ಪುಟ:ಉನ್ಮಾದಿನಿ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಐದನೆಯ ಚರಿಳ್ಳದೆ ಜ್ಯೋತಿಪ್ರಕಾಶನು ಪುನಃ ನವೀನಗೋಪಾಲನ ಮುಖವನ್ನು ನೋಡಿದನು. ನವೀನಗೋಪಾಲನು ಮೊದಲಿನ ಹಾಗೆ ವಿಷಣ್ಣವದನನಾಗಿ, ಉನ್ಮಾದಿನಿಯ ಪ್ರಲಾಪ ವಂದನು, ಈ ಸಮಯದಲ್ಲಿ ನರೇಂದ್ರನಾಥನು ಅಲ್ಲಿಗೆ ಬಂದನು. ಡಾಕ್ಟರನನ್ನು ನೋಡಿ, ಉನ್ಮಾದಿನಿಯು ಮುಖಪರದೆಯನ್ನು ಎಳೆದುಕೊಂಡು, ಲಜ್ಜೆಯಿಂದ ತರಬದ ಸವರಿಸಿ ಕೊಂಡಳು. ಅನಂತರ ಒತ್ತಟ್ಟಿಗೆ ನಿಂತುಕೊಂಡು ಅಸ್ಪುಟಸ್ವರದಿಂದ, 11 ಇದೇನ ಶಾಚಿಕೆಗೇಡು ಬಂದಿರುವರು ! ನಾನು ಇನ್ನು ಮಾತನಾಡುವುದುಟಿ ? ” ಎಂದೆಂದು ಇಂಡಳು, ಹೀಗೆ ಹೇಳಿಕೊಂಡು ಉನ್ಮಾದಿನಿಯು ಉಸಿರದೆ ಒತ್ತಟ್ಟಿಗೆ ಸ್ವಲ್ಪ ಹೊತ್ತು ನಿಂತಿದ್ದಳು. ಪುನಃ ಅದೇ ಲಜ್ಞಾಭಾವದಿಂದ, ಎಲ್ಲಿಗೆ ಹೋಗಲೆ ? ಯಾರೂ ಸ್ವಲ್ಪ ಕೂತುಕೊಳ್ಳುವ ಹಾಗೆ ಹೇಳಲಿಲ್ಲವೆ? ಎಷ್ಟು ಯುಗಾಂತರದ ಮೇಲೆ ಬಂದರೆ, ಅವರಿಗೆ ಸ್ವಲ್ಪವೂ ಆದರ ತೋರಿಸಬೇಡವೇನೆ ? ” ಎಂದು ಹೇಳಿದಳು, ಪರಿಚಾರಿಕೆ :-ಅವರು ಡಾಕ್ಟರ ಬಾಬು ; ನಿನ್ನನ್ನು ನೋಡುವುದಕ್ಕೆ ಬಂದಿರು ವರು, ತಾಯಿ !!! ಇದನ್ನು ಕೇಳಿ ಉನ್ಮಾದಿನಿಯು ಅವಕುಂಠನದ ಬಟ್ಟೆಯನ್ನು ತೆಗೆದು ದೂರ ಬಿಸುಟು, 1 ಡಾಕ್ಟರ ಬಾಬು | ನಿಮ್ಮಲ್ಲಿ ವಿಷವಿರುವುದೇ ? ನಿಮ್ಮ ಬೇರೆ ಔಷಧವನ್ನು ನಾನು ತೆಗೆದುಕೊಳ್ಳುವುದಿಲ್ಲ. ನನಗೆ ವಿಷದ ಔಷಧವನ್ನು ಕೊಡಿರಿ, ದೊಡ್ಡ ಮಾತ್ರೆ ಯನ್ನು ಮಾಡಿಕೊಡಿರಿ” ಎಂದಳು. ಡಾಕ್ಟರ :- ನೀನು ವಿಷದ ಔಷಧವನ್ನು ತಿನ್ನಲೇಕೆ ? ಉನ್ಮಾದಿನಿ:=It ಬಹಳ ಉರಿ ಬಹಳ ಯಾತನೆ-ಪ್ರಾಣಜ್ವಾಲೆ ತಲೆಯ ಉರಿ!!! ಎಲ್ಲಾ ಜ್ವಲಿಸಿಹೋಗಿದೆ ; ಜ್ವಲಿಸಿ ಸುಟ್ಟು ಬೂದಿಯಾಗಿ ಹೋಗಿದೆ!!! ಡಾಕ್ಟರು :yll ಒಳ್ಳೆಯದು, ನಾನು ಅವೆಲ್ಲಾ ಸರಿಯಾಗುವ ಹಾಗೆ ಮಾಡುವೆನು, ಉನ್ಮಾದಿನಿಯು ಈ ಮಾತನ್ನು ಕೇಳಿ ಉನ್ಮತ್ತಭಾವದಿಂದ ಚೀತ್ಕಾರಮಾಡುತ್ತ, ನೀನು.ಎಲ್ಲಾ ಸರಿಯಾಗುವಹಾಗೆ ಮಾಡುವೆಯಾ ? ಔಷಧದಿಂದ ಸಾಗದು ; ನಿನ್ನ ಔಷಧ ಪ್ರಯೋಜನವಿಲ್ಲ. ಅವರನ್ನು ಕರೆದುಕೊಂಡು ಬಾ ! ನನ್ನ ಜ್ವಾಲೆಯೆಲ್ಲಾ ತಣ್ಣಗnುವದು ” ಎಂದಳು,