ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

441 - ಆ XXII. ಗಳೊಂದಿಗೆ ಯವಾಗುವನ್ನು ಬಲಕ್ಕೆ ತಕ್ಕವಾಗಿ ಕುಡಿಸಿ, ಕಾಲ ಮೊಣಗಂಟಿನಷ್ಟು ಎತ್ತರ ವಾದ, ಸ್ಥಿರವಾಗಿ ನೆಲದ ಮೇಲೆ ನಿಂತ ಮತ್ತು ಎತ್ತರತಗ್ಗು ಇಲ್ಲದ ಪೀರದ ಮೇಲೆ ಕೂತು ಕೊಳ್ಳಿಸಿ, ಅವನ ಮೂತ್ರನಾಳದ ತಲೆಗೆ ಬಿಸಿಯಾದ ತೈಲವನ್ನು ಚೆನ್ನಾಗಿ ಹಚ್ಚಿ, ಅವನ ನಾಳವನ್ನು ಹರ್ಷಿಸಿ, ನೆಟ್ಟಗೆ ನಿಲ್ಲಿಸಿ, ಮುಂದಾಗಿ ಒಂದು ಲೋಹದ ಕಡ್ಡಿಯನ್ನು ಹೊಗಿಸಿ ನೋಡಿದನಂತರ, ತುಪ್ಪ ಹಚ್ಚಿದ ವಸ್ತಿ ನಳಿಗೆಯನ್ನು ಮೆಲ್ಲ ಮೆಲ್ಲನೆ ಆರು ಅಂಗುಲ ಒಳಗೆ ಹೊಗಿಸಬೇಕು. ಆ ಮೇಲೆ ವಸ್ತಿಯನ್ನು ಹಿಂಡಬೇಕು. ಮತ್ತು ನಳಿಗೆಯನ್ನು ಮೆಲ್ಲನೆ ಹೊರಗೆ ಎಳೆದು ತೆಗೆಯಬೇಕು. ಮರಾ ಚರಕಸಂಹಿತೆಯಲ್ಲಿ ನಳಿಗೆಯ ಉದ್ದ ಗಂಡಸರಿಗೆ 12 ಅಂಗುಲವಿರಬೇಕೆಂತಲೂ, ಮೂತ್ರದ್ವಾರದ ಉತ್ತರವನ್ನಿಗೆ ಸ್ನೇಹಪ್ರಮಾಣವು ಅರ್ಧಪಲವೆಂತಲೂ, ಪ್ರಾಯದ ಮೇಲೆ ಈ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡ ಬೇಕಂತಲೂ, ಹೇಳಲ್ಪಟ್ಟಿದೆ (ಪು 908-09 ) 39. ತತಃ ಪ್ರತ್ಯಾಗತಸ್ನೇಹಮಪರಾಸ್ಟೇ ವಿಚಕ್ಷಣಃ | ಉತ್ತರವಸ್ತಿ ಕೊಟ್ಟ ದಿನ ಭೋಜಯೇತ್ಸಯಸಾ ಮಾತ್ರಾಂ ಯೂಷಣಾಧ ರಸೇನ ವಾ || ದ ಭೋಜನನಿಯಮ (ಸು. 576.) ಆ ಮೇಲೆ ಸ್ನೇಹ ಹೊರಗೆ ಬಂದದ್ದು ನೋಡಿ ಅಪರಾಹ್ಮದಲ್ಲಿ ಅವನನ್ನು ಬುದ್ದಿವಂತನು ಹಾಲಿನಿಂದಾಗಲಿ (ಪಿತ್ತಕ್ಕೆ, ಸಾರಿನಿಂದಾಗಲಿ (ಕಫಕ್ಕೆ), ಮಾಂಸರಸಗಳಿಂದಾಗಲಿ (ವಾತಕ್ಕೆ), ಪ್ರಮಾಣದಲ್ಲಿ ಉಣ್ಣಿಸಬೇಕು. ೬೦ 40. ಅನೇನ ವಿಧಿನಾ ದದ್ಯಾದಂ ಸ್ತ್ರೀಂಶ್ಚತುರೋSಪಿ ವಾ || ಉತ್ತರವಸ್ತಿಯ (ಸು. 576.) ಸಂಖ್ಯಾ ನಿಯಮ ಇದೇ ವಿಧಾನದಿಂದ ಮೂರೋ ನಾ ವಸ್ತಿಗಳನ್ನು ಕೊಡಬಹುದು. ವರಾ ಒಮ್ಮೆ ಕಳುಹಿಸಿದ ಸ್ನೇಹವು ಹೊರಗೆ ಬಂದ ಮೇಲೆ, ಸ್ವಲ್ಪ ಸಮಯ ತಡೆದು, ಪುನಃ ವಸ್ತಿ ಕೊಡುವ ದೆಂತ, ಹಾಗೆ ಒಂದೇ ದಿನದಲ್ಲಿ 3 ಅಥವಾ 4 ವಸ್ತಿಗಳನ್ನು ಕೊಡಬಹುದಾಗಿಯೂ ನಿ, ಸಂ, ವ್ಯಾ (ಸಂ 42 ನೋಡಿರಿ ) 41. ಸ್ತ್ರೀಣಾಂ ಚಾರ್ತವಕಾಲೇ ತು ಪ್ರತಿಕರ್ಮ ತದಾಚರೇತ್ | ಹೆಂಗಸರಿಗೆ ಉತ್ತರ ಗರ್ಭಾಸನಾ ಸುಖಂ ಸ್ನೇಹಂ ತದಾದ ಹೃಪಾವೃತಾ || ವಸ್ತಿಗೆ ಪ್ರಶಸ್ತ ಕಾಲ ಗರ್ಭ೦ ಯೋನಿಸ್ತದಾ ಶೀಘ್ರಂ ಜಿತೇ ಗೃಹ್ಲಾತಿ ಮಾರುತೇ | (ಚ. 909.) ಸ್ತ್ರೀಯರ ಗರ್ಭಾಶಯದ ದೋಷಕ್ಕೆ ಪ್ರತಿಕರ್ಮವನ್ನು ಅವರು ಮುಟ್ಟಾಗಿರುವ ಕಾಲ ದಲ್ಲಿ ಮಾಡತಕ್ಕದ್ದು. ಆಗ್ಗೆ ಗರ್ಭಾಸನವು ತೆರೆದಿದ್ದು ಸ್ನೇಹವನ್ನು ಸುಖವಾಗಿ ತೆಗೆದುಕೊಳ್ಳು ತದೆ. ಮತ್ತು ಆಗ್ಗೆ ವಾತದೋಷವನ್ನು ಪರಿಹರಿಸಿದರೆ, ಯೋನಿಯು ಬೇಗನೆ ಗರ್ಭವನ್ನು ಧರಿಸುತ್ತದೆ. 42. ಉತ್ತಾನಾಯಾಃ ಶಯಾನಾಯಾಃ ಸಮ್ಯಕ್ ಸಂಕೋಚ್ ಸಕ್ಲಿನೀ | ಅಧಾಸ್ಯಾಃ ಪ್ರಣಯೇನ್ನೇತ್ರಮನುವಂಶಗತಂ ಸುಖಂ || 56