ಪುಟ:ಉನ್ಮಾದಿನಿ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉನ್ಮಾದಿನೀ ಜ್ಯೋತಿ:-( ಆ ವಿಚಾರವನ್ನು ಕುರಿತು ನಿನ್ನೊಡನೆ ಕಡೆಗೆ ತರ್ಕಮಾಡು ವನು. ಈಗ ರೋಗವು ಹೋಗಿ ಹೇಗೆ ಆರೋಗ್ಯವಾಗಬೇಕೋ, ಅದರ ವ್ಯವಸ್ಥೆ ಯನ್ನು ಮಾಡು.” ನರೇಂದ್ರ :- ಬಹಳ ಪ್ರಯಾಸಪಟ್ಟರೆ, ಈ ರೋಗವು ಆರೋಗ್ಯವಾಗು ವುದು ; ಆದರೆ ಬೇಗನೆ ಆರೋಗ್ಯವಾಗದು ; ಸಾವಕಾಶ ಬೇಕು. ನಾನು ಕೊಡುವ ಔಷಧವನ್ನು ಸೇವಿಸಬೇಕು ; ನಿಯಮಿತ ಆಹಾರವೂ ರಾತ್ರಿ ಸರಿಯಾದ ನಿದ್ರೆಯ ಇದಕ್ಕೆ ಏರ್ಪಾಟಾಗಬೇಕು. ಈ ಪ್ರಕಾರ ಮತ್ತು ನಾಲ್ಕು ತಿಂಗಳು ಮಾಡಿದರೆ, ಆರೋಗ್ಯಲಾಭವುಂಟಾಗಓಹುದು. ಜ್ಯೋತಿ :- ನಾನು ಹತ್ತಿರ ಹೋದರೆ, ಗವು ಹೆಚ್ಚುವುದು. ಹೀಗಿರು ವಾಗ ನಾನು ಅವಳ ಹತ್ತಿರ ಹೋಗುವುದುಚಶವೆ ? ” ನಗೇಂದ್ರ :- ಹಾಗಾದರೆ ಹೋಗದಿರುವುದೇ ಒಳ್ಳೆಯದು, ನಾನು ಹೇಳುವ ಹಾಗೆ ವ್ಯವಸ್ಥೆ ಮಾಡಿದರೆ ಸಾಕು. ಹೀಗೆಂದು ಹೇಳಿ, ಡಾಕ್ಟರನು ಔಷಧಕ್ಕೆ ಚೀಟಿಯನ್ನು ಬರೆದು ಕೊಟ್ಟು ಹೊರಟುಹೋದನು. ಜೋತಿಪ್ರಕಾಶನು ಔಸಧವನ್ನು ತರಿಸುವುದಕ್ಕೆ ಜನರನ್ನು ಕಳುಹಿಸಿದನು. ಐದನೆಯ ಪರಿಚ್ಛೇದ. ವಿನೋದಿನಿಯ ಆಲಸ್ಯದ ಸಮಾಚಾರವು ಆಕೆಯ ತಂದೆಯಾದ ನವೀನಗೋಪಾಲ ನಿಗೂ, ಆಕೆಯ ತಾಯಿಯಾದ ಹೈಮವತಿಗೂ ಮುಟ್ಟಿತು. ಆ ಭಯಂಕರ ವಾದ ಸಮಾಚಾರದಿಂದ ಅವರಿಗೂ ಹರ್ಷದಲ್ಲಿ ವಿವಾದವುಂಟಾಯಿತು. ಅವರು ಮರಾ ಹಶರಾಗಿ ಮಗಳನ್ನು ನೋಡುವುದಕ್ಕೆ ಬಂದರು. ಅವರು ಬಂದ ಸಮಯದಲ್ಲಿ ಕೊಟ್ಟಡಿ ಯಲ್ಲಿ ಬೀಗವನ್ನು ಹಾಕಿ ಇಡಲ್ಪಟ್ಟಿದ್ದ ವಿನೋದಿನಿಯು ತೆರೆದಿದ್ದ ಕಿಟಿಕೆಯಲ್ಲಿ ನಿಂತು ಕೊಂದು ಮೊಳಕಾಲಿನವರೆಗೆ ಕೆದರಿ ಹಾರಾಡುತ್ತಲಿದ್ದ ತೈಲಹೀನವಾದ ಕೂದಲುಳ್ಳವ Wh, ಹುಚ್ಚಿಯಹಾಗೆ ಮಾಡುತಲಿದ್ದಳು :