇಶರೋಮಾಣಿ ಕರ್ತಯೇತ್ || (ಭಾ. ಪ್ರ. 46.) ಮಾಸೆ, ಕೂದಲು, ಉಗುರು, ಮತ್ತು ರೋಮಗಳನ್ನು ಐದು ದಿನಗಳಿಗೊಮ್ಮೆ ಕತ್ತರಿಸ ತಕ್ಕದ್ದು. ಉತ್ಪಾಟಯೇತ್ತು ಲೋಮಾನಿ ನಾಸಾಯಾ ನ ಕದಾಚನ | ತದುತ್ಪಾಟನತೋ ದೃಷ್ಟರ್ದೌಬ್ರಲ್ಯಂ ತ್ವರಯಾ ಭವೇತ್ || (ಭಾ. ಪ್ರ. 46.) ಮೂಗಿನೊಳಗಿನ ರೋಮಗಳನ್ನು ಯಾವಾಗಲಾದರೂ ಕೀಳಿಸಬಾರದು; ಹಾಗೆ ಕಿತ್ತದ್ದ. ರಿಂದ ಬೇಗನೇ ದೃಷ್ಟಿಯು ಬಲಹೀನವಾಗುವದು. 6. ಕೇಶಪಾಶೇ ಪ್ರಕುರ್ವೀತ ಪ್ರಸಾಧ್ಯಸ್ಯ ಪ್ರಸಾಧನಂ |