ಪುಟ:ಉನ್ಮಾದಿನಿ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

20 ಉನ್ಮಾದಿನಿ ನಾನದನ್ನು ಅರಿಯೆನು, ಅವರು ನಿನ್ನನ್ನು ಕರೆಯಿಸಬೇಡವೆಂದು ಹೇಳಿದರು. ಅವರ ಹೇಳಿಕೆಯ ಪ್ರಕಾರ ಒಬ್ಬ ಮಂತ್ರಗಾರನನ್ನು ಕರೆಯಿಸಿದೆನು. ಅವನು ಬಂದು ಮಾಡಿದ ಕಾರ್ಯವನ್ನು ನೋಡಿ ನನಗೆ ಬಹಳ ಆಶ್ಚರ್ಯವಾಯಿತು. ಪಿಶಾಚಿ, ಭೂತ, ಮಂತ್ರ ಇವುಗಳಲ್ಲಿ ನನಗೆ ಸ್ವಲ್ಪವೂ ನಂಬುಗೆಯಿಲ್ಲ. ಆದರೆ ಆ ಮಂತ್ರಗಾ ರನ ಕಾರ್ಯವನ್ನು ನೋಡಿ ನನಗೆ ನಂಬುಗೆಯುಂಟಾಯಿತು, ” ಈ ಸಮಯದಲ್ಲಿ ಡಾಕ್ಟರನು ಮುಂದೆ ಮಾತು ಸಾಗಗೊಡಿಸದೆ, “ ಆ ನಂಬುಗೆ ಯುಂಟಾದುದು ಹೇಗೆ ? ” ಎಂದನು. ಜ್ಯೋತಿಪ್ರಕಾಶನು ಪುನಃ ಹೇಳತೊಡಗಿದನು :_C ಅಂತಹ ದುರ್ಬಲವುಳ್ಳ ರೋಗಿಯು, ಎರಡು ಸಾಸವೆಯು ಕಳುಗಳನ್ನು ಮಂತ್ರಿಸಿ ಮೈಮೇಲೆ ಹಾಕುತ್ತಲೆ, ಅವಳ ಶಕ್ತಿಯು ಅತಿ ಯಾಯಿತು, ಆಗವಳನ್ನು ಹಿಡಿದು ನಿಲ್ಲಿಸುವುದೇ ಕಷ್ಟವಾಯಿತು.” ನಗೇಂದ್ರನಾಥನು ಆತುರದಿಂದ, ೧೯ ಅನಂತರ, ಅದಾದಮೇಲೆ ?” ಎಂದನು. ಜ್ಯೋತಿಪ್ರಕಾಶನ. ಪುನಃ ಹೇಳತೊಡಗಿದನು : ಅನಂತರ ಒಂದು ಅರಸಿ ನದ ಕೊನೆಯ ತುಂಡನ್ನು ಮಂತ್ರಿಸಿ, ಮಗಿಗೆ ತೋರಿಸಿದೊಡನೆ ಬಾಯಿಯಿಂದ ಮಾತು ಹೊರಟಿತು. ಆ ವಿವಾಹವಾದಮೇಲೆ ವಿನೋದಿನಿಯ ಬಾಯಿಯಿಂದ ಒಂದು ಮಾತನ್ನೂ ಕೇಳಿರಲಿಲ್ಲ. ಆಕೆ ರಣ ಆತುರದಿಂದ ನಾನೂ ಹೋಗಿ ಅಲ್ಲಿ ನಿಂತು ಕೊಂಡೆನು. ಆದರೆ ಅವಳು ಹೇಳಿದ ಮಾತುಗಳನ್ನು ಕೇಳಿ, ನನಗೆ ಎದೆಯು ನಡುಗಿ ಹೋಯಿತು. ಆ ಕಂಠಸ್ವರವು ಅತಿ ಕರ್ಕಶವಾಗಿತ್ತು, ಎನೋದಿನಿಯ ಕಂಠಸ್ವರ ವೆಂದು ನನಗೆ ನಂಬುಗೆ ಹುಟ್ಟಲಿಲ್ಲ. ಆ ಕರ್ಕಶವಾದ ಕಂಠಸ್ವರದಲ್ಲಿ ಅವಳು ಹೇಳಿದ ಮಾತುಗಳು ಏನಿರಬಹುದೆಂದು ತಿಳಿಯುವೆ ? ಏನೆಂದರೆ : ನೀವು ಇವಳನ್ನು ಏತಕ್ಕೆ ಇಲ್ಲಿಗೆ ಕರೆತಂದಿರಿ ? ಅವಳು ಎಲ್ಲಿದ್ದ ಆ ಮಹೇಶಪುರಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಬಿಟ್ಟು ಬನ್ನಿ. ಇಲ್ಲದಿದ್ದರೆ ನಿಮಗೆ ಮೇಲಾಗದು, ನಿಮ್ಮಲ್ಲಿ ಒಬ್ಬನೂ ಪ್ರಾಣದಿಂದಿರನು' ಎಂದು ಹೇಳಿದಳು, ನಾನು ಸ್ವಬ್ದನಾಗಿ ಅಲ್ಲಿಯೇ ಇದಿರಿಗೆ ನಿಂತಿ ದ್ದೆನು. ನನ್ನನ್ನು ಕಂಡು ನನ್ನ ಮೇಲೆ ರೇಗಿದಳು. ನನ್ನನ್ನು ಕುರಿತು, ' ನೀನು ವಿನೋದಿನಿಯನ್ನು ಮದುವೆಮಾಡಿಕೊಂಡೆನೆಂದು ತಿಳಿದಿರುವೆಯಾ ? ಅವಳು ನಿನ್ನವಳಾ ಗುವಳೆ ? ಎನೋದೆಯು ಒಣಗಿ ನಿನ್ನ ವಿನೋದೆಯಾಗಳು, ಅವಳು ದುರ್ಗಾವತಿ ಯಾಗಿರುವಳು. ಚಿರಕಾಲವೂ ನನ್ನ ವಳಾಗಿರುವಳು, ಅವಳನ್ನು ಕರೆದುಕೊಂಡು ಹೋಗಿ ಬಿಟ್ಟು ಬಾ ! ಈಗಲೆ ಬಿಟ್ಟ ಬಾ !! ” ಎಂದು ಹೇಳಿದಳು. ನಾನಾದರೋ, ಅವಾಕ್ ! ಆ ಭಯಂಕರವಾಧ ೪ತಿಗು ಈಗಲೂ ನನ್ನ ಕಿಗೆ ಕೇಳಿಸುವಹಾಗಿ