ಪುಟ:ಉನ್ಮಾದಿನಿ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಎರಡನೆಯ ಪರಿಚ್ಛೇದ. ವಕೀಲೆ ಹೇಳಿದ ಮದುವೆಯದ ಎರಡು ವರ್ಷವಾದಮೇಲೆ ವಿಸೂಚಕಾರೋಗ - ದಿಂದ ರಾಮಗೋಪಾಲನಿಗೆ ಲೋಕಾಂತರಪ್ರಾಪ್ತಿಯುಂಟಾಯಿತು. ದುರ್ಗ ವತಿಗೆ ದಿಕ್ಕಿಲ್ಲದೆ ಹೋಯಿತು. ಕಲಿಕತ್ತೆಯಲ್ಲಿ ನವೀನಗೋಪಾಲನಿಗೆ ಈ ಸಮಾಜ ರವು ಮುಟ್ಟಿತು. ಆದರೆ ಅಲಹಾಬಾದಿನಲ್ಲಿ ಖಗೇಂದ್ರನಾಥನಿಗೆ ಈ ಸಮಾಚಾರವನ್ನು ಯಾರೂ ಬರೆದು ಕಳುಹಿಸಲಿಲ್ಲ. ಈ ಸಮಾಚಾರವನ್ನು ಕಳುಹಿಸುವ ಭಾರವು ಯಾರ ಮೇಲೆ ಇತ್ತೋ, ಆ ತರ್ಕಾಲಂಕಾರ ಮಹಾಶಯರು ಆಗ ಊರಲ್ಲಿರಲಿಲ್ಲ. ಆ ಏಕಾಂತ ವಿವಾಹದ ಸಮಾಚಾರವನ್ನು ಮತ್ತಾರೂ ಅರಿಯರು, ಅದಕಾರಣ ಖಗೇಂ ದ್ರನಿಗೆ ಸಮಾಚ-ರವನ್ನು ಕೊಡುವವರು ಯಾರು ? ನವೀನಗೋಪಾಲನಿಗೆ ಸಮ ಚಾರ ಮುಟ್ಟಿದಕೂಡಲೆ, ಅವನು ಸ್ವಗ್ರಾಮಕ್ಕೆ ಬಂದು, ಅಣ್ಣನು ಬಿಟ್ಟು ಹೋಗಿದ್ದ ಆಸ್ತಿಯನ್ನೆಲ್ಲಾ ಭದ್ರಪಡಿಸಲಾರಂಭಿಸಿದನು, ರಾಮಗೋಪಾಲನು ಸಾಯುವುದಕ್ಕೆ ಪೂರ್ವ ಒಂದು ಉಯಿಲನ್ನು ಬರೆದಿಟ್ಟಿದ್ದರು. ಅದು ನವೀನಗೋಪಾಲನಿಗೆ ಸಿಕ್ಕಿತು. ಅದರಲ್ಲಿ ರಾಮಗೋಪಾಲನು ತನ್ನ ಸ್ಥಾವರ ಜಂಗಮ ಆಸ್ತಿಯನ್ನೆಲ್ಲಾ ದುರ್ಗಾವ, ತಿಗೆ ದಾನವಾಗಿ ಬರೆದಿದ್ದನು. ನನಗೋಪಾಲನ ಇತರ ಮಕ್ಕಳಿಗೆ ಅದರ ಮೇಲೆ ಅಧಿ ಕಾರವಿರಲಿಲ್ಲ. ದರ್ಗಾವತಿ ಯ ವಯಸ್ಕಳಾಗುವವರೆಗೂ ಆ ಆಸ್ತಿಯೆಲ್ಲಾ ಅವಳ ಗಂಡನ ಸ್ವಾಧೀನದಲ್ಲಿ ಬೇ ಕೆಂದೂ ಉಯಿಲಿನಲ್ಲಿ ಬರೆದಿತ್ತು. ಆದರೆ ಅದರಲ್ಲಿ ಗಂಡನ ಹೆಸರು ಬರೆದಿರಲಿಲ್ಲ. ರಾಮಗೋಪಾಲನ ಒಂದು ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಆಸ್ತಿಯನ್ನು ಇಟ್ಟು ಹೋಗಿದ್ದವು. ಆದ ಕಾರಣ ನವೀನಗೋಪಾಲನಿಗೆ ಭಾತೃವಿಯೋ ಗದಿಂದ ಆನಂದವೋ ಅಥವಾ ದುಃಖವೋ, ಇದರಲ್ಲಿ ಯಾವುದು ಹೆಚ್ಚಾಗಿತ್ತೋ, ಅದನ್ನು ಕಂಡು ಹಿಡಿಯುವುದು ನಮಗೆ ಇನ್ನೂ ಸಾಧ್ಯವಾಗಿಲ್ಲ. ಆದರೆ ಉಯಿಲಿ ನಲ್ಲಿ ತನ್ನ ಹೆಸರು ಇಲ್ಲವಾದುದಕ್ಕೆ ಬಹಳ ದುಃಖಿತನಾಗಿದ್ದನೆಂದು ನಾವು ವಿಚಾರಿಸಿ ದುದರಲ್ಲಿ ತಿಳಿಯಒಂದಿತು. - ನವೀನಗೋಪಾಲಘು ಒಬ್ಬ ಪೂರ್ಣವಾಗಿ ಬ್ರಹ್ಮವಾಗಿದ್ದನು. ಆದು ದರಿಂದ ಅವನು ತನ್ನ ಮೃತನಾದ ಅಣ್ಣನ ಶ್ರದ್ಧಾದಿಗಳಿಗೆ ಏರ್ಪಾಡಾವುದೂ ಮಾಡದೆ, ಮನೆಯಲ್ಲಿದ್ದ ರೆಕ್ಕೆ ಚರಸ್ವತ್ತು ಮುಂತಾದುದನ್ನೆಲ್ಲಾ ಒಟ್ಟು ಮಾಡಿ ಕೊಂಡು, ಸಂಗಡ ಮಗಳಾದ ದುರ್ಗಾವತಿಯನ್ನೂ ಕರೆದುಕೊಂಡು, ಕಲಿಕತ್ತೆಗೆ ಹೊರಟುಹೋದನು, ದುರ್ಗಾವತಿ ಯ ಪ್ರಕೃತಿಯು ಅತಿ ಕೋಮಲವಾದುದು,