ಪುಟ:ಉನ್ಮಾದಿನಿ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಾಲ್ಕನೆಯ ಪರಿಚ್ಛೇದ 21 ರುವುದು, ವಿನೋದಿನಿಯ ಆ ಸುಂದರವಾಗಿದ್ದ ಕಣ್ಣುಗಳನ್ನು ನೋಡಿ, ನಾನು ಎಮೋಹಿತನಾಗಿದ್ದೆನು. ಈಗ ಆ ಕಣ್ಣುಗಳನ್ನು ನೋಡಿದರೆ, ನನ್ನ ಪ್ರಾಣವು ಭಯ ದಿಂದ ಆಕುಲವಾಗುವುದು, ಭೂತ, ಪಿಶಾಚಿ ಇವುಗಳಲ್ಲಿ ನನಗೆ ಈಗ ದೃಢವಾದ ನಂಬುಗೆಯುಂಟಾಗಿಹೋಗಿರುವುದು, ನಗೇಂದ್ರ:-lt ಅನಂತರ, ಮಂತ್ರವಾದಿಯು ಆಗ ಏನುಮಾಡಿದನು ? ” ಜ್ಯೋತಿ:-1 ನನಗೇನೋ ಆ ಭೂತವನ್ನು ಬಿಡಿಸಿ ಓಡಿಸುವ ಭರವಸೆಯರ ಲಿಲ್ಲ. ಆದರೆ ಮಂತ್ರವಾದಿಯು ಆ ಸಮಯದಲ್ಲಿ ಭೂತವನ್ನು ಬಿಡಿಸುವುದಾಗಿ ಭರವ ಸೆಯನ್ನು ಕೊಟ್ಟನು, ಮತ್ತು ಶನಗೆ ತಕ್ಕ ಪುರಸ್ಕಾರವನ್ನು ಕೊಡಬೇಕೆಂದು ಕೇಳಿ ಕೊಂಡನು. ಅನಂತರ ಸಾಸವೆಯ ಕಾಳುಗಳನ್ನು ಮಂತ್ರಿಸಿ ಒಂದೊಂದಾಗಿ ಅವಳ ಮೈಮೇಲೆ ಎಸೆಯುತ್ತ ಬಂದನು, ಆದು ರೋಗಿಗೆ ಅಸಹ್ಯವಾಗುತ್ತ ಬಂದು, ಯಾಕಸೂಚಕ ಶಬ್ದದಿಂದ : ಹೋಗುವೆನು !' ( ಹೊಗುವೆನು !! ” ಎಂದು ಕೂಗಿ ಕೊಂಡಳು. ಆಗ ಮಂತ್ರವಾದಿಯು ಒಂದು ದೊಡ್ಡ ಕೊಡದಲ್ಲಿ ತುಂಬಾ ನೀರು ಬೇಕೆಂದನು. ಕೊಡದಲ್ಲಿ ನೀರನ್ನು ತಂದಿಟ್ಟರು. ಆ ನೀರು ತುಂಬಿದ್ದ ಕೊಡವನ್ನು ಹಲ್ಲಿನಿಂದ ಕಚ್ಚಿಕೊಂಡು ಹೋಗೆಂದು ಮಂತ್ರವಾದಿಯು ಅಪ್ಪಣೆ ಮಾಡಿದನು. ರೋಗಿಯು ನಮ್ಮೆಲ್ಲರ ಇದಿರಿಗೆ ತುಂಬಿದ್ದ ಕೊಡವನ್ನು ಕೈಯಿಂದ ಮುಟ್ಟದೆ, ಮುಂದಿನ ಹಲ್ಲುಗಳಿಂದ ಕಚ್ಚಿ ಎತ್ತಿಕೊಂಡು, ಮನೆಯ ಬಾಗಿಲಿನ ಹೊರಕ್ಕೆ ತೆಗೆದು ಕೊಂಡು ಹೋದಳು. ಅಲ್ಲಿ ಕೊಡವನ್ನು ನೆಲದಮೇಲೆ ಇಟ್ಟು ರೋಗಿಯು ಅಜ್ಞಾನ ೪ಾಗಿ, ನೆಲದಮೇಲೆ ಬಿದ್ದು ಬಿಟ್ಟಳು. ನಾವು ಬಹಳ ಪ್ರಯಾಸಪಟ್ಟು, ಅವಳಿಗೆ ತಿಳಿವು ಬರುವ ಹಾಗೆ ಮಾಡಿದೆವು. ಆಗವಳು ಹಿಂದೂಗಳ ಮನೆಯ ಸೊಸೆಯ ಹಾಗೆ ಮುಖಕ್ಕೆ ಗೋಷೆಬಟ್ಟೆಯನ್ನು ಹಾಕಿಕೊಂಡು, ಲಜ್ಜೆಯಿಂದ ಒಂದು ಸ್ಥಳದಲ್ಲಿ ಸುಮ್ಮನೆ ಕುಳಿತುಕೊಂಡಳು. ಭೂತವು ಬಿಟ್ಟು ಹೋಯಿತೆಂದು ನಾವೆಲ್ಲರೂ ಮಹಾ ನಂದದಿಂದ ಮಂತ್ರವಾದಿಗೆ ಯಥೋಚಿತ ಪುರಸ್ಕಾರವನ್ನು ಕೊಟ್ಟು ಕಳುಹಿಸಿದೆವು. ಆದರೆ ಸಾಯಂಕಾಲವಾದಮೇಲೆ ಮತ್ತೊಂದು ರಗಳೆಯುಂಟಾಯಿತು. ನಾನು ಮನೆ ಯೊಳಕ್ಕೆ ಪ್ರವೇಶಮಾಡಿದನು. ಆ ಕೂಡಲೇ ವಿನೋದಿನಿಯು ವಿಕಟಾಕಾರವಾಗಿ ನಕ್ಕಳು. ಆ ನಗುವಿನಿಂದ ಮನೆಯೆಲ್ಲಾ ಪ್ರತಿಧ್ವನಿತವಾಯಿತು. ಅಂತಹ ಭಯಂಕರ ವಾದ ನಗುವನ್ನು ನಾನು ಹುಟ್ಟಿದಮೇಲೆ ಕೇಳಿರಲಿಲ್ಲ. ಆ ನಗುವನ್ನು ಕೇಳಿ, ನನ್ನ ಪ್ರಾಣವು ನಡುಗಿ ಹೋಯಿತು. ನಾನು ಭಯದಿಂದ ಪು 48 ಮನೆಯೊಳಗೆ ಹೋಗ ಲಿಲ್ಲ. ನಾನು ಮನೆಯೊಳಗಿನಿಂದ ಹೊರಕ್ಕೆ ಬಂದೆನೋ ಇಲ್ಲವೋ, ಅಷ್ಟರೊಳಗೆ