ವಿಷಯಕ್ಕೆ ಹೋಗು

ಪುಟ:ಇಂದ್ರವಜ್ರ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
49

ಮಾರಿರಬಹುದೆಂದು ವಿಚಾರಿಸುತ್ತಿದ್ದನು. ಮಾರಣೆಯದಿನ ಆ ವ್ಯಕ್ತಿಯೇ ದೀನನಾಗಿ, ದಿಗಂಬರನಾಗಿ, ಆರಂಗಮಂಟಪಕ್ಕೆ ಬಂದು, ವಿಕ್ರಮನು ಅದನ್ನು ಕಂಡು ಮತ್ತಷ್ಟು ವಿಸ್ಮಿತನಾಗಿ, ಅಯ್ಯಾ, ನೀನಾರು? ನಿನ್ನೆ ರಾಜಕುಮಾರನಂತಿದ್ದು ಈದಿನ ಭೀಕ್ಷುಕನಂತೆ ಕಾಣಲು ಕಾರಣವೇನು?" ಎಂದು ಪ್ರಶ್ನಿಸಿದ. ಅವನು "ಜೂಜೆ ಕಾರಣ' ಎಂದನು. ವಿಕ್ರಮನು "ಜೂಜೆ ಆಡುವುದು ಪಾಪವೆಂದು ನಿನಗೆ ತಿಳಿಯದೆ?" ಎಂದನು. ಅವನು "ಅದರಿಂದಲೇ ನನಗೆ ಜೀವನ?"ಎಂದನು. ಆವೇಳೆಗೆ ಯಾರೋ ಪ್ರಾಮಾಣಿಕರಿಬ್ಬರು ಆ ದೆವಾಲಯದೊಳಕ್ಕೆ ಬಂದು ಕುಳಿತುಕ್ಕೊಂಡಿದ್ದರು. ಅದರಲ್ಲೊಬ್ಬನೂ ಮತ್ತೊಬ್ಬನನ್ನು ಕುರಿತು, ಖಜನೆ, ಈ ಗೋಡೆಯ ಮೇಲಿನ ಪೈಶಾಚಭಾಷೆಯ ಶಿಲಾಶಾಸನ ಈ ದೇವಾಲಯದ ಈಶಾನ್ಯ ಭಾಗದ ಗವಿಯಲ್ಲಿ ಚಿನ್ನ ರನ್ನದಿಂದು ತುಂಬಿದ ಕೊಡಗಳು ಮೂರಿವೆ. ಅವುಗಳ ಬಳಿ ಬೈರವೇಶ್ವನ ಪ್ರತಿಮೆಯೊಂದಿದೆ. ನಿನ್ನ ಕಂಠರಕ್ತದಿಂದ ಅದನ್ನು ಪ್ರೋಕ್ಷಿಸಿದರೆ ಆಕೊಡಗಳು ನಿನ್ನ ವಶವಾಗುವುವು ಎಂದು ತಿಳಿಸಿದನು"ಎಂದು ಹೇಳಿದನು. ವಿಕ್ರಮನು ಅದನ್ನು ಕೇಳಿದೊಡೆನೆ ಆ ಗವಿಯೊಳಕ್ಕಿಳಿದು, ತನ್ನ ಕೊರಳನ್ನು ಕತ್ತಿಯಿಂದ ಇರಿದು, ರಕ್ತವನ್ನು ತೆಗೆದು, ಭೈರವಮೂರ್ತಿಯ ಮೇಲೆ ಚೆಲ್ಲಿದ. ಭೈರವನು ಪುತ್ಯಕ್ಷನಾಗಿ ಆ ಧನವನ್ನು ವಿಕ್ರಮನಿಗೆಕೊಟ್ಟು ಅದೃಶ್ಯನಾದನು. ವಿಕ್ರಮನು ಅದನ್ನು ಆ ಜೋಜಗಾರನಿ ಕೊಟ್ಟು, ಇನ್ನು ಮೇಲೆ ದ್ಯುತವಾಡದಿರೆಂದು ಅವನಿಗೆ ಹೇಳಿ,ಇಚ್ಛೆ ಬಂದಂತೆ ಹೊರಟು ಹೋದನು. ನೀವೂ ಹಾಗೆ ಮಾಡಿರುವಿರೋ?"

ಭೋಜನು ಏನೂ ಹೇಳಲಿಲ್ಲ.

***