ಉಪೋದ್ಘಾತ LIX
ಎಳೇ ಶಿಶುವಿಗೆ ಸಹ ಕೊಡಬಹುದಾಗುತ್ತದೆ. ಕೆಲವು ವಿಷಗಳನ್ನು ಎಷ್ಟು ಪ್ರಮಾಣದ ವರೆಗೆ ವಿಷಲಕ್ಷಣಗಳಿಲ್ಲದೆ ಉಪಯೋಗಿಸಬಹುದೆಂಬದನ್ನು ಕುರಿತು ಶೋಧನಮಾಡಿದ್ದಾ ರಾಗಿ ಕಾಣುತ್ತದೆ. ಸಂಯೋಗಭೇದದ ವಿಚಾರದಲ್ಲಿ ಸಾರ್ಧಕಜ್ಞಾನವನ್ನು ಬಹಳವಾಗಿ ಸಂಪಾದಿಸಿರುವ ಹಾಗೆ ಕಾಣುವದಿಲ್ಲ. ಒಂದು ಪಾಲು ಪಾದರಸ ಎರಡು ಪಾಲು ಗಂಧಕ ಕೂಡಿಸಿ, ಅರೆದು ಕಚ್ವಲ ಮಾಡಿಕೊಂಡು, ಸರಿ ಪಾಲು ಕಬ್ಬಿಣ, ಉಕ್ಕು, ಧಂಗಾರ ಮುಂ ತಾದ ಯಾವ ಲೋಹವನ್ನಾಗಲಿ ಅರದಿಂದ ಉಜೆ ಪುಡಿಮಾಡಿ ಕೂಂದು ಕುಡಿಸಿ, ಲೋಳಿ ಸರದ ರಸದಿಂದ ಆರು ಘಂಟೆಕಾಲ ಅರದು ಮಾಡಿದ ಕರ್ರಗಿನ ಮುದ್ದೆಯನ್ನು ತಾಮ್ರದ ಹರಿ ವಾಣದಲ್ಲಿಟ್ಟು, ಹರಳುಗಿಡದ ಎಲೆಯಿಂದ ಮುಚ್ಚಿ ,ಒಳ್ಳೆಯ ಬಿಸಿಲಲ್ಲಿ ಅರ್ಧ ಬಾಮಕಾರಿ ಇಟ್ಟು, ಅನಂತರ ಹಾಗೆಯೇ ಆ ಹರಿವಾಣವನ್ನು ಧಾನ್ಯರಾಶಿಯಲ್ಲಿ ಹುಗಿದಿಟ್ಟು ಎಂಟನೆ ದಿನ ಅದನ್ನು ತೆಗೆದು ನೋಡಿದರೆ, ಅದು ಕುಂಕುಮವರ್ಣದ ಕಾಣುತ್ತದೆ* ಒಂದು ಸಮಯದಲ್ಲಿ ಈ ಕ್ರಮವನ್ನೇ ನಡಿಸಿ 4ನೇ ದಿನ ತೆಗೆದು ನೋಡಿದ್ದರಿಂದ, ಅದು ಭಸ್ಮ ವಾಗದೆ ನಿರರ್ಥಕವಾಯಿತು ನಾಲ್ಕನೇ ದಿನದಲ್ಲಿ ಆ ಮುದ್ದೆಯು ಕಪ್ಪಾಗಿಯೇ ಇತ್ತು ಪುನಃ ಧಾನ್ಯರಾಶಿಯಲ್ಲಿಟ್ಟು, 8ನೇ ದಿನ ನೋಡಿದಾಗ್ಗೆ ಯಾವ ಭೇದವೂ ಉಂಟಾಗದೆ, ಇದ್ದ ಹಾಗೆಯೇ ಇತ್ತು ಆದರೆ ಅದನ್ನು ಕಲ್ಲಿನಿಂದ ಜಜ್ಜಿ ಒಡದಾಗ್ಗೆ, ಒಳಗಿನಿಂದ ಉಷ್ಣವಾದ ಸೆಕೆ ಹೊರಟುಹೋದದ್ದು ಕಂಡಿತು. ಅನಂತರ ಆ ಗಟ್ಟಿಯನ್ನು ಗಜಪುಟ ಹಾಕಿದಾಗೂ ಅದು ಭಸ್ಮವಾಗಲಿಲ್ಲ ಇದೆಲ್ಲಾ ಆದದ್ದು ಯಾವ ಶಕ್ತಿಯಿಂದ, ಲೋಳಿಸರದಲ್ಲ, ಹರಳೆಲೆಯಲ್ಲಿ ಮತ್ತು ತಾಮ್ರದ ಪಾತ್ರೆಯಲ್ಲಿ ಯಾವ ಯಾವ ವಿಶೇಷ ಶಕ್ತಿಗಳು ಇವೆ' ಧಾನ್ಯರಾಶಿಯಲ್ಲಿ ಎಂಟು