ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

xvi

ಕಥೆ ಇಲ್ಲವೆ ಕಥಾಂಗ ಹೃದಯವಾಗಿರುತ್ತದೆ. ಗಾದೆ, ಒಗಟು, ಲಾಲಿ, ಲಲ್ಲೆ, ತಿಲ್ಲಾಣಗಳೆಲ್ಲ ಕಥಾಬೀಜಗಳುಳ್ಳ ಹಿಡಿದೆನೆಗಳೇ ಆಗಿವೆ.

ಪ್ರತಿಯೊಂದು ವಸ್ತುವಿನಂತೆ ಪ್ರತಿಯೊಂದು ಸಂಗತಿಗೂ ಒಂದು ಕಥೆಯಿದೆ. ಮುದಿಕೆಹೂರಣವಿಲ್ಲದೆ ಯಾವುದೂ ಕಥೆಗೆ ಕಾರಣವಾಗುವುದಿಲ್ಲ. ಮೊಸಳೆಯ ಮಡು, ಬದನೀಬೀಜ ಹಳ್ಳ, ಬಾಣಗಲ್ಲು, ಸಿಂಗೇನಹರಿ, ಲಂಗೋಟಿಹೊಲ, ಎಮ್ಮೆಕೆರೆ ಮೊದಲಾದವುಗಳು ಒಂದೊಂದು ಕಥೆಯ ತುದಿಯಲ್ಲಿ ಅರಳಿದ ಬಣ್ಣದ ಹೂಗಳೇ ಆಗಿವೆ. ವಸ್ತುವಿನಿಂದ ತುಂಬಿಕೊಂಡಿದ್ದು ಕಥೆಯಾಗಿದ್ದರೂ, ವಸ್ತು ಚಿಕ್ಕದಾಗಿ ರಸವಿಶೇಷದಿಂದ ತುಂಬಿಕೊಂಡಿದ್ದರೆ ಅದು ಸಣ್ಣಕತೆಯೆನಿಸುವದು. ಆ ವಸ್ತು ಹಾಡಿನಲ್ಲಿ ಹೊರಹೊಮ್ಮಿ ಭಾವಗೀತೆಯೆನಿಸುವಂತೆ, ಅಭಿನಯಕ್ಕೆ ಅಳವಟ್ಟರೆ ಏಕಾಂಗವೆನಿಸುವದು. ಹೊಟ್ಟೆಯೊಳಗಿನ ಭಾವವು ಮಾತಿನಿಂದ ಹೊರಬಿದ್ದರೆ ಕಥೆ, ಹಾಡಿನಲ್ಲಿ ಹೊರಹೊಮ್ಮಿದರೆ ಭಾವಗೀತೆ.

ಹಲವಾರು ಕಥೆಗಳು ಗೀತಗಳಾಗಿ ಕಂಗೊಳಿಸಿದರೆ, ಹಲವಾರು ಗೀತಗಳು ಕಥೆಗಳಾಗಿ ಕಾಣಿಸಿಕೊಂಡಿವೆ. ಭಾವಗೀತೆಯಾಗಿ ಬೇಪ೯ಡಬಲ್ಲ ವಸ್ತುವು ಸಣ್ಣ ಕತೆಯಾಗಿ ಮಾರ್ಪಡಬಲ್ಲದೆಂಬ ಮಾತಿಗೆ ಉದಾಹರಣೆಯಂತೆ, ಅವೆಷ್ಟೋ ಕಥೆಗಳನ್ನು ತೋರಿಸಬಹುದು. ಅವೆಷ್ಟೋ ಹಾಡುಗಳನ್ನು ಕಾಣಬಹುದು ಹಾಲಿನಲ್ಲಿ ಜೇನು ಬೆರಸಿದಂತೆ ಒಂದು. ಜೇನಿನಲ್ಲಿ ಹಾಲು ಸುರುವಿದಂತೆ ಇನ್ನೊಂದು. ಒಮ್ಮೆ ಹಾಲು ಜೇನನ್ನು ಬೆಂಬಲಿಸಿದರೆ, ಇನ್ನೊಮ್ಮೆ ಜೇನು ಹಾಲನ್ನು ಹಿಂಬಾಲಿಸುತ್ತದೆ. ಇಲ್ಲಿ ಬಂದ "ತುಂಟ ಬೀಗ"ವಾಗಲಿ. "ದೆವ್ವಕಲಿಸಿದ ಮಂತ್ರ"ವಾಗಲಿ ಕಥೆಯಿಂದಲೇ ಹಾಡಿನ ರೂಪತೊಟ್ಟವೆಂದು ಹೇಳಬಹುದಾಗಿದೆ. ಅಂತೆಯೇ ಆ ಹಾಡುಗಳುದು; ದುಃಖಾಂತವಾಗಿ ಮುಕ್ತಾಯಗೋಂಡಿಲ್ಲ "ಬಾರದ ಬರ", "ಎಲ್ಲಮ್ಮನ ಶಾಪ" ಇಂಥವು ಮೊದಲು ಹಾಡಾಗಿ ಹರಿದು ಹಿಂದಿನಿಂದ ಕಥೆಯಾಗಿ ನಿಂದವೇನೋ. ಅಂತೆಯೇ ಅವು ಮೋದಾಂತವಾಗದೆ ವೇದಾಂತವಾಗಿ ಕೊನೆಗೊಂಡಿವೆ.

ಕವನಕಥೆಗಳೇ ಇರಲಿ, ಕಥಾಗೀತಗಳೇ ಇರಲಿ ಅವುಗಳಲ್ಲಿ ನೇರತೆ ಹಾಗೂ ಸ್ಪಷ್ಟತೆ ಕಂಡುಬರುವದು. "ವೈವಿಧ್ಯತೆಯ ಆರ್ಭಟವಿಲ್ಲ; ಸಂಕೀರ್ಣತೆಯ ಸೆಣಸಾಟವಿಲ್ಲ. ನಿಧಾನವಾದ ಪ್ರವೇಶ, ಸಾವಕಾಶದ ಮುಕ್ತಾಯ. ವಸ್ತುವಿನ ಜಟಿಲತೆಯಿಲ್ಲ. ಪಾತ್ರಗಳ ತೊಡಕಿಲ್ಲ. ಉಪಕಥೆಗಳ ಗೋಜಿಲ್ಲ. ಕಥೆ ಹೇಳುವುದೊಂದೇ ಇಲ್ಲಿ ಪ್ರದಾನ, ಪ್ರದಾನ ಉಳಿದದು ಯಾವುದಿದ್ದರೂ ಅದಕ್ಕೆ ಪೂರಕವಾದ ಹೂರಣ ಅಷ್ತೇ. ಇಲ್ಲಿ ನಡೆಯುವ ಕ್ರಿಯೆಗಳೆಲ್ಲ ಸರಳ ಹಾಗೂ ಸಹಜ, ಪರಿಣಾಮಿ ಹಾಗೂ ಫಲಕಾರಿ" ಎಂಬ ಮಾತು ಎಲ್ಲರಿಗೂ ಒಪ್ಪಿಗೆಯಾಗುವಂತಿದೆ.

ಜನಪದ ಕಥಾ ಸಾಮ್ರಾಜ್ಯದ ಶಾಸನ ಪದ್ದಥಿಯನ್ನು ಅರಿಯಲಿಕ್ಕಾಗದಿದ್ದರೂ