ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

LV 111 ಉಪೋದ್ಘಾತ 15 ಹಿಂದಿನ ಪ್ರಕರಣದಲ್ಲಿ ಪ್ರಸ್ತಾಪಿಸಲ್ಪಟ್ಟ ಆಯುರ್ವೇದೀಯ ಚಿಕಿತ್ಸೆಯ ವಿಶೇಷ ಸಾಫಲ್ಯಕ್ಕೆ ಆ ಶಾಸ್ತ್ರದ ಪರಮಾರ್ಧವು ಕಾರಣವಲ್ಲ, ಕೆಲವ್ರ ದೇಶೀಯ ಔಷಧಗಳ ಗುಣ ಪ್ರಾಬಲ್ಯವೇ ಕಾರಣ ಎಂತ ಸಮಾಧಾನ ಹೇಳುವ ವಾಡಿಕೆ ಇತ್ತು ಈ ಮತಕ್ಕನುಸಾರ ವಾಗಿ, ಅಂಧಾ ವಿಶೇಷ ಫಲವತ್ತಾದ ಔಷಧಗಳನ್ನು ಹುಡುಕಿ ತೆಗೆಯುವ ಉದ್ದೇಶವನ್ನೇ ಮುಖ್ಯವಾಗಿಟ್ಟುಕೊಂಡು, ಸರಕಾರದಿಂದ ದೇಶೀಯ ಚಿಕಿತ್ಸಾಕ್ರಮಗಳ ಅನುಸಂಧಾನಕ್ಕಾಗಿ ನಿಯುಕ್ತರಾದ ಡಾಕ್ಟರ್‌ ಕೋಮನ್ ರವರು ಎರಡು ವರ್ಷಕ್ಕೂ ಹೆಚ್ಚುಕಾಲ ಬಹು ಶ್ರಮ ಪಟ್ಟು, ಈ ಸಂಸ್ಥಾನದ ಎಲ್ಲಾ ಮುಖ್ಯ ಪಟ್ಟಣಗಳನ್ನು ಸಂಚರಿಸಿ, ಒಹು ಗ್ರಂಧಗಳನ್ನು ಶೋಧಿಸಿ, ಪ್ರಸಿದ್ಧರಾದ ದೇಶೀಯ ಪಂಡಿತರುಗಳನ್ನು ವಿಚಾರಿಸಿ, ಇದೇ ವರ್ಷದಲ್ಲಿ ಒರ ಕೊಂಡ ಎಜ್ಞಾಪನಾಪತ್ರದಿಂದ ಪಾಶ್ಚಾತ್ಯವೈದ್ಯದಲ್ಲ ಉಪಯೋಗಿಸಲ್ಪಡುತ್ತಿರುವ ಔಷಧಗಳ ಕ್ಕಿಂತಲೂ ಅಧಿಕ ಫಲದಾಯಕವಾದ ಔಷಧ ಯಾವದಾದರೂ ದೇಶೀಯ ಪಂಡಿತರಿಂದ ಉಪಯೋಗಿಸಲ್ಪಡುತ್ತಿರುವದು ಕಾಣುವದಿಲ್ಲ ಎಂತ ನಿವೃತ್ತಿಯಾದದ್ದು ಕಾಣುತ್ತದೆ. ನಿಜ ವಾಗಿಯೂ ಪಾಶ್ಚಾತ್ಯರ ಔಷಧಗಳು ಪ್ರಾಯಶಃ ಸೂಕ್ಷ್ಮವಾಗಿ ಯಂತ್ರಗಳ ಸಹಾಯದಿಂದ ತಯಾರಿಸಲ್ಪಡುವಂಧವುಗಳಾದ್ದರಿಂದ, ಅವುಗಳಲ್ಲಿ ಹಚ್ಚು ಶಕ್ತಿ ಇರುತ್ತದೆಂಬದರಲ್ಲಿ ಸಂದೇಹ ವಿಲ್ಲ. ಅದಲ್ಲದೆ ಆಯುರ್ವೇದ ಚಿಕಿತ್ಸೆಯನ್ನು ನಡಿಸುತ್ತಿರುವ ಸಾಧಾರಣ ವೈದ್ಯರಿಗೆ ಆಯುರ್ವೇದದಲ್ಲಿರುವ ಪರಿಶ್ರಮಕ್ಕಿಂತಲೂ ಎಷ್ಟೋ ಹೆಚ್ಚು ನಿಪುಣತೆಯು ಅತ್ಯಂತ ಕೆಳಗಿನ ವರ್ಗದ ಪಾಶ್ಚಾತ್ಯ ವೈದ್ಯರಿಗೆ ಸಹ ಅವರ ಶಸ್ತ್ರದಲ್ಲಿರುತ್ತದೆಂಬದೂ ನಿಶ್ಚಯ ಶಾರೀರ ಶಾಸ್ತ್ರದ ಮಟ್ಟಿಗೆ ಸಾಮಾನ್ಯ ದೇಶೀಯ ವೈದ್ಯರ ಜ್ಞಾನವೂ ಶೂನ್ಯ ಎನ್ನಬೇಕು ಆದ್ದರಿಂದ ಎಶೇಷವಾದ ದೇಶೀಯ ಚಿಕಿತ್ಸಾ ಸಾಫಲ್ಯವು ಆಯುರ್ವೇದೀಯ ಕ್ರಮದ ಉತ್ಕರ್ಷವನ್ನೇ ನಿರ್ದೇಶಿಸುತ್ತದೆಂತ ತಿಳಿಯಬೇಕಾಗುತ್ತದೆ. 