ಪುಟ:ಉನ್ಮಾದಿನಿ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

38 ಉನ್ಮಾದಿನೀ A ನವೀನಗೋಪಾಲನು ಹೆಂಡತಿಯ ಮಾತಿಗೆ ಸ್ವಲ್ಪ ಬೇಸರಗೊಂಡು, « ಹೋಗಲಿ, ಹೆಸರಿನಲ್ಲಿ ಏನೂ ಬರುವುದಿಲ್ಲ. ಈಗ ನನಗೆ ಬಹಳ ಅನುತಾಪವುಂಟಾ ಗಿರುವುದು. ಡಾಕ್ಟರ್ ನರೇಂದ್ರಬಾಬುವು ದುರ್ಗಾವತಿಯ ತಲೆಯ ಮಿದುಳು ಹೆಚ್ಚು ಆನಂದದಿಂದ ವಿಕೃತವಾಯಿತೆಂದು ಹೇಳಿದ್ದನು, ಅದು ತಪ್ಪು ; ದುರ್ಗಾವ ತಿಗೆ ಮರ್ಮಾಂತಿಕವಾದ ಮನೋಕಷ್ಟವುಂಟಾಗಿ, ಅವಳು ಉನ್ಮಾದಗ್ರಸ್ತೆಯಾಗಿರು ವಳು. ಮೊದಲು ನಮ್ಮ ಅಣ್ಣಂದಿರು ಅವಳಿಗೆ ಹಿಂದೂಮತದಪ್ರಕಾರ ವಿವಾಹವನ್ನು ಮಾಡಿದ್ದರು. ನಾವು ಪುನಃ ಅವಳಿಗೆ ನಮ್ಮ ಬ್ರಹ್ಮ ತಕ್ಕನುಗುಣವಾಗಿ ಮದುವೆ ಮಾಡಿದೆವು ” ಎಂದನು. ಮಲಗಿದ್ದ ಹೈಮವತಿಯು ನವೀನಗೋಪಾಲನ ಮಾತು ಕಿವಿಗೆ ಬಿದ್ದ ನಿಮಿಷ ದಲ್ಲಿ ಹಠಾತ್ತಾಗಿ ಎದ್ದು ಕುಳಿತುಕೊಂಡಳು. ತಕ್ಷಣದಲ್ಲಿ ಹೆಚ್ಚು ಅಚ್ಚರಿಯಿಂದ, ಅದೇನು ? ನಮ್ಮ ಮಗಳಿಗೆ ಹಿಂದೂಮತದ ಪ್ರಕಾರ ಮದುವೆಯೇ ? ಬಾಯಿಬಿಡ ಬೇಡ ! ಇಂತಹ ಮಾತು ನಮ್ಮ ಸಮಾಜದಲ್ಲಿ ಹೊರಬಿದ್ದರೆ, ಏನೆಂದಾರು ? ಸಾಕು ! ಇನ್ನೂ ಆ ಮಾತು ಬೇಡ ! ' ಎಂದಳು. ನವೀನಗೊಪಾಲನು ಹೆಂಡತಿಯ ಮಾತು ಕೇಳಿ ಬೇಸರಗೊಂಡು, «« ಆ ಮಾತನ್ನು ಗುಟ್ಟಾಗಿಡಬೇಕೆಂದು ನಿನಗೇಕಿಷ್ಟು ಅಗಬಾಟಲೆ ? ನಿನಗೆ ಮದುವೆಯಾ ದುದು ಯಾವ ಮತದ ಪ್ರಕಾರ ? ಹಿಂದೂಮತದ ಪ್ರಕಾರವಲ್ಲವೆ? ಈಗ ನಾವು ಮಾಡಿದ ಕೆಲಸ ಎಷ್ಟನರ್ಥಕ್ಕಿಟ್ಟಿ ತೋ ತಿಳಿದಿರುವೆಯಾ ? ಅದನ್ನು ಹೇಳುವುದಕ್ಕೆ ಇಲ್ಲಿಗೆ ಬಂದೆನು ?! ಎಂದನು. ಹೈಮವತಿಯು ಆಶ್ಚರ್ಯಪಟ್ಟು, ಇದರಿಂದ ಕೆಲಸ ಕೆಟ್ಟುದುದೇನು ? ಎಂದಳು. ನವೀನಗೊಪಾಲ :- ನಾವು ಈ ಕೆಲಸವನ್ನು ಮಾಡಿಯೇ ನಮ್ಮ ಮಗ ಳನ್ನು ಉನ್ಮಾದಿನಿಯಾಗಿ ಮಾಡಿದವು. ಅವಳು ಆ ದಿನ ತನ್ನ ಮನಸ್ಸಿನ ಯಾತನೆ ಯಿಂದ ಹೇಳಿದ ಮರ್ಮಸ್ಪರ್ಶಿಯಾದ ಮಾತುಗಳು ನಿನಗೆ ನೆನಪಿಲ್ಲವೆ ? ಅವಳಾಡಿದ ಮಾತುಗಳೆಲ್ಲಾ ಹುಚ್ಚಿಯ ಮರುಳುಮಾತುಗಳೆಂದು ನಾವು ಅಕಡೆ ದೃಷ್ಟಿ ಕೊಡ ಲಿಲ್ಲ. ಎದೆಗೆ ನಾಟುವ ಉನ್ಮಾದಿನಿಯ ಆ ಮಾತುಗಳನ್ನು ಈಗ ನೆನಪಿಗೆ ತಂದು ಕೊಂಡರೆ, ನನ್ನ ಪ್ರಾಣವೇ ಹಾರಿಹೋಗುತ್ತಲಿರುವುದು ಒಳ್ಳೆಯದು, ಮೊದಲು ನಿನಗೆ ಈ ವಿಚಾರವು ಸ್ವಲ್ಪವೂ ಗೊತ್ತಾಗಲಿಲ್ಲವೇ ? ”