ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

xix

ಕೇಳಿಕೊಂಡಂತೆ ಬರೆದು ತೆಗೆಯಲಾಗಿದೆ. ಬೀದರ ಗುಲಬರ್ಗಾ ಕಥೆಗಳನ್ನುಳಿದು ಇನ್ನೆಲ್ಲ ಕಥೆಗಳನ್ನು ಅವುಗಳ ಪ್ರಾದೇಶಿಕ ಸರಣಿಯೊಡನ ನಮ್ಮ ಭಾಷೆಯಲ್ಲಿ ಬರೆಯುವುದು ಅನಿವಾರ್ಯವಾಯಿತು.

ಈ ಎಲ್ಲ ಕಥೆಗಳು ಇಪ್ಪತ್ತು ವರ್ಷಗಳಿಂದ, ಕೆಲವು ಅದಕ್ಕಿಂತ ಮುಂಚಿನಿಂದ ಕೇಳಿಕೊಂಡವುಗಳಾಗಿವೆ. ಆದರೆ ಬೀದರ-ಗುಲಬರ್ಗಾ ಭಾಗದ ಕಥೆಗಳನ್ನು ಈ ಸಂಕಲನದ ಸಲುವಾಗಿಯೇ ಸಂಗ್ರಹಿಸಿದ್ದರಿಂದ ಅವುಗಳನ್ನು ಸಾಧ್ಯವಿದ್ದಷ್ಟು ಇದ್ದಕ್ಕಿದ್ದ ಹಾಗೆ ಬರೆಯಲಾಗಿದೆ. ಅಲ್ಲಿಯ ಕನ್ನಡ ಭಾಷೆ ತೀರ ಹಂಡಬಂಡವಾಗಿದೆ. ಅದರ ಮೇಲೆ ಉರ್ದುವಿನ ನೆರಳು ಬಿದ್ದಂತೆ, ಮರಾಠಿಯ ಗಾಳಿಯೂ ಬಡಿದಿದೆ. ಆದರೂ ಅದರಲ್ಲಿ ಅಚ್ಚಗನ್ನಡ ಶಬ್ದಗಳು ಚಂಬವಳದಂತೆ ನುಸುಳಿ ಬರುವುದನ್ನು ಕಾಣುವವು. ಆ ಅಚ್ಚಗನ್ನಡ ಶಬ್ದಗಳು ಸಂಶೋಧನ ನಡೆಯಿಸಲು ಅರ್ಹವಾಗಿವೆ. ಮೂರು ಇಲ್ಲವೆ ಎರಡುವರಿ ಮೈಲು ಅಂತರಕ್ಕೆ ಹರದಾರಿಯೆನ್ನುವುದು ವಾಡಿಕೆ. ಹರಿದಾರಿಯೆಂದೂ ಅನ್ನುವುದುಂಟು. ದಾರಿ ಎನ್ನುವ ಮುಂದಿನ ಶಬ್ದ ತೆಗೆದರೆ ಉಳಿಯುವ ಹರಿಶಬ್ದವು ಅಂತರವನ್ನು ಸೂಚಿಸುವಂತೆ ತೋರುತ್ತದೆ ಆ ಭಾಗದಲ್ಲಿ, “ಹನ್ನೆರಡು ಹರಿ ಓಡುವ ಕುದುರೆ, ಇಪ್ಪತ್ತು ಹರಿ ಓಡುವ ಕುದುರೆ" ಎಂಬ ಮಾತು ಕಥೆಗಳಲ್ಲಿ ಬರುತ್ತದೆ. "ಮಗಾ" ಎಂಬ ಶಬ್ದವು ಲಿಂಗಭೇದವಿಲ್ಲದೆ “ಮಗನೇ, ಮಗಳೇ' ಎಂಬರ್ಥಗಳಲ್ಲಿ ಉಪಯೋಗಿಸುವುದು ಕಂಡುಬರುತ್ತದೆ. ಮಲಗಿದ್ದ-ಮನಗಿದ್ದ-ಮಂಗಿದ್ದ ಎಂದು ಮಾರ್ಪಡುವ ರೀತಿಯಲ್ಲಿ ಹಲವು ಶಬ್ದಗಳನ್ನು ಅರ್ಥಯಿಸಬಹುದಾಗಿದೆ. ಉಡುಗಿದದಾಣಿ ಶಬ್ದವು ಹೊಸದೆಂದು ತೋರಿದರೂ, ದಿಟ್ಟಿಸಿ ನೋಡಿದರೆ ಅದು ಕಸುಗಾಳು ಎಂದು ಕಂಡುಬರುವುದು.

“ನೀರು ಹೊಯ್ಕೊಂಡಿದ್ದಳು" ಎನ್ನುವ ವಾಕ್ಯವು ಬಸುರಿಯಾಗಿದ್ದಳು ಎನ್ನುವ ಅರ್ಥದಲ್ಲಿ ಉಪಯೋಗಿಸಲ್ಪಡುತ್ತದೆ. ಹೊರಗೆ ಕುಳಿತು ಅಥವಾ ಕಡೆಗಾಗಿ ಅಂದರೆ ರಜಸ್ವಲೆಯಾದ ಬಳಿಕ ನಾಲ್ಕನೇ ದಿವಸ ಎರಕೊಂಡಿದ್ದೇ ನೀರು ಹೊಡ್ಕೊಂಡಿದ್ದಳೆನ್ನುವುದರ ಅರ್ಥ. ಬಂಕ, ಚಬಕಿ, ಕುಳ್ಳಬಾನ, ಬೋಕಿ ಒಡ್ಡಿ ಮೊದಲಾದ ಶಬ್ದಗಳನ್ನು ಕನ್ನಡದ ಕನ್ನಡಕದಲ್ಲಿ ನೋಡಬಹುದಾಗಿದೆ.

ಮೊದಲು ಬೀದರ ಜಿಲ್ಲೆಗೆ ಸೇರಿ, ಈಗ ಆಂಧ್ರದ ಗಡಿಗ್ರಾಮವಾಗಿರುವ ಜಹಿರಾಬಾದಕ್ಕೆ ಎಕ್ಕೀಹಳ್ಳಿಯೆಂದುದು ಇಲ್ಲಿಯ ಕಥೆಗಳಲ್ಲಿ ಕಂಡುಬರುತ್ತದೆ.

ಇಲ್ಲಿಯ ಅನೇಕ ಕಥೆಗಳನ್ನು ಅದೇಕೆ, ಎಲ್ಲ ಕಥೆಗಳನ್ನು ನಮ್ಮ ಹತ್ತಿರದ ಹಾಗೂ ದೂರದ ಸ್ನೇಹಿತರು ಹಾಗೂ ತಾಯಂದಿರು ಹೇಳಿಕೊಟ್ಟಿದ್ದಾರೆ. ನಾನು ಕೇಳಿ ನೆನಪಿರಿಸಿಕೊಂಡಂತೆ ಓದಿಯೂ ನೆನಪಿರಿಸಿಕೊಂಡಿದ್ದೇನೆ. ಆ ಕ್ರಮ ಕಳೆದ ಅರವತ್ತು ವರ್ಷಗಳಿಂದಲೂ ಸಾಗಿಬಂದಿದೆ. ಅವರೆಲ್ಲರ ಹೆಸರನ್ನಿಲ್ಲಿ ಕಾಣಿಸುವುದು