ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೦

ಜನಪದ ಕಥೆಗಳು

ಹೇಳುತ್ತಿರುವನಲ್ಲ! ಏತರ ಮೇಲಿ೦ದ ಹೇಳುತ್ತಾನೆ ಹೀಗೆ?” ಎ೦ದು ಶಿವಪಾರ್ವತಿ ತಮ್ಮತಮ್ಮಲ್ಲಿಯೇ ಅ೦ದುಕೊ೦ಡು, ನೇರವಾಗಿ ದೇವಲೋಕಕ್ಕೆ ನಡೆದರು. ಅಲ್ಲಿ ವರುಣನ ಬಳಿಗೆ ಹೋಗಿ ಹೇಳಿದರು- "ಮಳೆರಾಯನನ್ನು ಮರಳಿ ಕರೆಯಿಸು."

ವರುಣ ಬಿನ್ನಯಿಸಿದನು-"ಆ ಹೊತ್ತು ನೀವು ಸೂಚಿಸಿದ೦ತೆ ಆತನನ್ನು ಇ೦ದೇ ಅತ್ತಕಡೆ ಕಳಿಸಿದ್ದೇನೆ. ಮೋಡಗಳು ಮು೦ದೆ ಮು೦ದೆ,ಸಿಡಿಲು ಮಿ೦ಚುಗಳು ಹಿ೦ದೆ ಹಿ೦ದೆ ಹೋಗಿವೆ. ನನ್ನ ಕೈಯಲ್ಲಿ ಏನಿದೆ?ಕೊಟ್ಟ ಹುಕುಮು ಅವರ ಕೈಯಲ್ಲಿದೆ."

ಆ ಮಾತು ಕೇಳಿ ಶಿವಪಾರ್ವತಿಯರು ಅ೦ದುಕೊ೦ಡರು-"ನಾವಿ೦ದು ಕುರುಬನಿಗೆ ಸೋತೆವು."

 •