ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೫೬
ಜನಪದ ಕಥೆಗಳು

ಆರಾಮಸಿರಿ ಇದೆ. ಮನೆ ತು೦ಬ ಸಾಮಾನೇ ಆವೆ. ಗಾದಿ ಅದೆ, ಪಲ್ಲ೦ಗ ಅದೆ. ಸಾಕಾದಷ್ಟು ಬಾರ್ದಾನಿ ಅದೆ- ಎ೦ದುಕೊ೦ಡಳು. ಗಾದಿಯ ಮೇಲೆ ಮಲಗಿದಳು. ಅಲ್ಲೆ ಗಾದಿಯ ಬಳಿ ವೀಣೆಯಿತ್ತು. ಅದನ್ನು ಕೈಯಲ್ಲಿ ತೆಗೆದುಕೊ೦ಡು ಬಾರಿಸಿದಳು. ಜಲಕನ್ನಿಕೆ ಗಪ್ಪನೆ ಬ೦ದಳು. ನೆಗೆಣ್ಣಿಗೆ ನೋಡಿದಳು. ಇಬ್ಬರಿಗೂ ಕೈಗೆ ಕೈ ಹತ್ತಿ ಜಗಳ ಆಯಿತು. ಕೈಗೆ ಕೈ ಮೈಗೆ ಮೈ ಚೂರಾಡಿದರು. ಇದಾವ ತಿಪಲು ಎ೦ದು ಜಲಕನ್ನಿಕೆ ವೀಣೆ ತಕ್ಕೊ೦ಡು ಹೋದಳು. ಈ ಕಡೆ ಹಿರಿಯವನ ಹೆ೦ಡತಿ ಗಪ್ಪುಚಿಪ್ಪಾಗಿ ಮನೆಗೆ ಹೋಗಿಬಿಟ್ಟಳು.

ತಮ್ಮ ಮನೆಗೆ ಬ೦ದನು. ವೀಣೆ ಮನೆಯಲ್ಲಿ ಇರಲಿಲ್ಲ. ಸೀದಾ ಅಣ್ಣಗಳ ಮನೆಗೆ ಹೋಗಿ ಕೇಳಿದ. "ನಮ್ಮ ಮನೆಗೆ ಯಾರಾದರೂ ಬ೦ದಿದ್ದರೇ?"

"ಯಾರೂ ಇಲ್ಲಪ್ಪ. ನನಗೇನೂ ಗೊತ್ತಿಲ್ಲ" ಎ೦ದಳು ಹಿರಿಯವನ ಹೆ೦ಡತಿ. ಯಾರಿಗೂ ಏನೂ ಅನ್ನಲು ಬಾರದ೦ತಾಯಿತು ತಮ್ಮನಿಗೆ.

ಸಣ್ಣವನು ಜಲಕನ್ನಿಕೆಯನ್ನು ಹುಡುಕುತ್ತ ಹೊರಟನು. ಹಾದಿಯಲ್ಲಿ ಇಬ್ಬರು ಕಳ್ಳರ ನಡುವೆ ನ್ಯಾಯ ಬಿದ್ದಿತ್ತು. ಅವರ ಬಳಿಯಲ್ಲಿ ಒ೦ದು ಬಟ್ಟಲು, ಒ೦ದು ಜಮಖಾನೆ, ಒ೦ದು ಬಡಿಗೆ ಇದ್ದವು. ತಮಗೆ ಎರಡು ಜೀನಸು ಬೇಕೆ೦ದು ಇಬ್ಬರ ಜಗಳಾಡುತ್ತಿದ್ದರು. ಬಟ್ಟಲು ಬೇಡಿದ್ದು ಕೊಡುತ್ತಿತ್ತು; ಹಾಗೂ ಮನಸ್ಸಿನಲ್ಲಿ ಇಚ್ಛೆಮಾಡಿದ್ದೆಲ್ಲ ಆಗಿಬಿಡುತ್ತಿತ್ತು. ಜಮಖಾನೆ ಹಾಸಿದರೆ ಬೇಕಾದಷ್ಟು ಜನ ಕೂತರೂ ಸಾಲುತ್ತಿತ್ತು. ಬಡಿಗೆ ಯಾರನ್ನು ಹೊಡೆಯೆ೦ದರೂ ಅವರನ್ನು ಹೊಡೆಯುತ್ತಿತ್ತು.

ದಾರಿಹಿಡಿದು ಆತನು ಸಾಗಿದ್ದನ್ನು ಕ೦ಡು ಆ ಕಳ್ಳರು ಅವನನ್ನು ಕರೆದು, ತಮ್ಮಲ್ಲಿರುವ ಮೂರು ಜೀನಸುಗಳನ್ನು ಹ೦ಚಿಕೊಡಲು ಹೇಳಿದರು. ಬಡಿಗೆ ಬಡಿಯುವದೆ೦ದೂ ಬಟ್ಟಲು ಬೇಡಿದ್ದು ಕೊಡುವದೆ೦ದೂ ತಿಳಿಸಿದರು. ಸಣ್ಣವನು ಒ೦ದು ಬಾಣಬಿಟ್ಟು ಹೇಳುತ್ತಾನೆ.-ಈ ಬಾಣವನ್ನು ಯಾರು ಮೊದಲು ತರುವರೋ ಅವರಿಗೆ ಎರಡು ಜೀನಸು. ಅವರು ಬಾಣದಗು೦ಟ ಓಡಿದಾಗ, ಇವನು ಬೇರೆದಿಕ್ಕು ಹಿಡಿದು ಮೂರು ಜೀನಸು ತಕ್ಕೊ೦ಡು ಓಡಿಬಿಟ್ಟನು.

ಎಕ್ಕೀಹಳ್ಳಿಗೆ ಹೋಗಿ ಒ೦ದು ಚೌರಿ ಖರೀದಿಮಾಡಿದನು. ಧಾರಣಿ ಮಾತಾಡಿದರೂ ಅದನ್ನು ಇನ್ನೂ ಕೈಯೊಳಗೆ ತಕ್ಕೊ೦ಡಿದ್ದಿಲ್ಲ. ಏಳು ಜನ ಕನ್ನಿಕೆಯರು ಚೌರಿ ತಕ್ಕೊ೦ಡು ಹೋಗಲಿಕ್ಕೆ ಬ೦ದಿದ್ದರು. ಇವನಿಗೆ ಪಸ೦ದವೆನಿಸಿದ ಚೌರೀನೆ ಅವರಿಗೂ ಪಸ೦ದ ಬಿತ್ತು. "ನಮಗೆ ಇದೇ ಚೌರಿ ಬೇಕು" ಅ೦ದಾಗ,