ಈ ಪುಟವನ್ನು ಪರಿಶೀಲಿಸಲಾಗಿಲ್ಲ.
- -261-
ಆ. XIV
30.ಅಲಸಂದೆಯ ರೂಕ್ಷಶ್ಚೈವ ಕಷಾಯಶ್ಚ ವಾತಲಃ
ಗುಣ ಶ್ಲೆಷ್ಮಪಿತ್ತಹಾ| ವಿಷ್ಟಂಭೀ ಚಾಪ್ಯವೃಷ್ಯಶ್ಚ ರಾಜಮಾಷಃ ಪ್ರಕೀರ್ತಿತಃ || (ಚ. 157.) ಅಲಸಂದೆಯು ರೂಕ್ಷ, ಚೊಗರು, ವಾಯುವೃದ್ಧಿಕರ, ಕಫಪಿತ್ತಗಳನ್ನು ನಾಶಮಾಡು ವಂಧಾದ್ದು, ಸ್ತಂಭನಕಾರಿ, ಮತ್ತು ವೃಷ್ಯತ್ವಕ್ಕೆ ವಿರುದ್ಧವಾದದ್ದು ಆಗಿರುತ್ತದೆ. ಕಷಾಯಭಾವಾನ್ನ ಪುರೀಷಭೇದೀ ನ ಮೂತ್ರಲೋ ನೈವ ಕಫಸ್ಯ ಕರ್ತಾ | ಸ್ವಾದುರ್ವಿಪಾಕೇ ಮಧುರೋsಲಸಾಂದ್ರಃ ಸಂತರ್ಪಣಃ ಸ್ತನ್ಯರುಚಿಪ್ರದಶ್ವ || (ಸು. 195-96 ) ಅಲಸಂದೆಯು ಚೊಗರುಗುಣವುಳ್ಳದ್ದಾದ್ದರಿಂದ, ಮಲವನ್ನು ಹೊರಗೆ ಹಾಕುವದಿಲ್ಲ, ಮೂತ್ರವನ್ನು ಹೆಚ್ಚುಮಾಡಲಾರದು, ಕಫವನ್ನುಂಟುಮಾಡಲಾರದು, ರುಚಿಯಲ್ಲಿಯೂ ವಿಪಾಕದಲ್ಲಿಯೂ ಸೀ, ತೃಪ್ತಿಕರ, ರುಚಿಕರ ಮತ್ತು ಮೊಲೆಹಾಲನ್ನು ವೃದ್ಧಿ ಮಾಡ ತಕ್ಕಂಧಾದ್ದು. ರಾಜಮಾಷೋ ಗುರುಃ ಸ್ವಾದುಸ್ತು ವರಸ್ತರ್ಪಣಃ ಸರಃ| ರೂಕ್ಷೊ ವಾತಕರೋ ರುಚ್ಯಃ ಸ್ತನ್ಯಭೂರಿಬಲಪ್ರದಃ || ಶ್ವೇತೂ ರಕ್ತಸ್ತಧಾಕೃಷ್ಣಸ್ತ್ರಿ ವಿಧ: ಸ ಪ್ರಕೀರ್ತಿತಃ | ಯೂ ಮಹಾಂಸ್ತೇಷು ಭವತಿ ಸ ಏವೋಕ್ತೊ ಗುಣಾಧಿಕಃ || (ಭಾ ಪ್ರ. 143.) ಅಲಸಂದೆಯು ಗುರು, ಸೀ, ಚೊಗರು, ತೃಪ್ತಿಕರ, ಸರ, ರೂಕ್ಷ, ವಾತಕರ, ರುಚಿಕರ ಮತ್ತು ಮೊಲೆಹಾಲನ್ನೂ, ಹೆಚ್ಚು ಬಲವನ್ನೂ ಕೊಡುವಂಧಾದ್ದು, ಅಲಸಂದೆಯಲ್ಲಿ ಬಿಳೇದು, ಕೆಂಪು, ಕಪ್ಪು, ಎಂಬ ಮೂರು ಜಾತಿಗಳಿವ, ಅವುಗಳಲ್ಲಿ ದೊಡ್ಡದಾಗಿ ಯಾವದು ಬೆಳೆಯು ವುಧೋ, ಅದರಲ್ಲಿಯೇ ಮೇಲೆ ಹೇಳಿದ ಗುಣಗಳು ಅಧಿಕವಾಗಿ ಇರುತ್ತವೆ.
31. ಉಷ್ಣಃ ಕುಲತ್ಥೋ ರಸತಃ ಕಷಾಯಃ
ಹುರುಳಿಯ ಕಟುರ್ವಿಪಾಕೇ ಕಫಮಾರುತಘ್ನಃ || ಗುಣ ಶುಕ್ರಾಶ್ಮರೀಗುಲ್ಮನಿಷೂದನಶ್ಚ ಸಂಗ್ರಾಹಕಃ
ಪೀನಸಕಾಸಹಾರೀ || (ಸು 196 ) ಹುರುಳಿಯು ಉಷ್ಣ, ರಸದಲ್ಲಿ ಚೊಗರು, ವಿಪಾಕದಲ್ಲಿ ಖಾರ, ಕಫವಾತಹರ, ಒಳ್ಳೆ ಗ್ರಾಹಿ, ಮತ್ತು ಶುಕ್ರಾಶ್ಮರೀ, ಗುಲ್ಮ, ಪೀನಸ, ಕೆಮ್ಮು, ಇವುಗಳನ್ನು ಪರಿಹರಿಸುತ್ತದೆ
32. ನಿಷ್ಪಾವೋ ಮಧುರೋ ರುಚ್ಯೂ ವಿಸಾಕೇsವ್ಲೋ ಗುರುಃ ಸರಃ|
ಅವರೆಯ ಕಷಾಯ: ಸ್ತನ್ಯಪಿತ್ತಸ್ರಮೂತ್ರವಾತವಿಬಂಧಕೃತ್ | ಗುಣ ವಿದ್ಯಾಹ್ಯುಷ್ಣೋ ವಿಷಶ್ಲೇಷ್ಮಶೋಧಹೃಚ್ಚು ಕ್ರನಾಶನಃ
|| (ಭಾ. ಪ್ರ. 143.)
ಅವರೆಯು ಸೀ, ರುಚಿಕರ, ಹುಳಿವಿಪಾಕವುಳ್ಳದ್ದು, ಗುರು, ಸರ,ಚೋಗರು, ವಿದಾಹಿ, ಉಷ್ಣ, ಮೊಲೆಹಾಲನ್ನೂ, ರಕ್ತಪಿತ್ತವನ್ನೂ, ಮೂತ್ರವನ್ನೂ, ವಾತವನ್ನೂ, ಹೊಟ್ಟೀ ಬಿಗಿಯೋಣ