ಪುಟ:ಉನ್ಮಾದಿನಿ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉನಾದಿಸಿ AyyayyvvvvvvvvvvvvvvvvvvvvvvYhYMJyAyyyy ತರ್ಕಾಲಂಕಾರ:- ನನಲ್ಲಿ ಬೇರೆ ಪ್ರಮಾಣವೂ ಉಂಟು. ನೀವು ನಿಮ್ಮ ಅಣ್ಣಂದಿರ ಕೈಬರಹವನ್ನು ನೋಡಿದರೆ ಗುರುತಿಸುವಿರಿ ? ? ನವೀನಗೊಪಾಲ-1 ಚೆನ್ನಾಗಿ ಗುರುತಿಸುವನು.” ತರ್ಕಾಲಂಕಾರ:- ಹಾಗಾದರೆ ಈ ಕಾಗದವನ್ನು ಓದಿರಿ.” ಹೀಗೆಂದು ಹೇಳಿ, ತರ್ಕಾಲಂಕರನು ಒಂದು ಕಾಗದವನ್ನು ನವೀನಗೋಪಾಲ ನಿಗೆ ಕೊಟ್ಟನು, ನವೀನಗೊಪಾಲನು ಕಂಪಿತ ಹೃದಯನಾಗಿ, ಆ ಕಾಗದವನ್ನು ಓದಲಾರಂಭಿಸಿದನು. ಆಗದವು ಈ ಪರಿಯಾಗಿತ್ತು: ಈ ಕಲ್ಯಾಣ ರೇಷ ಈ ಕಾಗದವ ನನ್ನ ಮರಣಾನಂತರ ನಿನಗೆ ಮುಟ್ಟುವ ಹಾಗೆ ಏರ್ಪಾಡುಮಾಡಿರುವನು. ಏಕೆಂದರೆ, ಈ ಕಾಗದದಲ್ಲಿ ಬರೆದಿರುವ ಸಮಾಚಾರವು ನಿನಗೆ ಪ್ರೀತಿಕರವಾಗಿ ಇರದು, ನಾನು ನಿನ್ನನ್ನು ಎಷ್ಟರಮಟ್ಟಿಗೆ ಪ್ರೀತಿಸುವೆನೆಂಬುದನ್ನು ಈ ಕಾಲದಲ್ಲಿ ಬರೆಯುವುದಕ್ಕೆ ಇಷ್ಟವುಳ್ಳವನಾಗಿಲ್ಲ. ನಾನು ಬದುಕಿರುವ ಕಾಲದಲ್ಲಿ ನಿನಗೂ ನನಗೂ ವೈಮನಸ್ಸಾಗದಿರುವುದೊಂದೇ ನನಗೆ ಇಷ್ಟವಾದುದು. ಅದು ಸಲುವಾಗಿ ನಿನಗೆ ಒಂದು ಕೆಲಸವನ್ನು ತಿಳಿಸದೆ ನಡೆಯಿಸಿರುವೆನು, ಆ ಕಲಸವೇನೆಂದರೆ, ನಾನು ಗೋಪ್ಯ ವಾಗಿ ನಿನ್ನ ಮಗಳಿಗೆ ಹಿಂದೂ ಮತಾನುಸಾರವಾಗಿ ಮದುವೆಮಾಡಿರುವೆನು, ಮಗಳು ನಿನ್ನವಳಾದರೂ, ನಾನು ದುರ್ಗಾವತಿಯನ್ನು ಪ್ರೀತಿಸುತ್ತಲಿದ್ದನೆಂಬುದನ್ನು ನೀನು ಚನ್ನಾಗಿ ಬಲ್ಲಿ, ನನ್ನ ಮತದ ನಂಟು ಗೆಯ ಪ್ರಕಾರ ನಾನು ಈ ಕಾರ್ಯವನ್ನು ಸರಿಯಾಗಿಯೇ ಮಾಡಿರುವನು, ಈ ಕಾರ್ಯವನ್ನು ಕುರಿತು ನೀನು ಸಂತುಷ್ಟನಾದರೂ ಅಥವಾ ಆಸಂತುಷ್ಟನಾದರೂ, ನಾನದನ್ನು ನೋಡುವುದಕ್ಕೆ ಪುನಃ ಬರಲಾ ರನು ನಾನು ದುರ್ಗಾವತಿಯನ್ನು ಯಾವ ಪಾತ್ರನಿಗೆ ಕೊಟ್ಟಿರುವನೋ, ಆತನೊಡಗೂಡಿ ಆಕಯು ಸುಖಿಯಾಗಿರುವಳೆಂದು ನಾನು ದೃಢವಾಗಿ ನಂಬಿರುವೆನು. ನಾನು ದುರ್ಗಾಯನ್ನು ಆಕೆಯು ವರನಿಗೆ ಕೊಟ್ಟು ಮದುವೆಮಾಡುವೆನೆಂದು ತಿಳಿದು ನೀನೂ ಸುಖಿಯಾಗುವ, ವರನು ನನಗೆ ಪರಮಪ್ಪ ಮಿತ್ರನಾದ ಅಶುತೋಷ ಬಾಬುವಿನ ಮಗನಾಗಬೇಕುಅವನ ಹೆಸರು - ಖಗೇಂದ್ರನಾಥ, ' ನಿನ್ನ ಇಷ್ಟಕ್ಕೆ ಏರೋಧವಾಗಿ ಮದುವೆ ಮಾಡಿರುವ ತಪ್ಪು ನನ್ನ ತಪ್ಪಾಗಿರುವುದು, ನಾನು ನಿನಗೆ ಜೀವ ಸದರನೆಂಬುದು ಮೇಲೆ, ನೀನು ಖತಿಗೊಳ್ಳಬೇದ ನೀನು ನಿನ್ನ ಮಗಳಿಗೂ ಅಳಿಯನಿಗೂ ಆಕೀ Bದ ಮಾಡಬೇಕೆಂದು ನಾನು ಕೋರುವನು. ಈ ಕಾಗದವನ್ನು ತರುವ ತರ್ಕಾಲಂಕಾರಮಹಾಶಯರು, ಆವರಲ್ಲದಿದ್ದರೆ, ಅವರ ಪ್ರತಿನಿಧಿಯು, ಅವರ ಹರತು ಮತ್ತಾರೂ ಈ ವಿವಾಹದ ವಿಚಾರವನ್ನರಿಯರು. ನೀನೇನಾದರೂ ಕೇಳಿದರೆ, ಅದಕ್ಕೆ ಅವರು ಉತ್ತರವನ್ನು ಕೊಡುವರು. ಈ ಆಶೀರ್ವಾದ ಯಮಗಳು , 9