ಪುಟ:ಉನ್ಮಾದಿನಿ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಈ ಸಮಾಚಾರವನ್ನು ಕೇಳುತ್ತಲೇ, ತಕtFಲಂಕಾರ ಮಹಾಶಯನು ಅಲಹಾ ಬಾದಿಗೆ ಖಗೇಂದ್ರನಾಥನಿಗೆ ಸಮಾಭಾರವನ್ನೆಲ್ಲಾ ವಿವರಿಸಿ, ಒಂದು ಕಾಗದವನ್ನು ಬರೆದು ಕಳುಹಿಸಿದನು. ಖಗೇಂದ್ರನಾಥನು ಕಾಗದವನ್ನು ನೋಡಿದೊಡನೆ, ಅಲಹಾ ಬಾದಿನಿಂದ ಮೂರು ದಿನಗಳೊಳಗೆ ಮಹೇಶಪುರಕ್ಕೆ ಬಂದು, ಅಲ್ಲಿ ತರ್ಕಲಂಕಾರ ಕುಹಾಶಯನನ್ನು ನೋಡಿ «« ಮಹಾಶಯರೇ ! ನನ್ನ ಜೀವನ ಮರಣಗಳೆರಡೂ ತಮ್ಮ ಕೈಯಲ್ಲಿರುವುದು ತಮ್ಮನ್ನು ಹೊರತು, ನನ್ನ ವಿವಾಹಸಮಾಚಾರವನ್ನು ಮತ್ತಾರೂ ಅರಿಯರು. ತಾವು ನನ್ನನ್ನು ಬದುಕಿಸಬೇಕು” ಎಂದು ಹೇಳಿದನು. ಶರ್ಕಲಂಕಾರ (ನಗು):-~It ಅದಕ್ಕೋಸ್ಕರ ಯೋಚನೆ ಪಡಲೇಕೆ ? ನಿನ್ನ ವಿವಾಹವನ್ನು ಕುರಿತು ನಾನು ಮುಖ್ಯ ಸಾಕ್ಷಿಯಾಗಿರುವೆನು. ಅದಲ್ಲದೆ ನನ್ನಲ್ಲಿ ಬೇರೆ ಸಾಕ್ಷ್ಯವೂ ಇರುವುದು. ನಾನು ಸಮಯದಲ್ಲಿರದೆ ಇದ್ದುದಕ್ಕೋಸ್ಕರ ಬಹಳ ನಾಚಿಕೆಯುಳ್ಳವನಾಗಿರುವನು. ಚಿಂತೆಯಿಲ್ಲ; ಇದೇ ಊಟವಾದ ನಂತರ ನಾವಿಬ್ಬರೂ ಕಲಿಕತ್ತೆಗೆ ಹೋಗಿ ಅಲ್ಲಿ ನವೀನಗೋಪಾಲನಿಗೆ ನಡೆದಿರುವ ವಿಚಾರವ ಇಲಿ ವಿವರವಾಗಿ ತಿಳಿಸುವ - ಆ ದಿನ ಊಟವಾದ ಮೇಲೆ ತರ್ಕಾಲಂಕಾರ ಮಹಾಶಯನು ಖಗೇಂದ್ರನನ್ನು ಸಂಗಡ ಕರೆದುಕೊಂಡು ಕಲಿಕತ್ತೆಗೆ ಹೊರಟನು. ಅವರಿಬ್ಬರೂ ಆ ದಿನ ರಾತ್ರಿಯ ಕಲಿಕತ್ತೆಗೆ ಮುಟ್ಟಿದರು. ಆ ರಾತ್ರಿ ನವೀನಗೋಪಾಲನು ಇರುವ ಸ್ಥಳವು ಗೊತ್ತಾ ಗಲಿಲ್ಲ. ತರ್ಕಾಲಂಕಾರ ಮಹಾಶಯನು ಆ ರಾತ್ರಿ ಬಬ್ಬ ಶಿಷ್ಯನ ಮನೆಯಲ್ಲಿ ಉಳ ಕಂಡನು. ಮಾರನೆಯ ದಿನ ಪ್ರಾತಃಕಾಲದಲ್ಲಿ ಎದ್ದು, ಖಗೇಂದ್ರನೊಡನೆ ಹೋಗಿ, ನವೀನಗೋಪಾಲನನ್ನು ನೋಡಿದನು. ಆತನಿಗೂ ನವೀನಗೋಪಾಲನಿಗೂ ಪೂರ್ವಪರಿ ಚಯವಿರಲಿಲ್ಲ, ತರ್ಕಾಲಂಕಾರ ಮಹಾಶಯನು ಮೊದಲು ತನ್ನ ಸ್ವಂತ ಪರಿಚಯ ವನ್ನು ಹೇಳಿಕೊಂಡನು. ಅದಕ್ಕ ನವೀನಗೊಪಾಲನು, “ ನಾನು ತಮ್ಮ ಸೋದರಮಾವಂದಿರನ್ನು ಬಲ್ಲೆನು. ಆದರೆ ತಮ್ಮನ್ನು ಯಾವಾಗ ನೋಡಿದ ನೆನಪಿಲ್ಲ” ಎಂದು ಹೇಳಿದನು. ತರ್ಕಲಂಕಾರ:-II ಮೊದಲು ನಾನು ನಮ್ಮ ಮಾವಂದಿರ ಮನೆಯಲ್ಲಿ ಇರುತ್ತಿರಲಿಲ್ಲ. ಈಗ ಅವರು ಸ್ವರ್ಗಸ್ಥರಾದರು. ಅವರಿಗೆ ಸಂತಾನಸಂತತಿ ಇಲ್ಲ ದುದ ರಿಂದ ಅವರ ಆಸ್ತಿಗೆ ನಾನೇ ಬಾಧ್ಯನಾದೆನು, ಅದುಕಾರಣ ನಾನೇ ತಮ್ಮ ಕುಲ