ಪುಟ:ಉನ್ಮಾದಿನಿ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅನಾದಿನಿ ಮನೆಯಲ್ಲಿ ಅಪರಿಚಿತರಾದವರ ಸಂಗಡ ಸೇರಿದ ಹಾಗಿರುವುದು, ದುರ್ಗಾವತಿಗೆ ಈ ಯವಸ್ಥೆಯ ಪರಿವರ್ತನೆಯಿಂದ ಸುಖವು ಹೆಚ್ಚಾಯಿತೊ ಅಥವಾ ದುಃಖವು ಹೆಚ್ಚಾ ಗಿರುವುದೋ ? ನಾವು ಈಗ ದುರ್ಗಾವತಿಯನ್ನು ಸುಖೆಯೆಂದು ಹೇಳಬೇಕೋ ಅಥವಾ ದುಃಖಿಯೆಂದು ಹೇಳಬೇಕೋ ? ನೀವು ಹೇಳಿರಿ, ದುರ್ಗಾವತಿಗೆ ಬ್ರಹ್ಮ ತಕ್ಕೆ, ಸೇರಿದ ಅವಳ ತಾಯಿತಂದೆಗಳು ಸೋದರಸೋದರಿಯರು, ಇವರ ಮೇಲೆ ಸ್ವಲ್ಪವೂ ಪ್ರೀತಿವಿಶ್ವಾಸಗಳು ಇರಲಿಲ್ಲ. ಯಾರನ್ನು ಇಷ್ಟು ಕಾಲ ನೋಡಿರಲಿಲ್ಲ ವೋ, ಅಂತಹ ವರ ಮೇಲೆ ಪ್ರೀತಿ ಹುಟ್ಟುವ ಬಗೆ ಹೇಗೆ ? ದುರ್ಗಾವತಿಯು ಇಲ್ಲಿಗೆ ಬಂದು ಮತ್ತೊಂದು ಅನನುಕೂಲವಾಯಿತು. ನನಗೆಪಾಲನ ಹೆಂಡತಿ ಹೈಮವತಿಯು ಅವಳಿಗೆ ಯಥಾರ್ಥ ಗರ್ಭಧಾರಣಿಯಾಗಿದ್ದರೂ, ಅವಳನ್ನು ತನ್ನ ತಾಯಿಯೆಂದೊಪ್ಪಿ ಕೊಳ್ಳುವುದಕ್ಕೆ ಮನಸ್ಸು ಹಿಮ್ಮೆಟ್ಟುವುದು ಹಳ್ಳಿಯಲ್ಲಿ ಹಿಂದೂಗೃಹದಲ್ಲಿ ಪಾಲಿತ ಳಾದ ದುರ್ಗಾವತಿಯೂ ಆ ವಿಚಿತ್ರ ವೇಷಭೂಷಣಗಳುಳ್ಳ ಬೂಟುಧಾರಿಣಿಯಾದ ಲಜ್ಜೆಯಿಲ್ಲದ ಹೆಂಗಸನ್ನು ಹೇಗೆ ತಾನೇ ತನ್ನ ಗರ್ಭಧಾರಿಣಿಯೆಂದೊಪ್ಪಿಕೊಳ್ಳುವಳು ? ಅವಳಿಗೆ ತಾಯ:ಯು ಸ್ಮರಣೆ ಮನಸ್ಸಿಗೆ ಬಂದರೆ, ಆ ರಾಮಗೋಪಾಲನ ಗತಿಸಿಹೋದ ಹೆಂಡತಿಯಾದ ಹರಸು 7ರಿಯ ಜೈನಕವೇ ಬರುವುದು, ಆಗ ದುರ್ಗಾವತಿಗೆ ಕಣ್ಣೀರು ನಿಲ್ಲದು. ಅವಳು ಬಿಕ್ಕಿ ಬಿಕ್ಕಿ ಅಳುವಳು. ದುರ್ಗಾವತಿಯು ಮನೆಗೆ ಬಂದುದನ್ನು ಕಂಡು, ತಾಯಿ ಜೈಮವತಿಯು ಅವ ಳನ್ನು ಆದರಿಸಿ ಅಭ್ಯ ರ್ತನ ಮಾಡಿ ಬರಮಾಡಿಕೊಂಡಳು. ಆದರೆ ಆ ವಿಜಾತೀಯವಾದ ಆದರವೂ ಆಭ್ಯ ರ್ತನವೂ ದುರ್ಗಾವತಿಗೆ ಸರಿಯಾದುದಾಗಿ ಕಾಣಿಸಲಿಲ್ಲ. ದುರ್ಗಾ ವತಿಯು ತಾಯಿಯನ್ನು ಮೊದಲು ನೋಡಿದ ಕೂಡಲೆ ಭೂಮಿಷ್ಠಳಾಗಿ ಪ್ರಣಾಮ ವನ್ನು ಮಾಡುವುದಕ್ಕೆ ಹೆ ನೀದಳು, ಆದರೆ ಹೈಮವತಿಯು ಅವಳು ಹಾಗೆ ಪ್ರಣಾಮ ಮಾಡುವುದನ್ನು ನಿಷೇಧಿಸಿ, ಕೇವಲ ಮುಖವನ್ನು ಚುಂಬನ ಮಾಡಿದಳು. ಮತ್ತು ಅವಳ ಆಹಾರ, ಉಡವು, ಇವುಗಳ ವಿಚಾರದಲ್ಲಿಯೂ ಹೈಮವತಿಯು ಪ್ರಯತ್ನ ಪೂರ್ವಕ ವಾಗಿ ಮಮತೆಯಿಂದ ನೋಡಿಕೊಳ್ಳಲಾರಂಭಿಸಿದಳು. ಅದು ದುರ್ಗಾವತಿಗೆ ಬಹಳ ಕಷ್ಟವನ್ನುಂಟುಮಾಡಿತು. ಬೆಳಗಾಗುತ್ತಲೇ ಆರೇಳು ಗಂಟೆಯೊಳಗಾಗಿ ಎಲ್ಲರ ಸಂಗಡ ಅವಳು ಕಾಫಿ, ಟಿ, ಮುಂತಾದುದನ್ನು ಕುಡಿಯಬೇಕೆಂದು ಬಲವಂತಕ್ಕೆ ಪ್ರಾರಂಭವಾಯಿತು. ಹತ್ತು ಘಂಟೆಗೆ ಊಟಿ, ಪುನಃ ಎರಡು ಘಂಟೆಗೆ ಫಲಾಹಾರ, ಸಾಯಂಕಾಲದಲ್ಲಿ ಪುನಃ ಟಿ, ತಿರುಗಿ ರಾತ್ರಿ ಹತ್ತು ಘಂಟೆಗೆ ಊಟ, ಆ ಊಟ pದರೊ~-ಹೆಂಗಸರೂ ಗಂಡಸರೂ ಎಲ್ಲರೂ ಏಕತ್ರ ಕುಳಿತುಕೊಂಡು ಮಾಡಬೇಕಾದ