16. ಈಗ ಶಾಸ್ತ್ರದೃಷ್ಟವೆನ್ನುವ ಪಾಶ್ಚಾತ್ಯ ಔಷಧಗಳ ಎಷಯ ಸ್ವಲ್ಪ ವಿಚಾರ ಮಾಡುವ. ಅವರ ವಿಶೇಷವಾದ ಶಾಸ್ತ್ರೀಯ ಪರೀಕ್ಷೆ ಎಂಬದು ನೀರಿನಲ್ಲ ಎರಡು ಪಾಲು ಹೈಡೋಜನ್, ಒಂದು ಪಾಲು ಒಕ್ಸಿಜನ್ ಉಂಟು, ಹಾಲಿನಲ್ಲಿ ಸಕ್ಕರೆ ಇಂತಿಷ್ಟು, ಸ್ನೇಹ ಇಂತಿಷ್ಟು, ನೀರು ಇಂತಿಷ್ಟು ಉಂಟು, ಎಂಬಂಧಾ ವಿವರಗಳನ್ನು ಕಂಡುಹಿಡಿಯುವದು ಇಂಧಾ ಪರೀಕ್ಷೆಗೊಳಪಟ್ಟ ಪದಾರ್ಥಗಳು ಇನ್ನೂ ಬಹು ಸ್ವಲ್ಪವೇ ಆಗಿವೆ, ನೀರಿನಲ್ಲಿಯಾ ದರೂ ಬೆರಸಿಕೊಂಡಿರುವ ಪದಾರ್ಥಗಳನ್ನೆಲ್ಲ ತಿಳಿಯಲಿಕ್ಕೆ ಸಾಧ್ಯವಾಗುವದಿಲ್ಲ. ಪ್ರತಿ ದ್ರವ್ಯ ದಲ್ಲಿಯೂ ಈ ರೀತಿ ಮಾಡಿದ ಶೋಧನದಲ್ಲ ಒಂದಲ್ಲ ಒಂದು ವಿಶೇಷ ವಸ್ತು ಇದ್ದೇ ಇರು ತದೆ. ಅಂಧಾ ವಸ್ತುವು ರಸಾಯನಶಾಸ್ತ್ರರೀತ್ಯ ವಿಚ್ಛೇದಕ್ಕೆ ಬಾರದೆ ಇದ್ದು, ಅನೇಕ ದ್ರವ್ಯ ಗಳಲ್ಲಿಯೂ, ಕಡೆಗಳಲ್ಲಯೂ, ದೊರಕುತ್ತದೆಂಬ ಹಾಗಿನ ವಿಚಾರದ ಮೇಲೆ ಅದನ್ನು ಮೂಲ ಭೂತಗಳ ಪಟ್ಟಿಗೆ ಸೇರಿಸುತ್ತಾರೆ ಹೀಗೆ ಮಾಡುವದರಿಂದ ಮೂಲಭೂತಗಳ ಪಟ್ಟಿಯು ವರ್ಷಂಪ್ರತಿ ದೀರ್ಘವಾಗಿ ಬೆಳೆಯುತ್ತಲದೆ ಲೋಕದಲ್ಲಿ ಯಾವ ಪದಾರ್ಧವಾದರು ಅಮೃತವಾಗುವದು, ಅಧವಾ ವಿಷವಾಗುವದು, ಅದರ ಉಪಯೋಗಿಸಲ್ಪಟ್ಟ ಪ್ರಮಾಣ ಭೇದದ ಮೇಲೆ ಮತ್ತು ಸಂಯೋಗಭೇದದ ಮೇಲೆ ಆಗಿರುತ್ತದೆ. ವತ್ಸನಾಭಿಯು ಅತ್ಯಂತ ಕರಿನವಾದ ವಿಷಗಳೊಳಗೆ ಒಂದು ಆದಾಗ್ಯೂ ಅದನ್ನು ತಕ್ಕ ಪ್ರಮಾಣದಲ್ಲಿ ಮತ್ತು ತಕ್ಕ ಯೋಗದಲ್ಲಿ ಕೊಟ್ಟರೆ, ಅದು ಅಸದೃಶವಾದ ಔಷಧವಾಗಿ ಫಲಿಸುತ್ತದೆ ಮತ್ತು ಅದನ್ನು