ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೯೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


. -7-

ಮುಖಗಳು ಸೂಕ್ಷ್ಮವಾದ ದೆಸೆಯಿಂದ ಕಾಣುವದಿಲ್ಲ. ನಾಳಗಳು ಆಮಾಶಯದ ಸಮೀಪದಿಂದ ತರುವ ಮೂತ್ರವು ಎಚ್ಚರವಿರುವಾಗಲೂ, ನಿದ್ದೆಹೋದಾಗಲೂ,ಹಿಸರುತ್ತಾ ಇರುವದರಿಂದ, ಮೂತ್ರಾಶಯವು ತುಂಬುತ್ತದೆ ಮುಖದ ವರೆಗೆ ನೀರಲ್ಲಿ ಮುಳುಗಿಸಿಟ್ಟ ಹೊಸ ಗಡಿಗೆಯು ಹ್ಯಾಗೆ ಪಾರ್ಶ್ವಗಳಿಂದ ತುಂಬುತ್ತದೋ, ಹಾಗೆಯೇ ಮೂತ್ರಾಶಯವು ಮೂತ್ರದಿಂದ ತುಂಬುತ್ತದೆಂತ ತಿಳಿಯಬೇಕು. 9 ವಸ್ತಿಸ್ತು ಸ್ಕೂಲ ಗುದಮುಷ್ಕ ಸೇವನೀ ಶುಕ್ರ ಮೂತ್ರ ವಾಹಿನೀನಾಂ ನಾ ಡೀನಾಂ ಮಧ್ಯೆ ಮೂತ್ರಾಧಾರೋ ಜಲವಹಾನಾಂ ಸರ್ವಸ್ರೋತಸಾಮು ದಧಿರಿವಾಪಗಾನಾಂ ಪ್ರತಿಷ್ಠಿತೋ ಭವತಿ | ಬಹುಭಿಶ್ಚ ತನ್ಮೂಲೈರ್ಮಾರ್ಮ ಸಂಜ್ಞ ಕೈಃ ಸ್ರೋತೋಭಿರ್ಗಗನಮಿವ ದಿನಕರಕರೈವ್ಯಾರ್ವಾಪ್ತಮಿದಂ ಶರೀರಂ (ಜ 104 )

ವಸ್ತಿಯ ದೊಡ್ಡ ಗುದ, ಅಂಡದ ಸೇವನೀ, ಶುಕ್ರ-ಮೂತ್ರಗಳ ನಾಳಗಳು ಇವುಗಳ ಮಧ್ಯೆ ಇರುವ ಮೂತ್ರಾಧಾರ. ಇದು ನದಿಗಳಿಗೆ ಸಮುದ್ರ ಹ್ಯಾಗೋ ಹಾಗೆ ನೀರನ್ನು ಸಾಗಿಸುವ ಸರ್ವ ನಾಳಗಳಿಗೆ ನಿಧಿಯಾಗಿ ಪ್ರತಿಷ್ಠಿತವಾಗಿರುತ್ತದೆ. ಅದರ ಮೂಲವಾಗಿ ಹೊರಟ ಮರ್ಮ ಎಂಬ ಹೆಸರಿನ ಬಹು ನಾಳಗಳಿಂದ, ಆಕಾಶವು ಸೂರ್ಯನ ಕಿರಣಗಳಿಂದ ಹ್ಯಾಗೋ, ಹಾಗೆ ಈ ಶರೀರವು ವ್ಯಾಪ್ತವಾಗಿರುತ್ತದೆ 

10 ಮಾಂಸ ಸಿರಾ ಸ್ನಾಯ್ವಸ್ಥಿ ಚಾಲಾನಿ ಪ್ರತ್ಯೇಕಂ ಚತ್ವಾರಿ ಚತ್ವಾರಿ |

  ತಾನಿ ಮಣಿಬಂಧಗುಲ್ಫಸಂಶ್ರಿತಾನಿ  ಪರಸ್ಪರನಿಬದ್ದಾನಿ ಪರಸ್ಪರಸಂ ಕ್ಲಿಷ್ಟಾನಿ   ಪರಸ್ಪರಗವಾಕ್ಷಿತಾನಿ ಚೇತಿ ಕೈರ್ಗವಾಕ್ಷಿತಮಿದಂ ಶರೀರಂ ||

(ಸು 330 )

ಮಾಂಸ, ಸಿರಾನಾಳ, ನರ, ಎಲುಬು, ಇವುಗಳ ಬಲೆಗಳು ಪ್ರತಿಪ್ರತ್ಯೇಕ ನಾಲ್ಕು ನಾಲ್ಕು, ಅಂತು 16 ಇವು ಕೈಕಾಲುಗಳ ಮಣಿಗಂಟುಗಳನ್ನು ಆಶ್ರಯಿಸಿಕೊಂಡೂ, (ಅಂದರೆ ಒಂದೊಂದು ಗಂಟಿನಲ್ಲಿ ಒಂದೊಂದು ತರದ್ದು ಒಂದರಂತೆ ನಾಲ್ಕು) ಒಂದಕ್ಕೊಂದು ಕಟ್ಟಲ್ಪಟ್ಟು, ಒಂದಕ್ಕೊಂದು ಅಪ್ಪಿಕೊಂಡು, ಮತ್ತು ಒಂದಕ್ಕೊಂದು ಗವಾಕ್ಷ ಕಂಡಿ ರೂಪವಾಗಿ, ಇರುತ್ತವೆ. ಮತ್ತು ಅವುಗಳು ಈ ಶರೀರಕ್ಕೆ ಗವಾಕ್ಷಗಳಾಗಿವೆ ಅಂದರೆ (ನಿರಂತರ ಚಾಲಾಕಾರರಂದ್ರನಿಕರ ಪರಿಕಲಿತಂ) (ಭಾ. ಪ್ರ 34 ) . ಎಡೆಬಿಡದ ಒಲೆಯಾಕಾರದ ರಂಧ್ರಗಳ ಸಮೂಹದಿಂದ ಈ ಶರೀರವು ರಚಿಸಲ್ಪಟ್ಟಿದೆ

11. ಷಟ್ ಕೂರ್ಚಾಸ್ತೆ ಹಸ್ತಪಾದಗ್ರೀವಾಮೇಢ್ಯಷು | ಹಸ್ತಯೋದೌರ್ಯ ಕೂರ್ಚಗಳು ಪಾದಯೋದೌ ಗ್ರೀವಾಮೇಢ್ಯಯೋರೇಕೈಕಃ (ಸು 330 ) ಕೈಗಳಲ್ಲಿ ಎರಡು, ಪಾದಗಳಲ್ಲಿ ಎರಡು, ಕುತ್ತಿಗೆಯಲ್ಲಿ ಒಂದು, ಮೇಢ್ಯದಲ್ಲಿ ಒಂದು ಹೀಗೆ ಆರು ಕೂರ್ಚಕಟ್ಟುಗಳು. ಕೂರ್ಚಾ ಅಪಿ ಶಿರಾಸ್ನಾಯುಮಾಂಸಾಸ್ಥಿ ಪ್ರಭವಾ: ಸ್ಮೃತಾಃ | (ಭಾ. ಪ್ರ. 34 )