ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ XX _ 392 _

   ದ್ರವ್ಯಭೇದದ
  ಮೇಲೆ ಕಪಾಯಕ್ಕೆ
     ನೀರು 
                                                        ಅತ್ಯಂತಕರಿನೇ ದ್ರವ್ಯೇ ನೀರಂ ಷೋಡಶಿಕಂ ಮತಂ |            

ಕರ್ಷಾದಿತಃ ಪಲಂ ಯಾವತ್‌ ಕ್ಷಿಪೇತ್ ಷೋಡಶಿಕಂ ಜಲಂ || ತದೂರ್ಧ್ವಂ ಕುಡವಂ ಯಾವದ್ಧ ವೇದಷ್ಟಗುಣಂ ಪಯಃ | ಪ್ರಸ್ಥಾದಿತಃ ಕ್ಷೀಪೇನ್ನೀರಂ ಖಾರೀ ಯಾವಚ್ಚತುರ್ಗುಣಂ ||

                              (ಭಾ. ಪ್ರ. 196.)                                ಕಷಾಯ ದ್ರವ್ಯವು (ದ್ರಾಕ್ಷಿ, ಹಸೀ ಅಮೃತಬಳ್ಳಿ ಮುಂತಾದ) ಮೃದು ಚಾತಿದ್ದಾದರೆ, ನೀರು ನಾಲ್ಕು ಪಾಲಷ್ಟು ಇಡಬೇಕಾದದ್ದು. (ಒಣಗಿದ ಕಡೀರು, ಭದ್ರಮುಷ್ಟಿ, ಮುಂತಾದ) ಒಣಗಿದ ದ್ರವ್ಯವಾದರೆ, ನೀರನ್ನು ಎಂಟು ಪಾಲಷ್ಟು ಇಡಬೇಕು. ಬೇರೆ ಬೇರೆ ಜಾತಿಯವು ಕೂಡಿರುವದಾದರೂ, ಎಂಟು ಪಾಲಷ್ಟು ನೀರು ಹಾಕಬೇಕು. ದ್ರವ್ಯವು ಅತ್ಯಂತ ಕರಿಣ ಜಾತಿದ್ದು (ಬಹಳ ಒಣಗಿದ ಖದಿರೆತಿರಳು, ಗಂಧ, ದೇವದಾರ ಮುಂತಾದವು) ಆದರೆ, ಹದಿ ನಾರು ಪಾಲಷ್ಟು ನೀರು ಇಡಬೇಕೆಂಬದು ವಿಧಿ. ದ್ರವ್ಯದ ತೂಕವು ಕರ್ಷ ಹಿಡಿದು ಪಲದ ವರೆಗಿರುವಲ್ಲಿ, ನೀರು ಹದಿನಾರು ಪಾಲು ಅದಕ್ಕ ಮಿಕ್ಕಿ ನಾಲ್ಕು ಪಲದ ವರೆಗೆ ದ್ರವ್ಯ ಗಳಿಗೆ ನೀರು ಎಂಟು ಪಾಲಷ್ಟು. ದ್ರವ್ಯಗಳ ತೂಕವು ಒಂದು ಪ್ರಸ್ಥ (16 ಪಲ) ಮೊದಲು ಗೊಂಡು ಒಂದು ವಾರಿ ವರೆಗಿರುವದಾದರೂ, ನೀರು ನಾಲ್ಕು ಪಾಲಷ್ಟು ಇಟ್ಟರೆ ಸಾಕು.
    ಕರ್ಷಾದೌ ತು ಪಲಂ ಯಾವದ್ದದ್ಯಾದ್ದಶಗುಣಂ ಜಲಂ |
                             (ಚಿ. ಸಾ. ಸಂ. 375.) ಔಷಧದ ತೂಕವು ಒಂದು ಕರ್ಷ ಆದಿಯಾಗಿ ಒಂದು ಪಲದ ವರೆಗಿರುವ ಸಂಗತಿಯಲ್ಲಿ, ನೀರನ್ನು ಹತ್ತು ಪಾಲಷ್ಟು ಹಾಕಬೇಕು.

ಷರಾ ಪಾಶ್ಚಾತ್ಯರು ಕಷಾಯ ಹೇಳುವಲ್ಲಿ, ಔಷಧವು ಇಂತಿಷ್ಟು ಕಾಲ ಮರಳುವ ನೀರಲ್ಲಿ ರಬೇಕೆಂತ ಬೇರೆ ಬೇರೆ ಔಷಧಕ್ಕೆ ಬೇರೆ ಬೇರೆ ಕಾಲ ಹೇಳುವದರ ಪ್ರಯೋಜನಾರ್ಥವೇ, ಕಷಾಯಕ್ಕೆ ನೀರನ್ನು ಇಂತಿಷ್ಟೇ ಇಡಬೇಕೆಂಬ ವಿಚಾ ರವು ಆಯುರ್ವೇದದಲ್ಲಿ ಮಾಡೋಣಾಗಿದೆ ಎಂಬದು ಸ್ಪಷ್ಟ

12. ಕಷಾಯದ ಮಾತ್ರೆ

ಮಾತ್ರೋತ್ತಮಾ ಪಲೇನ ಸ್ಯಾತ್ ತ್ರಿಭಿಶ್ಚಾಕ್ಷೈಶ್ವ ಮಧ್ಯಮಾ | ಜಘನ್ಯಾ ಸ್ಯಾತ್ಪಲಾರ್ಧೇನ ಸ್ನೇಹಕ್ಟಾಧೌಷಧೇಷು ಚ || ಕ್ವಾಧದ್ರವ್ಯಪಲೇ ವಾರಿ ದ್ವಿರಷ್ಟಗುಣಮಿಷ್ಯತೇ | ಚತುರ್ಭಾಗಾವಶಿಷ್ಟಂ ತು ಪೇಯಂ ಪಲಚತುಷ್ಟಯಂ || ದೀಪ್ತಾನಲಂ ಮಹಾಕಾಯಂ ದಾಪಯೇದಂಜಲಿಂ ಜಲಂ | ಅನ್ಯೇ ತ್ವರ್ಧ೦ ಪರಿತ್ಯಜ್ಯ ಪ್ರಸೃತಿಂ ತು ಚಿಕಿತ್ಸಕಾಃ || ಕ್ವಾಧತ್ಯಾಗಮನಿಚ್ಛಂತಸ್ತಸ್ವಷ್ಟಭಾಗಾವಶೇಷಿತಂ || ಪಾರಂಪರ್ಯೋಪದೇಶೇನ ವೃದ್ಧವೈದ್ಯಾಃ ಪಲದ್ವಯಂ ||

                           (ಚಿ. ಸಾ ಸಂ. 19.)                                ತೈಲದ ಮತ್ತು ಕಷಾಯೌಷಧಗಳ ಮಾತ್ರೆಯು, ಉತ್ತಮ ಪಕ್ಷ ಒಂದು ಪಲ, ಮಧ್ಯಮ ಪಕ್ಷ ಮುಕ್ಕಾಲು ಪಲ, ಮತ್ತು ಹೀನ ಪಕ್ಷ ಅರ್ಧ ಪಲವಾಗಿರುತ್ತದೆ. ಒಂದು ಸಲ ಔಷ