ದಿನಗಳಲ್ಲಿ ಕಂಪಾಗತಕ್ಕದ್ದು ನಾಲ್ಕನೇ ದಿನದಲ್ಲಿ ಕರಗಾಗಿಯೇ ಇರಲಿಕ್ಕೆ ಕಾರಣ ವೇನು ಇತ್ಯಾದಿ ಪ್ರಶ್ನೆಗಳಿಗೆ ಈಗಿನ ಪಾಶ್ಚಾತ್ಯ ರಸಾಯನ ಶಾಸ್ತ್ರಜ್ಞರು ಉತ್ತರ ಕೊಡಲು ಸಮರ್ಧರಾಗಿರುವದಿಲ್ಲ ಇಂಧಾ ಸಮಾಧಾನ ಸಿಕ್ಕಲಿಲ್ಲ ಎಂಬದರಿಂದ ರಾಜಯಕ್ಷ ಮುಂ ತಾದ ಮಹಾವ್ಯಾಧಿಗಳಲ್ಲಿ ಉತ್ತಮ ಔಷಧವಾದ ಆ ಭಸ್ಮವನ್ನು ಮಾಡದೆ ಬಿಡುವದು ಎಸಿ ತವೋ? ಇಂಧಾ ಅದ್ಭುತವಾದ ರಸಾಯನಶಾಸ್ತ್ರಜ್ಞಾನದಿಂದ ಗರ್ಭತವಾದ ಅನೇಕ ಯೋಗ ಗಳು ಆಯುರ್ವೇದೀಯ ಚಿಕಿತ್ಸೆಯಲ್ಲಿ ಎಷ್ಟೋ ಶತಮಾನಗಳಿಂದ ಸಾರ್ಧಕವಾಗಿ ಉಪ ಯೋಗಿಸಲ್ಪಡುತ್ತಿರುವದನ್ನು ಆಲೋಚಿಸಿದರೆ, ಇತ್ತಲಾಗೆ ಲಬ್ದವಾದದ್ದೆಂಬ ರಸಾಯನಶಾಸ್ತ್ರ ಜ್ಞಾನವು ವೈದ್ಯಕ್ಕೆ ಅತ್ಯಗತ್ಯವಲ್ಲ ಎಂತಲೇ ಉಪಲಬ್ದವಾಗುವದಿಲ್ಲವೋ? ಸಂಕ್ಷೇಪವಾಗಿ ಹೇಳುವದಾದರೆ, ರಸಾಯನಶಾಸ್ತ್ರ ಪ್ರಕಾರ ದ್ರವ್ಯಗಳನ್ನು ಶೋಧಿಸಿ, ಅದರಿಂದಲೇ ಅವುಗಳ ಗುಣದೋಷಗಳನ್ನು ಹೇಳಲು ಸಾಧ್ಯವಿಲ್ಲ. ವಿಷಮಜ್ವರಕ್ಕೆ ಕೈನೀನು, ಹೊಟ್ಟೆಹುಳಕ್ಕೆ ಸೆಂಟೊಸಿನು, ಇತ್ಯಾದಿ ಔಷಧಗಳನ್ನು ಕಂಡುಹಿಡದ್ದು ಅವುಗಳ ಉಪಯೋಗದಿಂದಲೇ ಅಲ್ಲದೆ, ರಸಾಯನಶಾಸ್ತ್ರಜ್ಞರ ಶೋಧನದಿಂದಲ್ಲ ಆಯುರ್ವೇದದಲ್ಲಿ ಪ್ರತಿ ದ್ರವ್ಯದ ರುಚಿಗೆ ಕಾರಣವಾದ ಷಡ್ರಸಗಳ ಪ್ರಮಾಣಭೇದದ ಮೇಲೆ ಅದರ ಗುಣದೋಷಗಳನ್ನು ಊಹಿಸುವ ಕ್ರಮ ವಿವರಿಸಲ್ಪಟ್ಟಿದೆ. ಇದರಿಂದ ಹೊಸತಾದ ದ್ರವ್ಯಗಳ ಔಷಧೋಪಯೋಗವನ್ನು ಕಂಡುಹಿಡಿಯಲಿಕ್ಕೆ ಸಹಾಯವಾಗುತ್ತದೆ. ಇಂಧಾ ಸೌಕರ್ಯ ಸಹ ಪಾಶ್ಚಾತ್ಯಪಂಡಿತರಿಗೆ - - ...
- ದ ರಾ -3 ದಿನ ಧಾನ್ಯರಾಶಿಯಲ್ಲಿ ಜ್ವರೆ ಸಾಕೆಂಬ ರ್ತಾಧರನ ಮಾತು ಮತ್ತು 6 ಘಂಟೆಕಾಲ ಬಿಸಿಲಿನಲ್ಲಿ ರಿಸಬೇಕಂಬ ಭಾವಪ್ರಕಾಶದ ಮಾತು ಸಹ ಸರಿ ಕಾಣುವದಿಲ್ಲ
-
- *
JA +