ಪುಟ:ಉನ್ಮಾದಿನಿ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆರನೆಯ ಪರಿಚ್ಛೇದ ಈ ಸಮಯದಲ್ಲಿ ಖಗೇಂದ್ರನ ಮನಸ್ಸಿನಲ್ಲಿ ಏನಾಗುತ್ತಲಿತ್ತೊ, ಆದನ್ನು ತಾವು ಬಣ್ಣಿಸಲಾರೆವು. ಅವನು ಮನದಲ್ಲಿ, ಇಷ್ಟು ದಿನದಮೇಲೆ ದುರ್ಗಾವತಿಯನ್ನು ಹೊಂದಿ ಎಷ್ಟೊ ಆನಂದಿತನಾಗುವೆನೆಂದು ಕಲ್ಪಿಸಿಕೊಂಡಿದ್ದನು. ಅದೆಲ್ಲಾ ಬೇರ್ಪಟ್ಟು ಹೋಗಿ, ಈ ಭಯಂಕರ ಸಮಾಚಾರ ; ಸಮಾಚಾರವಾದರೋ, ಮನವು ಅದನ್ನು ಧಾರಣೆ ಮಾಡಲಾರದು, ಕಣ್ಣಾರೆ ಕಂಡರೂ ಹಠಾತ್ತಾಗಿ ನಂಬಲು ಯೋಗ್ಯವಾಗಿರ ಲಿಲ್ಲ. ಅವನು ಹೆಚ್ಚು ಬೆಳಂಬದಿಂದ ಮನಸ್ಸಿನಲ್ಲಿ : ಇದು ಕನಸೋ ಅಥವಾ ದಿಟವೋ ” ಎಂದು ಭ್ರಮಿಸುತ್ತಲಿದ್ದನು. ಕನಸೇ ಆಗಲಿ, ದಿಟರೇ ಆಗಲಿ, ಖಗೇಂದ್ರನು ಬೆಳಿಡುತ್ತ, ಮರ್ಮಾಂತಿಕ ವಾದ ಯಾತನೆಯಿಂದ ಬೆದರಿದ ಮನಸ್ಸುಳ್ಳವನಾದನು: ಬಾಯಿಯಲ್ಲಿ ಮಾತು ಹೊರ ಡದು. ಆದರೆ ಮನಸ್ಸಿನಲ್ಲಿ ಭೀಷಣವಾದ ಬೆಂಕಿಯು ಹತ್ತಿ ಉರಿಯುತ್ತಲಿತ್ತು, ದುರ್ಗಾವತಿಗೆ ಹುಚ್ಚು ಹಿಡಿದಿದೆ ಎಂಬ ಸಮಾಚಾರವನ್ನು ಕೇಳಿ, ಈ ಕಾರ್ಯವು ಅವಳ ಇಷ್ಟಕ್ಕೆ ವಿರೋಧವಾಗಿ ಪಡೆದಿರಬೇಕೆಂದು ನಂಬುಗೆ ಉಂಟಾಯಿತು. ಆಗ ಅವನಿಗೆ ಕ್ರೋಧ ಹುಟ್ಟಿ, ಸರ್ವಶರೀರವೂ ಹೆಚ್ಚು ಉರಿಯಲಾರಂಭವಾಯಿತು, ಅವನು ಸಹಿಸಲಸದಳವಾದ ಈJಪದಿಂದ, ತಾವು ಇ೦ತಹ ಕೆಟ್ಟ ಕೆಲಸವನ್ನು ಏಕೆ ಮಾಡಿದಿರಿ ? ' ಎಂದು ಕೇಳಿದನು. ಖಗೇಂದ್ರನಾಧನ ಈ ಪ್ರಕಾರವಾದ ಕೊಧಯುಕ್ತವಾದ ಮಾತನ್ನು ಕೇಳಿ, ನವೀನಗೋಪಾಲನ ದೃಷ್ಟಿಯು ಅವನಮೇಲೆ ಬಿತ್ತು, ಅವನನ್ನು ಕುರಿತು ನಾಲ್ಕಾರು ಮಾತುಗಳನ್ನು ಹೇಳಬೇಕೆಂದು ನವೀನಗೋಪಾಲನಿಗೆ ಇಷ್ಟವುಂಟಾಯಿತು. ಆದರೆ ಖಗೇಂದ್ರನು ಆ ಕಾಲದಲ್ಲಿ ತಾಳಿದ್ದ ಮರ್ತಿಯನ್ನು ನೋಡಿ, ಮನಸ್ಸಿನಲ್ಲಿ ಭೀತಿ ಗೊಂಡು, ಧೀರಭಾವದಿಂದ, ನಾನು ಅಂತಹ ಕೆಟ್ಟ ಕೆಲಸವನ್ನು ಮಾಡಿಲ್ಲ. ನನ್ನ ಸ್ವಂತ ಮಗಳಿಗೆ ಮದುವೆಮಾಡಿದೆನು. ಇದು ಕೆಟ್ಟ ಕೆಲಸದುದು ಹೇಗೆ ? : ಎಂರ್ದು. ಖಗೇಂದ್ರನಾಥನು ಪುನಃ ಉತ್ತೇಜಿತ ಸ್ವರದಿಂದ, 14 ನೀವು ನಿಮ್ಮ ಮದುವೆ ಯಾಗಿದ್ದ ಹೆಣ್ಣಿಗೆ ಮದುವೆಮಾಡಿರುವಿರಿ !! ” ಎಂದನು. ನವೀನಗೋಪಾಲನ್ನು ಪುನಃ ಧೀರಭಾವದಿಂದ, 1 ಆ ಪೂರ್ವ ವಿವಾದವಾ ದುದು ನನಗೆ ತಿಳಿದಿದ್ದರೆ, ಈ ಕಾರ್ಯವು ನಡೆಯದಿರುವ ಸಂಭವವು ಇಂದು ತೋರುವುದು. ಆದರೆ ನಾನೇನು ಮಾಡಲಿ ? ಎಲ್ಲವೂ ಈಶ್ವರೇಣ್ಣೆ ! ” ಎಂದನು. ವ