ಅಜ್ಜಿಯೆಂದರೆ ಮನೆಯಲ್ಲಿಯೇ ವಾನಪ್ರಸ್ಥ - ಆಶ್ರಮವನ್ನು ನಿರ್ಮಿಸಿಕೊಂಡವಳು. ಸಂಸಾರದ ಸಂಬಂಧಲ್ಲಿದ್ದರೂ ಬಂಧನವನ್ನು ಸಡಿಲಿಸಿಕೊಂಡವಳು. ಮಕ್ಕಳ ಸಹವಾಸದಲ್ಲಿ ಮಗುವೇ ಆಗಿನಿಂತು, ತನ್ನ ಜೀವನಾಭುವವನ್ನೆಲ್ಲ ಕಥೆ ಕಟ್ಟಿ, ಕಥೆಯಲ್ಲಿ ಎರಕ ಹೊಯ್ದು ಆ ರಸಾಯನವನ್ನು ಮಕ್ಕಳಿಗೆ ಕಿವಿಯಿಂದ ಈಂಟಿಸುವಳು. ತಾಯಬಳಿಯಲ್ಲಿ ಹಾಲಬೇಡಿ ಅತ್ತರೂ, ಕೋಲು ಬೇಡಿ ಕುಣಿದರೂ ಅಜ್ಜಿಯ ಸಂಪರ್ಕದಲ್ಲಿ ಮಗು ದೇವರಂತೆ ಕುಳಿತು ಕಥೆ ಕೇಳುವುದಕ್ಕೆ ತವಕಿಸುತ್ತದೆ. ಅಜ್ಜಿ ಎರಡು ಸಂದರ್ಭದಲ್ಲಿ ಮಗುವಿಗೆ ಕಥೆ ಹೇಳತೊಡಗುತ್ತಾಳೆ. ಹಟಮಾಡಿ ಅಳುತ್ತಿರುವ ಮಗುವನ್ನು ರಂಬಿಸುವ ಸಲುವಾಗಿ ಅಜ್ಜಿ ಕಥೆ ಆರಂಭಿಸುವಳು. ಇಲ್ಲವೆ, ಕಥೆ ಕೇಳಲೆಳಿಸಿ ದುಂಬಾಲ ಬಿದ್ದು ಕಾಡಹತ್ತಿದಾಗ ಅಜ್ಜಿ ಕಥೆ ಹೇಳತೊಡಗುವಳು.
ಮಗು ಕಥೆ ಕೇಳುವುದಕ್ಕೆ ಆತುರ ತೋರಿಸುತ್ತಿರುವಾಗ ಅಜ್ಜಿಗೆ ಉತ್ಸಾಹವಿಲ್ಲದಿದ್ದರೆ ಆಕೆ-"ಕಥೆಯನ್ನು ಕಳ್ಳರೊಯ್ದರು. ನಿಮ್ಮತ್ತೆಯನ್ನು ಡೊಂಬರೊಯ್ದರು" ಎಂದು ಹಾರಿಸಿಬಿಡುವಳು. ಆ ಉಪಾಯವು ಯಶಸ್ವಿಯಾಗದಿದ್ದರೆ-"ಹೀಂಗ ಒಬ್ಬ ಅಯ್ಯನಿದ್ದ. ಅಯ್ಯನಿಗೊಂದು ಜೋಳಿಗೆಯಿತ್ತು. ಜೋಳಿಕೆಯಲ್ಲಿ ಒಂದು ಹೋಳಿಗೆಯಿತ್ತು" ಮಗು ಕಥೆ ಕೇಳುತ್ತ ಮಾತುಮಾತಿಗೂಮ್ಮೆ ಹೂಂ ಅನ್ನತೂಡಗುವದು. ಆಗ ಅಜ್ಜಿ-“ಹೂಂ ಅಂದರೆ ಅಯ್ಯನು ಜೋಳಿಗೆಯೊಳಗಿನ ಹೋಳಿಗೆ ಕೊಡುವನೇ" ಎಂದಾಗ, ಮಗು ನಗತೊಡಗುವದು. ಅಜ್ಜಿ-“ನಕ್ಕರೆ ಅಯ್ಯನು ಹೋಳಿಗೆ ಕೊಡುವನೇ” ಎಂದು ಕೇಳಲು ಮಗ ನಿರುತ್ತರನಾದುದನ್ನು ಕಂಡು “ಸುಮ್ಮನಿದ್ದರೆ ಕೊಡುವನೇ ಹೋಳಿಗೆಯನ್ನು” ಎನ್ನುತ್ತ ಕಥೆಯನ್ನು ಕೂನೆಗೊಳಿಸುವ ಯುಕ್ತಿಂಯನ್ನು ಮುಂದುವರಿಸುವಳು.
ಇನ್ನೊಮ್ಮೆ ಮಗುವನ್ನು ರಂಬಿಸಬೇಕಾದಾಗ ಅಜ್ಜಿ ಆಸ್ಥೆವಹಿಸಿ, ಮುಗಿಯದ ಕಥೆ ಆರಂಭಿಸುವಳು-” ಕಥೆ ಕಥೆ ಕಾರಣ, ಮುದಿಕೇ ಹೂರಣ, ತಿಂದೆಯೋ ಚೆಲ್ಲಿದೆಯೋ” ಎಂದಾಗ ಮಗು “ಚೆಲ್ಲಿದೆ” ಅನ್ನಬೇಕು. “ಎಲ್ಲಿ ಚೆಲ್ಲಿದೆ” ಎಂದಾಗ “ತಿಪ್ಪೆಯಲ್ಲಿ" ಎಂದು ಮರುನುಡಿಯಬೇಕು. “ತಿಪ್ಪೆ ಏನುಕೊಟ್ಟತು" “ಖಾತ ಕೊಟ್ಟಿತು”. “ಖಾತ ಏನು ಮಾಡಿದಿ?" “ತೋಟಕ್ಕೆ ಹಾಕಿದೆ. “ತೋಟವೇನು ಕೊಟ್ಟಿತು?” “ಹೂ ಕೊಟ್ಟಿತು”. “ಹೂ ಏನು ಮಾಡಿದಿ?” “ದೇವರಿಗೇರಿಸಿದೆ.” “ದೇವರೇನು ಕೊಟ್ಟ?" “ಗಳಾಗಂಟಿಕೊಟ್ಟ” ಹೀಗೆ ಕಥೆಯು ಕಥೆಗೆ ಕಾರಣವಾಗಿ, ಮುದುಕೆ ಹೂರಣವಾಗಿ ಮುಂದುವರಿಯುತ್ತದೆ, ಆದರೆ ಮಗುವು ಕಥೆಗಾಗಿ ಹಟಮಾಡಿದ್ದರೆ, ಕಥೆ ಕೇಳುವುದರಲ್ಲಿ ಸಹಕರಿಸುತ್ತ ಕೇಳಿದ ಪ್ರಶ್ನೆಗಳಿಗೆ ನಿರ್ಣಯಿತ ಉತ್ತರ ನೀಡುತ್ತ ಸಾಗುತ್ತಿದ್ದನು. ಆದರೆ ಮಗುವಿಗೆ ಕಥೆ ಬೇಡವಾಗಿದೆ. ಇನ್ನೇನೋ