ಪುಟ:ಉನ್ಮಾದಿನಿ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚದುರ ಚಂಭ ರಾಮಗೋಪಾಲ ;-t ಹುಡುಗಿಗೆ ಹನ್ನೆರಡನೆಯ ವರ್ಷ, ನನ್ನ ತಮ್ಮನು ಇಷ್ಟು ಚಿಕ್ಕವಯಸ್ಸಿನಲ್ಲಿ ತಿಂದಮತಾನುಸಾರವಾಗಿ ಹುಡುಗಿಗೆ ಮದುವೆಮಾಡಿ ಧರೆ, ಬ್ರಹ್ಮಸಮಾಜದಲ್ಲಿ ತನಗೆ ತಲೆ ತಗ್ಗಿ ಹೋಗುವುದೆಂದು ಹೇಳುತ್ತಲಿರುವನು.” ತರ್ಕಾಲಂಕಾರ ಮಹಾಶಯರು ವಿಸ್ಮಿತರಾಗಿ, 14 ಅದು ಹೇಗೆ ? ಕನ್ಯಾಕು ಲವು ಮೀರಿಹೋಯಿತು ! ಇನ್ನು ವಿಳಂಬಮಾಡುವುದು ಸರಿಯಲ್ಲ, ಏಕಾಂತವ ಗಿಯೇ ಮದುವೆ ಮಾಡಿಬಿಡು ಒಳ್ಳೆಯದು, ಪಾತ್ರವನ್ನೆಲ್ಲಿ ಗೊತ್ತು ಮಾಡಿರುವೆ ? !! ಎಂದು ಕೇಳಿದರು, ರಾಮಗೋಪಾಲ :- ಪಾತ್ರನು ನಮ್ಮ ಮನೆಯಲ್ಲಿಯೇ ಇರುವನು, ಕಾತ್ರನ ತಂದೆಯು ನನಗೆ ಪರಮ ಸ್ನೇಹಿತನಾಗಿದ್ದನು, ಈಗವನು ಇಲ್ಲ. ಪಾತ್ರನಿಗೆ ಯಾರೂ ಇಲ್ಲ. ಈ ಮದುವೆಗೋಸ್ಕರ ನಾನವನನ್ನು ಕರೆತಂದು, ಮನೆಯಲ್ಲಿಟ್ಟು ಕೊಂಡಿರುವೆನು.” ತರ್ಕಾಲಂಕಾರ ಮಹಾಶಯರು ಆಹ್ವಾದಿತರಾಗಿ, 14 ಹಾಗಾದರೆ ಎಲ್ಲವನ್ನೂ ಸಿದ್ಧಪಡಿಸಿರುವೆ, ಪಾತ್ರನು ಸುಪಾತ್ರನಷ್ಟೆ ? ” ಎಂದು ಹೇಳಿದರು, ರಾಮಗೋಪಾಲನು ಕೂಡಲೆ, ( ಅಹುದು, ಪಾತ್ರನು ಸರ್ವಾ೦ಶದಲ್ಲಿಯ ಸುಪಾತ್ರನಾಗಿರುವನು ; ನನಗೂ ಸಂಬಂಧ, ಅವನನ್ನು ಈಗಲೇ ಕರೆಯಿಸುವನು, ಅವನ ಸಂಗಡ ಮಾತನಾಡುವ ಕೆಲವು ಸಂಗತಿಗಳುಂಟು, ಅದನ್ನೆಲ್ಲಾ ತಮ್ಮ ಸವ ಕ್ಷಮ ಮಾತನಾಡುವುದು ಒಳ್ಳೆಯದು ಎಂದನು. ಹೀಗೆಂದು ಹೇಳಿ, 1 ಖಗೇಂದ್ರ ! ' ಎಂದು ಕೂಗಿದನು. ಕೂಡಲೇ ಒಬ್ಬ ಹದಿನೆಂಟು ವರುಷ ವಯಸ್ಸಿನ ಯುವಕನು ಬಂದು ನಿಂತನು, ರಾಮಗೋಪಾಲನು ಖಗೇಂದ್ರನನ್ನು ಕುರಿತು, ಪುರೋಹಿತರಿಗೆ ನಮಸ್ಕಾರಮಾಡೆಂದು ಹೇಳಿದನು. ಖಗೇಂದ್ರನು ತತ್ ಕ್ಷಣದಲ್ಲಿ ಭೂಮಿಷ್ಟನಾಗಿ ತರ್ಕ ಲ೦ಕಟರಮಹಾಶಯರಿಗೆ ಸಾಷ್ಟಾಂಗಣಾಮವನ್ನು ಮಾಡಿದನು, ರಾಮಗೋಪಾಲನು ಅವನಿಗೆ ಕುಳಿತು ಳ್ಳುವುದಕ್ಕೆ ಅಪ್ಪಣೆ ಮಾಡಿದನು, ಗೇಂದ್ರ ಕಳಿತುಕೊ ಡ . ರಾಮಗೋಪ ಲನು, 1 ಖಗೇಂದ್ರ ! ನಾನು ನಿನ್ನನ್ನು ನನ್ನ ಮನಹಾಗೆ ನೋಡುತ್ತಲಿರುವೆನು. ಅದುಕಾರಣ ನಿನಗೆ ದುರ್ಗಾವತಿಯನ್ನು ಕೊಟ್ಟು ಮದುವೆಮಾಡುವೆನು, ನೀನು ದುರ್ಗಾವತಿಯನ್ನು ಪ್ರೀತಿಸುವುದನ್ನೂ ನಾನು ಕಂಡಿರುವೆನು, ಆದರೆ ನೀನೆಂದು ಪ್ರತಿಜ್ಞೆಯನ್ನು ಮಾಡಬೇಕು” ಎಂದನು.