ಪುಟ:ಇಂದ್ರವಜ್ರ.djvu/೩೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


26 ಮಹಾಯಜ್ಞವೊಂದನ್ನು ಉಪಕ್ರಮಿಸಿ ಆ ಸಮಯಕ್ಕೆ ಸಮು ದ್ರರಾಜನನ್ನು ಕರೆತರಲು ಒಬ್ಬ ಬ್ರಾಹ್ಮಣನನ್ನು ಕಳುಹಿಸಿ ಕೊಟ್ಟನು. ಆಬ್ರಾಹ್ಮಣನು ಸಮುದ್ರ ತೀರವನ್ನು ಸೇರಿ, ಸಮು ದ್ರನನ್ನು ಸ್ತುತಿಸಿ, ವಿಕ್ರಮನ ಬಿನ್ನಪವನ್ನು ವಿವರಿಸಿದನು. ಸಾಗರನು ವಿಕ್ಕವನು ಮಾಡಿದ ಮರ್ಯಾದೆಯಿಂದ ಸಂತೋಷ ಹೊಂದಿ, ತನ್ನ ಅನುಗ್ರಹವನ್ನು ತೋರಿಸುವುದಕ್ಕಾಗಿ ನಾಲ್ಕು ರತ್ನಗಳನ್ನು ಬ್ರಾಹ್ಮಣನ ಕೈಯಲ್ಲಿ ಕೊಟ್ಟು ಆತನಿಗೆ ಕಳುಹಿಸಿ ದನು, ಅವುಗಳಲ್ಲಿ ಒಂದು ಬೇಕೆಂದ ಚಿನ್ನ ರನ್ನಗಳನ್ನು ಕೂಡ ಬಲ್ಲುದು; ಎರಡನೆಯದು ತಿಂಡಿತೀರ್ಥಗಳನ್ನು ಕೊಡಬಲ್ಲುದು; ಮೂರನೆಯದು ಆನೆ ಕುದರೆ ಮುಂತಾದುವುಗಳನ್ನು ಕೊಡತ ಕುದು; ನಾಲ್ಕನೆಯದು ಒಡವೆ ವಸ್ತ್ರ ಧನ ಕೊಡಬಲ್ಲುದು. ಈರ್ವರೆಗಳನ್ನು ಬ್ರಾಹ್ಮಣನು ತರುವವೇಳೆಗೆ ಯಜ್ಞವು ಮು ಗಿದುಹೊತ್ತು: ವಿಕ್ರಮನು ಆಖಾಹ್ಮಣನಿಗೆ "ಮತ್ತೇನ ಕೊಡುವುದಕ್ಕೂ ತೋರದೆ, ಆತ್ಮಗಳಲ್ಲಿ ಬೇಕಾದಒಂದನ್ನು ತೆಗೆದುಕೊಳ್ಳ ಹೇಳಿದನು. ಆಬ್ರಾಹ್ಮಣನ ಮನೆಯವರಾದರೋ ಒಬ್ಬೊಬ್ಬರು ಒಂದೊಂದು ಬೇಕೆಂದು ಮುಷ್ಕರ ಹಿಡಿದರು. ಇದುವಿಕಮನಿಗೆ ತಿಳಿಯಲು ಆತನು ಆ ನಾಲ್ಕು ಮಣಿಗಳನ್ನೂ ಬ್ರಾಹ್ಮಣಸಿಗೆ ಕೊಟ್ಟುಬಿಟ್ಟನು. ಹೇಭೋಜಪ್ರಭೆ ಇಂತಹ ಔದಾರ್ಯವು ನಿನ್ನಲ್ಲುಂಟೆ ? ೨೨ ಭೋಜನಿಂದ ಮಾತೇ ಹೊರಡಲಿಲ್ಲ. ಭೋಜನು ನಾಲ್ಕನೆಯಕಾರಿ ವಿಕ್ರಮವೀರವ ನಾಕ್ರಮಿಸಲು ಉಜ್ಜುಗಿಸಿದನು. ಆಗನಾಲ್ಕನೆಯ ಪುತ್ಥಳಿಯು ಹೀಗೆಂದಿತು « ವಿಕ್ರಮನೊಂದುವೇಳೆ ಬೇಟೆಗೆ ಹೋಗಿ, ಅಡವಿಯಲ್ಲಿ