ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

xi


ಲೇಖಕರ ಮಾತು

ಈ ಸೃಷ್ಟಿಯಲ್ಲಿ ಮಾತುಬಲ್ಲ ಪರಮಾತ್ಮ ಪ್ರಕತಣೆಯೆಂದರೆ ಮನುಷ್ಯ ಬುದ್ಧಿ ವಿಕಾಸವಾಗುವವರೆಗು ಮನುಷ್ಯನು ಹಾಡಿದನು. ಆ ಬಳಿಕ ಮಾತಾಡ ತೊಡಗಿದನು. ಕೇಳಲಿ ಹೇಳಲಿ ಮಾತೆಲ್ಲ ಕಥನವೇ ಆಗಿದೆ. ಮಾತಿಗಾರಂಭವಾಗುವಂತೆ ಇಬ್ಬರು ಅಪರಿಚಿತರು ಕೂಡಿದಾಗ ಮಾತಿನಿಂದಲೇ ಪರಿಚಯಕ್ಕೆ ಆರಂಭವಾಗುವುದು. ಹುಟ್ಟುವ್ಯೆರಿಗಳು ಕದನಕ್ಕಾರಂಭಿಸುವ ಮೊದಲು ಕಥನದ ಶ್ರೀಕಾರವನ್ನೇ ಹಾಕುತಾರೆ. ತಾಯಿ-ಮಕ್ಕಳು,ಅಣ್ಣ-ತಮ್ಮಂದಿರು,ಅಕ್ಕ-ತಂಗಿಯರು ಕೂಡಿದಾಗ ಮಾತಿನ ಬೀಜವೊಡೆದು ಕಥನವಾಗಿ ಮೊಳೆಯುತ್ತದೆ. ಮನುಷ್ಯ ಮನುಷ್ಯರ ಸಂದರ್ಶನದಲ್ಲಿಯೇ ಈ ಕಥನ ವಲ್ಲರಿಯು ದಾಂಗುಡಿಯಿಡುವುದೆಂತೆಲ್ಲ. ಮನುಷ್ಯನಿಗೆ ಪಶುಪಕ್ಷಿಗಳೆ ಆಗಲಿ ಹುಳು-ಹುಪ್ಪಡಿಗಳೇ ಆಗಲಿ ಸಂಧಿಸಿದಾಗಲೂ, ಗಿಡಬಳ್ಳಿ ಗುಡ್ಡಬೆಟ್ಟಗಳು ಸಂಧಿಸಿದಾಗಲೂ ಕಥನವಂಕುರಿಸುವುದಕ್ಕೆ ಸುಸಂಧಿಯೊದಗುತ್ತದೆ.

ಆಡಿಸಿರುವ ಕಾಮದಿಂ ಕಡುಕುರುಡರಾದರು ಜಡಜೀವ ಬೇದವನ್ನು ಬಗೆಯದಿರುವಂತೆ, ಬುದ್ಧಿಯ ಕನ್ನಡಕ ಧರಿಸುವ ಮೊದಲು ಮನುಷ್ಯನು ಗಿಡಗಂಟೆ- ಪಶುಪಕ್ಷಿಗಳೊಡನೆ ಅಷ್ಟೇ ಅಲ್ಲ, ಅವು ತಂತಮ್ಮೊಳಗೆ ಮಾತಾಡುವುದಕ್ಕೆ ಅಸ್ಪದ ಕಲ್ಪಸಿಕೊಟ್ಟ ಆ ಕಥೆಯನ್ನು ತಾನು ಕೇಳಬಲ್ಲವನಾಗುತ್ತಾನೆ.

ಶ್ರೀ ಶಾಂತಕವಿಗಳು ಹೇಳಿದ್ದಾರೆ-

ದರುಶನದಿಂದಲಿ|ಪರಿಚಯವಪ್ಪುದು
ಪರಿಚಯದಿಂ ಸಂಭಾಷಣವು||
ಭಾಷಣದಿಂ ಸಹ|ವಾಸವಹುದು ಸಹ-
ವಾಸದಿಂ ಲಕ್ಕುಂ ಸಖ್ಯಂ||

ಪಾಂಡಿಚೇರಿಯ ಶ್ರೀ ಅರವಿಂದ ಆಶ‍್ರಮದ ಅಧಿಷ್ಠಾತ್ರಿಯಾದ ಶ್ರೀ ಮಾತಾಜಿಯವರು ಚಿಕ್ಕವರಿದ್ದಾಗ ಫ್ರಾನ್ಸದಲ್ಲಿ ದಿನಾಲು ಅಡ್ಡಾಡುತ್ತು ಹೋಗಿ ಒಂದು ಮರದ ಕೆಳಗೆ ಕಳಿತುಕೊಳ್ಳುತ್ತಿದ್ದರು ಒಂದೆರಡು ಗಳಿಗೆ. ಆ ದರುಶನ ಪರಿಚಯಗಳ ಪರಿಣಾಮವಾಗಿ ಮರವು ಮಾತಾಜಿಯವರಿಗೆ ತನ್ನ ಹೊಟ್ಟೆಯೊಳಗಿನ