ವಿಷಯಕ್ಕೆ ಹೋಗು

ಪುಟ:ಇಂದ್ರವಜ್ರ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

11

ಯನು ಇಹಲೋಕವನ್ನು ತುಚ್ಛಿಕರಿಸಿ, ಪರನವಿರ ಕ್ತನಾದಮೇಲೆ, ಆತನ ತಮ್ಮನಾದ ವಿಕ್ರಮಾದಿತ್ಯ ಮಹಾರಾಜನು ನಿನ್ನ ಕೈಹಿಡಿದು, ನಿನ್ನನ್ನು ಇನ್ನೂ ವೃದ್ಧಿಗೊಳಿಸಿದನು. ಈ ಶಕ ಪುರುಷನನ್ನು ಕುರಿತು ಈಗಲೇ ವಿಸ್ತಾರವಾಗಿ ಪ್ರಸ್ತಾವಿಸುವೆವು ಈತನ ಕಾಲಾನಂತರ ನಿನ್ನ ಅದೃಷ್ಟ್ಯವು ಅಧೋಮುಖವಾಯಿತು. ಆದರೂ ಮೊಗಲ ಬಾದಶಾಹರಿಗೆ ನಿನ್ನಲ್ಲಿ ಅಭಿಮಾನವಿದ್ದಿತು, ಅವರು ಕೆಲವು ಮನೋಹರಗಳಾದ ಕಟ್ಟಡಗಳಿಂದ ನಿನ್ನನ್ನು ಸಿಂಗರಿಸಿದರು. ಅವರಿಂದೀಚೆಗೆ ಜ್ಯೋತಿಶ್ಯಾಸ್ತ್ರ ಪಂಡಿತನಾದ ಜಯಪ್ರರದ ರಾಜಾ ಜಯಸಿಂಹರಾಜನು ನಿನ್ನ ಸನ್ನಿಧಿಯಲ್ಲಿ ನಕ್ಷತ್ರದರ್ಶನ ಶಾಲೆಯೊಂದನ್ನು ಕಟ್ಟಿಸಿ, ನಿನ್ನ ಪ್ರಶಂಸೆಯನ್ನು ಹೆಚ್ಚಿಸಿದನು. ಇನ್ನೂ ಈಚಿನವರಾದ ಮಹಾರಾಷ್ಟ ಪ್ರಭುಗಳೂ ನಿನ್ನನ್ನು ನಿರಾಕರಿಸದೆ ಕೆಲವು ಉತ್ಕೃಷ್ಟಗಳಾದ ದೇವಮಂದಿರಗಳನ್ನೂ ಸ್ನಾನಘಟ್ಟಗಳನ್ನೂ,ಕಟ್ಟಿಸಿ ನಿನ್ನ ರಮಣೀಯತೆಯನ್ನು ಹೆಚ್ಚಿಸಿದರು, ಆದರೇನಾಯಿತು? ಜೀವನಿಲ್ಲದ ದೇಹವು ಒಡವೆಗಳಿಂದ ಶೋಭಿಸವುದೇನು? ವಿದ್ಯಾಸದ್ಗುಣಗಳು ನಷ್ಟವಾದ ರಾಜ್ಯಕ್ಕೆ ಒಳ್ಳೆಯಕಟ್ಟಡಗಳು ಕಳೆಗಟ್ಟುವನೇನು?ನೀನು ಕ್ಷೀಣಗತಿಗೆ ಬಂದ ಹಾಗೆಯೇ ಹಿಂದೂಗಳ ನಾಗರಿಕತೆಯ, ಅವರ ವಿದ್ಯಾವೈದುಷ್ಯಗಳೂ, ಧೈರ್ಯ ಪೌರುಷಗಳೂ ಕ್ಷೀಣಗತಿಗೆ ಬಂದವು. ಈಗ ಅವರು ತಮ್ಮ ಪೂರ್ವಿ ಕರು ಬಲುದೊಡ್ಡವರೆಂದು ಹೇಳಿಕೊಳ್ಳುತ್ತಾ,__ಬೆಂಗ