ಪುಟ:ಉನ್ಮಾದಿನಿ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಾಲ್ಕನೆಯ ಪರಿಚ್ಛೇದ. ಪೂರ್ವೋಕ್ತಪರಿಣಯವಾದ ಮೂರು ದಿನಗಳಲ್ಲಿಯೇ ಜ್ಯೋತಿಪ್ರಕಾಶನು ವಿಷಣ್ಣ ವದನನಾಗಿ ಒಂದು ನಿರ್ಜನವಾದ ಕೊಟ್ಟಡಿಯಲ್ಲಿ ಒಬ್ಬನೇ ಕುಳಿತಿದ್ದನು. ಈಗವನಿಗೆ ಹರ್ಷದಲ್ಲಿ ವಿಷಾದ, ಇಷ್ಟರಲ್ಲಿಯೇ ಅವನ ಹೃದಯದಲ್ಲಿ ಆನಂದೆಲ್ಲಾ ಸದ ಒಂದು ಚಿಹ್ನೆ ಯಾದರೂ ಇರಲಿ, ಈ ಪರಿಣಯದಲ್ಲಿ ಅವನಿಗೆ ಇದ್ದ ಆಶೆ ಭರ ವಸೆಗಳೆಲ್ಲವೂ ನಿರ್ಮಲವಾಗಿ ಹೋದವು ಆಹ್ಲಾದೋಸಗಳಿಗೆ ಪ್ರತಿಯಾಗಿ ಅವನು ಮನಸ್ಸಿನಲ್ಲಿ ಒಂದು ದಾರುಣವಾದ ಯಾತನೆಯನ್ನು ಅನುಭವಿಸುತ್ತಲಿದ್ದನು. ಆ ಆಶೆ ಭರವಸೆಗಳಿಗೆ ಪ್ರತಿಯಾಗಿ ಅವನ ಹೃದಯವು ನೈರಾಶ್ಯದ ವಿಷಮವಾದ ಆಘಾತದಿಂದ ಶತಧಾ ಒಡೆದುಹೋಗಿರುವುದು, ಜ್ಯೋತಿಪ್ರಕಾಶನು ನಿಟ್ಟುಸಿರನ್ನು ಬಿಟ್ಟು, ಏತಕ್ಕೆ ಹೀಗಾಯಿತೆಂದೆಂದುಕೊಂಡನು. ಈ ಸಮಯಕ್ಕೆ ಸರಿಯಾಗಿ ಮತ್ತೊಬ್ಬ ಮನುಷ್ಯನು ಕೊಟ್ಟಡಿಯೊಳಗೆ ಪ್ರವೇಶಮಾಡಿದನು. ಬ್ಯೂ ಶಿಕಾಸನು ಆ ಮನುಷ್ಯನಿಗೆ ಅಭ್ಯರ್ಥಿನ ಮಾಡಿ, ಅವ ನನ್ನು ಇದಿರಿಗೆ ಇದ್ದ ಕುರ್ಚಿಯ ಮೇಲೆ ಕುಳ್ಳಿರಿಸಿದನು. ನವಾಗತ ವ್ಯಕ್ತಿಯು ಜ್ಯೋತಿಪ್ರಕಾಶನ ಮುಖವನ್ನು ಒಂದು ತರವೆ ನೋಡಿ. ೯೯ ಇದೇನು, ಮುಖವು ಬಾಡಿರುವ ಹಾಗಿದೆ ? ಮೈಯಲ್ಲಿ ಆಲಸ್ಯವೇನು ? ” ಎಂದು ಕೇಳಿದನು. ಜ್ಯೋತಿ ಪ್ರಕಾರ ಬಿಸುಸುಯ್ಯು, “ ನನಗೆ ಶಾರೀರಕ ಆಲಸ್ಯವೇನು ಇಲ್ಲ. ಆದರೆ ನರೇಂದ್ರ, ನಾನು ಒಪಳ ವಿವದ್ಧನಾಗಿರುವನು, ನನ್ನ ಹೆಂಡತಿಯು ಬಹಳ ಸುಗ್ಧಳಾಗಿರುವಳು. ಅದಕ್ಕೋಸ್ಕರವೇ ನಿನ್ನನ್ನು ಕರೆಯಿಸಿದೆನು” ಎಂದನು.

  • ನರೇಂದ್ರನಾಥ ಸರಕಾರನು ಕಲಿಕತ್ತೆಯಲ್ಲಿ ಒಬ್ಬ ಪ್ರಸಿದ್ಧನಾದ ಬ್ರಹ್ಮ ಡಾಕ್ಟರನು, ಮತ್ತು ಜ್ಯೋತಿಪ್ರಕಾಶನಿಗೆ ಪರಮಾಪ್ತನಾದ ಸ್ನೇಹಿತ ಜೋತಿಪ್ರಕು ಶನ ಮಾತನ್ನು ಕೇಳಿ ಆಶ್ಚರ್ಯಪಟ್ಟು, * ಅದೇನು, ಇಷ್ಟರಲ್ಲಿಯೇ ಅವಳಿಗೆ ಆಲಸ್ಯ ವುಂಟಾಯಿತೆ ?” ಎಂದು ಕೇಳಿದನು.

ಜ್ಯೋತಿ :-I: ಆಲಸ್ಯವು ಎಂತಹದುದೋ ಅದು ಗೊತ್ತಾಗದು. ಆದರೆ ಲಕ್ಷಣಗಳನ್ನು ನೋಡಿದರೆ, ಪ್ರಾಣವುಳಿಯುವುದು ಕಷ್ಟ. ಅಷ್ಟು ತಿಳಿದುಕೊಳ್ಳ ಬಲ್ಲೆನು, ೨೨