ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XI - 228 - ವ್ಯವಾಯ 36. ಅತಿಸಂಪ್ರಯೋಗಾಚ್ಚ ರಕ್ಷೇದಾತ್ಮಾನಮಾತ್ಮವಾನ್ | ಶೂಲ-ಕಾಸ-ಜ್ವರ-ಶ್ವಾಸ-ಕಾರ್ಶ್ಯ-ಪಾಂಡ್ವಾಮಯ-ಕ್ಷಯಾಃ || ಅತಿವ್ಯವಾಯಾಜ್ಜಾಯಂತೇ ರೋಗಾಶ್ಚಾಕ್ಷೇಪಕಾದಯಃ | ಆಯುಷ್ಮಂತೋ ಮಂದಜರಾ ವಸುರ್ವಣ್ರಬಲಾದ್ರಿತಾಃ || ಸ್ಥಿ ರೋಪಚಿತವಾಂಸಾಶ್ಚ ಭವಂತಿ ಸ್ತ್ರೀಷು ಸಂಯತಾಃ | ತ್ರಿಭಿಸ್ತಿಭಿರಹೋಭಿರ್ಹಿ ಸಮಾಯಾತ್ ಪ್ರಮದಾಂ ನರಃ || ಸರ್ವೇಷ್ಟತುಷ ಘರ್ಮೇಷು ಪಕ್ಷಾತ್ ಪಕ್ಷಾದ್ ವ್ರಜೇಕ್ಷುಧಃ | (ಸು 510.) ಮನುಷ್ಯನು ಅತಿಯಾಗಿ ಸ್ತ್ರೀಸಂಭೋಗಮಾಡದಂತೆ ತನ್ನನ್ನು ವಿಚಾರಬುದ್ದಿಯಿಂದ ಕಾಪಾಡಿಕೊಳ್ಳಬೇಕು. ಅತಿ ಸ್ತ್ರೀಭೋಗದಿಂದ ಶೂಲೆ, ಕೆಮ್ಮು, ಜ್ವರ, ಉಬ್ಬಸ, ಕೃಶತೆ, ಪಾಂಡುರೋಗ, ಕ್ಷಯ, ಆಕ್ಷೇಪಕ, ಮೊದಲಾದ ರೋಗಗಳು ಸಂಭವಿಸುತ್ತವೆ. ಸ್ತ್ರೀಯರ ವಿಷಯದಲ್ಲಿ ಮಿತವಾಗಿದ್ದವರು ಆಯುಷ್ಮಂತರೂ, ಶರೀರದ ವರ್ಣ ಮತ್ತು ಬಲ ಕೆಡ ದವರೂ, ಮುದಿತನ ಮೆಲ್ಲಗಾದವರೂ, ಸ್ಥಿರವಾದ ಮಾಂಸ ಕೂಡಿದವರೂ, ಆಗುತ್ತಾರೆ. ಬುದ್ದಿವಂತನು ಉಷ್ಣ ಕಾಲದಲ್ಲಿ ಒಂದೊಂದು ಪಕ್ಷ ಬಿಟ್ಟು, ಇತರ ಎಲ್ಲಾ ಋತುಗಳಲ್ಲಿಯೂ ಮೂರು ಮೂರು ದಿನವಾದರೂ ಬಿಟ್ಟು, ಪ್ರಮದೆಯಾದ ಸ್ತ್ರೀಯನ್ನು ಕೂಡಬೇಕಾದದ್ದು. ಷರಾ “ ಗ್ರೀಷು ಪಕ್ಷಾನ್ಮಾಸಾದ್ವ ಜೇದ್ಭುಧಃ' | - ಗ್ರೀಷ್ಮಋತುವಿನಲ್ಲಿ ಪಕ್ಷಕ್ಕೊಮ್ಮೆ ಅಥವಾ ಒಂದು ತಿಂಗಳಿಗೊಮ್ಮೆ ಸ್ತ್ರೀಸಹವಾಸ ಮಾಡಬೇಕು (ರಾ 175 ) ಶರೀರೇ ಜಾಯತೇ ನಿತ್ಯಂ ದೇಹಿನಾಂ ಸುರತಸ್ಸಹಾ | ಅವ್ಯವಾಯಾನ್ನೇಹಮೇದೋವೃದ್ಧಿಃ ಶಿಥಿಲತಾ ತನೋ !! (ನಿ. ರತ್ನಾಕರ.) ಶರೀರಿಗಳಿಗೆಲ್ಲಾ ವ್ಯವಾಯದ ಇಚ್ಛೆಯು ನಿತ್ಯವಾಗಿರುತ್ತದೆ. ಅಂಧಾ ವ್ಯವಾಯ ವನ್ನು ಬಿಟ್ಟಿರುವದರಿಂದ ಶರೀರದಲ್ಲಿ ಮೇದಸ್ಸಿನ ವೃದ್ಧಿ ಮತ್ತು ದೇಹದ ಶಿಥಿಲತೆ ಉಂಟಾಗು ಇವೆ. 37. ಹೆಂಗಸಿಗೂ ಪಂಚವಿಂಶೇ ತತೋ ವರ್ಷೇ ಪುಮಾನ್ ನಾರೀ ತು ಷೋಡಶೇ ! ಗಂಡಸಿಗೂ ಸಮತ್ವಾಗತರ್ವೀ ತೌ ಜಾನೀಯಾತ್ಸುಶಲೋ ಭಿಷಕ್ || ಪ್ರಾಯಕಾಲ (ಸು. 128.) 25 ವರ್ಷ ಪ್ರಾಯದ ಗಂಡಸೂ, 16 ವರ್ಷ ಪ್ರಾಯದ ಹೆಂಗಸೂ, ವೀರ್ಯದಲ್ಲಿ ಸಮತ್ವವನ್ನು ಹೊಂದಿದವರೆಂತ ಪ್ರವೀಣನಾದ ವೈದ್ಯನು ತಿಳಿಯಬೇಕು. 38. ಅತ್ಯಂತ ಬಾಲೆ ಯ ವಿಷಯ ಊನಷೋಡಶವರ್ಪಾಯಾಮಪ್ರಾಪ್ತ ಪಂಚವಿಂಶತಿಂ | ಯದ್ಯಾದ ಪುಮಾನ್‌ ರ್ಭಂ ಕುಕ್ಷಿಸ್ಥಃ ಸ ವಿಪದ್ಯತೇ || ಜಾತೋ ವಾ ನ ಚಿರಂ ಜೀವೇಜೀವೇದ್ಯಾ ದುರ್ಬಲೇಂದ್ರಿಯಃ | ತಸ್ಮಾದತ್ಯಂತಬಾಲಾಯಾಂ ಗರ್ಭಾಧಾನಂ ನ ಕಾರಯೇತ್ || (ಸು. 367.)